»   » ಭಾರತದಲ್ಲಿ ದಾಖಲೆ: 100 ಕೋಟಿ ಕ್ಲಬ್ ಸೇರಿದ 'ಜಂಗಲ್ ಬುಕ್'

ಭಾರತದಲ್ಲಿ ದಾಖಲೆ: 100 ಕೋಟಿ ಕ್ಲಬ್ ಸೇರಿದ 'ಜಂಗಲ್ ಬುಕ್'

By: ಸೋನು ಗೌಡ
Subscribe to Filmibeat Kannada

'ಐರನ್ ಮ್ಯಾನ್' ಖ್ಯಾತಿಯ ಹಾಲಿವುಡ್ ನಿರ್ದೇಶಕ ಜಾನ್ ಫವ್ರೆಯೂ ಅವರ 1967ರ ಡಿಸ್ನಿ ನಿರ್ವಿುತ ರುಡ್ ಯಾರ್ಡ್ ಕ್ಲಿಪ್ಲಿಂಗ್ ಅವರ ಕಥೆ ಆಧಾರಿತ 'ಜಂಗಲ್​ಬುಕ್' ಚಿತ್ರ ಭಾರತದಲ್ಲಿ ಬಿಡುಗಡೆ ಆದ 10 ದಿನದ ಕಲೆಕ್ಷನ್ 100 ಕೋಟಿ ಕ್ಲಬ್ ಸೇರಿದೆ.

ಅಮೆರಿಕಗಿಂತಲೂ ಒಂದು ವಾರ ಮುಂಚಿತವಾಗಿ ತೆರೆ ಕಂಡ (ಏಪ್ರಿಲ್ 8) 'ದಿ ಜಂಗಲ್ ಬುಕ್' ಸಿನಿಮಾ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ. ಹೌದು ಇದೀಗ 10 ದಿನದಲ್ಲಿ ಸಿನಿಮಾ ಮಾಡಿದ ಕಲೆಕ್ಷನ್ ಬರೋಬ್ಬರಿ 101.82 ಕೋಟಿ ರೂಪಾಯಿ.[ಭಾರತದಾದ್ಯಂತ ಬಾಕ್ಸಾಫೀಸ್ ಧೂಳಿಪಟ ಮಾಡಿದ 'ಜಂಗಲ್ ಬುಕ್']

Hollywood movie 'The Jungle Book' crosses rs.100 crore in india

'ಭಾರತದಲ್ಲಿ 'ದಿ ಜಂಗಲ್ ಬುಕ್' ಚಿತ್ರಕ್ಕೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಗೆ ಸಖತ್ ಥ್ರಿಲ್ಲ್ ಆಗಿದ್ದೇವೆ. ಇದು ಪ್ರತಿ ಕಾಲಕ್ಕೂ ಸಲ್ಲುವ ಕಥೆ, ಪೀಳಿಗೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಾ, ಬೆರಗು ಮೂಡಿಸುತ್ತಾ ಬಂದಿದೆ' ಎಂದು ಡಿಸ್ನಿ ಸ್ಟುಡಿಯೋಸ್ ಭಾರತದ ಉಪಾಧ್ಯಕ್ಷೆ ಅಮೃತಾ ಪಾಂಡೆ ತಿಳಿಸಿದ್ದಾರೆ.[ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಜಂಗಲ್ ಬುಕ್']

ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ತೆರೆ ಕಂಡ 'ದಿ ಜಂಗಲ್ ಬುಕ್' ಚಿತ್ರದಲ್ಲಿ ಮೊಗ್ಲಿ ಪಾತ್ರದಲ್ಲಿ ಅಮೆರಿಕದ ಬಾಲನಟ ನೀಲ್ ಸೇಥಿ ಅವರು ಮಿಂಚಿದ್ದರು. ಹಿಂದಿ ಭಾಷೆಯ ಚಿತ್ರಕ್ಕೆ ಬಾಲಿವುಡ್ ನಟರಾದ ಇರ್ಫಾನ್ ಖಾನ್, ಪ್ರಿಯಾಂಕ ಚೋಪ್ರಾ, ಶೆಫಾಲಿ ಷಾ, ನಾನಾ ಪಾಟೇಕರ್ ಮತ್ತು ಓಂಪುರಿ ಅವರು ಕಂಠದಾನ ಮಾಡಿದ್ದರು.[ಸಾರ್ವಜನಿಕರು ಮನಸ್ಸು ಮಾಡಿದ್ರೆ 'ಜಂಗಲ್ ಬುಕ್' ಕನ್ನಡಕ್ಕೆ ಪಕ್ಕಾ]

Hollywood movie 'The Jungle Book' crosses rs.100 crore in india

ಅಂದಹಾಗೆ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾವೊಂದು ಅತೀ ಕಡಿಮೆ ಸಮಯದಲ್ಲಿ 100 ಕೋಟಿ ಕ್ಲಬ್ ಸೇರಿರುವುದು. ಈ ಹಿಂದೆ ಜೇಮ್ಸ್ ಕ್ಯಾಮರಾನ್ ಅವರ 'ಅವತಾರ್' ಮತ್ತು ವಿನ್ ಡಿಸೇಲ್ ಅವರ 'ಫ್ಯೂರಿಯಸ್ 7' ಚಿತ್ರಗಳು 100 ಕೋಟಿ ಕಲೆಕ್ಷನ್ ಮಾಡಿದ್ದವು.

English summary
Hollywood Director Jon Favreau’s 3D live animation adventure fantasy film 'The Jungle Book'' a modern take on Rudyard Kipling’s timeless classic, originally published in 1967 has entered the coveted Rs.100 crore club in India in just 10 days since its release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada