Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅವತಾರ್ 2' ವಿಶ್ವದಾದ್ಯಂತ 3 ದಿನದ ಗಳಿಕೆ ₹3,598 ಕೋಟಿ: ಭಾರತದಲ್ಲಿ ಎಷ್ಟು?
ವಿಶ್ವದ ಅತೀ ದುಬಾರಿ ಸಿನಿಮಾ 'ಅವತಾರ್ 2' ಬಿಡುಗಡೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಿಗೆ ಸಕ್ಸಸ್ ಕಾಣುತ್ತಿದೆ.
ಜಗತ್ತಿನ ಶ್ರೇಷ್ಠ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಆಕ್ಷನ್ ಕಟ್ ಹೇಳಿರುವ 'ಅವತಾರ್: ದಿ ವೇ ಆಫ್ ವಾಟರ್' ಕಲೆಕ್ಷನ್ ಜೋರಾಗಿದೆ. ಇದೇ ಡಿಸೆಂಬರ್ 16ರಂದು ರಿಲೀಸ್ ಆಗಿದ್ದ ಸಿನಿಮಾ ಗಳಿಕೆ ವಿಶ್ವದಾದ್ಯಂತ ದಾಖಲೆ ಬರೆಯುತ್ತಿದೆ.
'ಅವತಾರ್
2'
ಅನ್ನು
ಸಿನಿಮಾ
ಎಂದು
ಕರೆಯುವುದೇ
ಅಪರಾಧ:
ಹೀಗಂದಿದ್ಯಾಕೆ
ರಾಮ್
ಗೋಪಾಲ್
ವರ್ಮಾ
ಭಾರತ ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ 'ಅವತಾರ್ 2' ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ವರ್ಲ್ಡ್‌ವೈಡ್ ಕಲೆಕ್ಷನ್ ₹3,598 ಕೋಟಿ ಆಗಿದ್ದರೆ, ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ ಏನು ಕಮ್ಮಿಯಿಲ್ಲ. 'ಅವತಾರ್ 2' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಅವತಾರ್ 2' ಬಾಕ್ಸಾಫೀಸ್ ದರೋಡೆ
ಹಾಲಿವುಡ್ ಸಿನಿಮಾ 'ಅವತಾರ್ 2' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅಮೆರಿಕ, ಚೀನಾ, ವಿಶ್ವದ ಮೂಲೆ ಮೂಲೆಯಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ಹಾಗೇ ಭಾರತದಲ್ಲಿಯೂ ಹಾಲಿವುಡ್ ಸಿನಿಮಾವೊಂದಕ್ಕೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಡಿಸೆಂಬರ್ 16ರಂದು ರಿಲೀಸ್ ಆಗಿದ್ದ 'ಅವತಾರ್ 2' ವಿಶ್ವದಾದ್ಯಂತ ಸುಮಾರು ₹3,598 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ಅಷ್ಟಕ್ಕೂ ಅತೀ ಹೆಚ್ಚು ಗಳಿಕೆ ಕಂಡಿದ್ದು ಎಲ್ಲಿ? ಅನ್ನೋದು ಇಂಟ್ರೆಸ್ಟಿಂಗ್.

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?
ಜೇಮ್ಸ್ ಕ್ಯಾಮರೂನ್ ಬರೋಬ್ಬರಿ 13 ವರ್ಷಗಳ ಬಳಿಕ 'ಅವತಾರ್ 2' ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿತ್ತು. ಉತ್ತರ ಅಮೆರಿಕದಲ್ಲಿ ಸುಮಾರು $134 ಮಿಲಿಯನ್ ಗಳಿಕೆ ಕಂಡಿದೆ. ಅದೇ ಚೀನಾದಲ್ಲಿ $59 ಮಿಲಿಯನ್, ವಿಶ್ವದ ಉಳಿದ ಭಾಗಗಳಲ್ಲಿ $242 ಮಿಲಿಯನ್ ಗಳಿಸಿದೆ. ಒಟ್ಟು ಸಿನಿಮಾದ ಕಲೆಕ್ಷನ್ ಸುಮಾರು 435 ಮಿಲಿಯನ್ ಡಾಲರ್ (ಭಾರತದ ರೂ.ನಲ್ಲಿ ₹3,598 ಕೋಟಿ) ಗಳಿಸಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲಾ ತಿಳಿಸಿದ್ದಾರೆ.

ಭಾರತದಲ್ಲಿ 'ಅವತಾರ್ 2' ಗಳಿಸಿದ್ದೆಷ್ಟು?
'ಅವತಾರ್' ಸಿನಿಮಾ ಭಾರತದಲ್ಲಿ ತೆರೆಕಂಡಾಗಲೂ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ 'ಅವತಾರ್ 2' ತೆರೆಕಂಡಾಗಲೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ಮೂರು ದಿನ ಈ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಲೇ ಇದೆ. ಭಾರತದ ಬಾಕ್ಸಾಫೀಸ್‌ನಲ್ಲಿ ಮೊದಲ ದಿನ 41 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 44 ರಿಂದ 46 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಹಾಗೇ ಮೂರನೇ ದಿನ 49 ಕೋಟಿ ರೂ. ಕಲೆಕ್ಷನ್ ಮಾಡಿದ್ದು, 134 ರಿಂದ 136 ಕೋಟಿ ರೂ. ಗಳಿಕೆ ಕಂಡಿರಬಹುದು ಎಂದು ಹೇಳಲಾಗುತ್ತಿದೆ.

'ಅವೆಂಜರ್ಸ್ ಎಂಡ್ ಗೇಮ್' ಬೀಟ್ ಮಾಡಿಲ್ಲ
'ಅವತಾರ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಹಾಲಿವುಡ್‌ನ ಎರಡನೇ ಸಿನಿಮಾ. ಇದೂವರೆಗೂ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದ್ದು ಹಾಲಿವುಡ್ ಸಿನಿಮಾ 'ಅವೆಂಜರ್ಸ್ ಎಂಡ್ ಗೇಮ್'. ಮೊದಲ ದಿನ ಈ ಸಿನಿಮಾ ಸುಮಾರು 53.10 ಕೋಟಿ ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ 'ಅವತಾರ್ 2' ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.