Just In
Don't Miss!
- News
ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಜಂಗಲ್ ಬುಕ್'
ಡಿಸ್ನಿ ನಿರ್ವಿುತ ರುಡ್ ಯಾರ್ಡ್ ಕ್ಲಿಪ್ಲಿಂಗ್ ಅವರ ಕಥೆ ಆಧಾರಿತ 'ಜಂಗಲ್ಬುಕ್' ಎಂಬ ಹಾಲಿವುಡ್ ಸಿನಿಮಾಗೆ ಬಿಡುಗಡೆ ಆದ ಒಂದೇ ದಿನದಲ್ಲಿ ಭಾರತದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಶೇಷ ದಿನವಾದ ಯುಗಾದಿ ಹಬ್ಬದಂದು (ಏಪ್ರಿಲ್ 8) ಬಿಡುಗಡೆ ಆದ 'ಜಂಗಲ್ ಬುಕ್' ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಬರೋಬ್ಬರಿ 10.09 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ.[ಭಾರತದಲ್ಲಿ ಅಮೆರಿಕಕ್ಕಿಂತಲೂ ಮೊದಲೇ ಜಂಗಲ್ ಬುಕ್ ದರ್ಶನ]
'ಐರನ್ ಮ್ಯಾನ್' ಚಿತ್ರದ ಖ್ಯಾತಿಯ ನಿರ್ದೇಶಕ ಜಾನ್ ಫವ್ರೆಯೂ ಅವರು ನಿರ್ದೇಶನ ಮಾಡಿದ್ದ 'ಜಂಗಲ್ ಬುಕ್' ಸಿನಿಮಾವನ್ನು ಏಪ್ರಿಲ್ 8 ರಂದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಇಡೀ ದೇಶದಾದ್ಯಂತ ಕಡೆ ತೆರೆ ಕಂಡಿದ್ದು, ಮೊದಲ ದಿನವೇ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
2016ರಲ್ಲಿ ಅಕ್ಷಯ್ ಕುಮಾರ್ ಅವರ 'ಏರ್ ಲಿಫ್ಟ್' ಚಿತ್ರದ ನಂತರ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮೊದಲ ದಿನವೇ ಅತ್ಯಂತ ಹೆಚ್ಚು ಹಣ ಬಾಚಿಕೊಂಡ ಚಿತ್ರ ಎಂಬ ಹೆಗ್ಗಳಿಕೆಗೆ 'ಜಂಗಲ್ ಬುಕ್' ಸಿನಿಮಾ ಪಾತ್ರವಾಗಿದೆ.
1894 ರಲ್ಲಿ ರೂಪುಗೊಂಡ ಕಥೆಗೆ ಒಂದು ಹೊಸ ರೂಪು-ರೇಷೆಯನ್ನು ನೀಡಿ ಪ್ರಸ್ತುತಪಡಿಸಿರುವ ಜಾನ್ ಫವ್ರೆಯೂ ಅವರ 'ಜಂಗಲ್ ಬುಕ್' ಸಿನಿಮಾದಲ್ಲಿ ಮೋಗ್ಲಿ ಪಾತ್ರಧಾರಿಯಾಗಿ ಭಾರತ-ಅಮೆರಿಕ ಮೂಲದ ನೀಲ್ ಸೇಥಿ ಎಂಬ ಬಾಲಕ ನಟಿಸಿದ್ದಾನೆ. ಮುಂದಿನ ವಾರ ಈ ಸಿನಿಮಾ ಅಮೆರಿಕದಲ್ಲಿ ಭರ್ಜರಿಯಾಗಿ ತೆರೆ ಕಾಣಲಿದೆ.
'ಜಂಗಲ್ ಬುಕ್' ಚಿತ್ರದ ಫೊಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...