»   » 'ಐ ನೋ ವಾಟ್ ಯೂ ಡಿಡ್..' ಮತ್ತೆ ತೆರೆಗೆ

'ಐ ನೋ ವಾಟ್ ಯೂ ಡಿಡ್..' ಮತ್ತೆ ತೆರೆಗೆ

Posted By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ನ ಥ್ರಿಲ್ಲರ್ ಸಿನಿಮಾ 'ಐ ನೋ ವಾಟ್ ಯೂ ಡಿಡ್ ಲಾಸ್ಟ್ ಸಮ್ಮರ್' ಚಿತ್ರ ಮತ್ತೊಮ್ಮೆ ತೆರೆಗೆ ಬರಲಿದೆ. ಈ ಸುದ್ದಿ ಕೇಳಿ ಹಾರರ್, ಥ್ರಿಲ್ಲರ್ ಮೂವಿ ಇಷ್ಟಪಡುವ ಅಭಿಮಾನಿಗಳು ಸಕರ್ ಥ್ರಿಲ್ ಆಗಿದ್ದಾರೆ.

ಸೋನಿ ಸಂಸ್ಥೆಯ ನೀಲ್ ಮೊರಿಟ್ಜ್ ಅವರು 1997ರಲ್ಲಿ ತೆರೆಗೆ ತಂದ 'ಐ ನೋ ವಾಟ್ ಯೂ ಡಿಡ್ ಲಾಸ್ಟ್ ಸಮ್ಮರ್' ಚಿತ್ರ ಭಯಾನಕ ಸರಣಿ ಹಂತಕನ ಕಥೆ ಹೇಳುವ ಚಿತ್ರವಾಗಿದೆ. ಈ ಚಿತ್ರ ಇನ್ನಷ್ಟು ಭಯಾನಕ ದೃಶ್ಯಗಳೊಂದಿಗೆ ಮತ್ತೆ ನಿರ್ಮಾಣಗೊಳ್ಳುತ್ತಿದೆ. ಮೊದಲ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ಜೆನ್ನಿಫರ್ ಲವ್ ಹೆವಿಟ್ ಈ ಚಿತ್ರದಲ್ಲೂ ಮುಂದುವರೆಯಲಿದ್ದಾಳೆ.

I Know What You Did Last Summer Thriller To Return On Big Screen

1973ರಲ್ಲಿ ಇದೇ ಹೆಸರಿನಲ್ಲಿ ಲೊಯಿಸ್ ಡಂಕನ್ ಎಂಬ ಲೇಖಕ ಬರೆದ ಕಾದಂಬರಿ ಆಧಾರಿಸಿ 1997ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಹಿಚ್ ಕಾಕ್ ಸರಣಿಗೆ ಕಿಕ್ ನೀಡುವಂತಿದೆ ಎಂದು ಕೆಲವರು ಹೊಗಳಿದ್ದರು. ಆದರೆ, ಅಷ್ಟೇನೂ ಕ್ಲಾಸ್ ಅಲ್ಲದಿದ್ದರೂ ಮಾಸ್ ಆಡಿಯನ್ಸ್ ಮನ ಗೆದ್ದಿತ್ತು.

ವಿಶ್ವದಾದ್ಯಂತ ತೆರೆ ಕಂಡು ಸುಮಾರು 125 ಮಿಲಿಯನ್ ಯುಎಸ್ ಡಾಲರ್ ಬಾಚಿತ್ತು.ಇದಾದ ಮೇಲೆ
I Still Know What You Did Last Summer ಹಾಗೂ 'I'll Always Know What You Did Last Summer'. ಸರಣಿ ಮುಂದುವರೆದಿತ್ತು.

ನಾಲ್ವರು ಯುವ ಜೋಡಿಗಳು ಪಾದಾಚಾರಿಯ ಮೇಲೆ ಕಾರು ಚಲಾಯಿಸಿ ಸಾಯಿಸುತ್ತಾರೆ. ನಂತರ ಮೃತ ದೇಹವನ್ನು ನೀರಿಗೆ ಹಾಕುತ್ತಾರೆ. ಅದರೆ, ಅನಾಮಿಕನೊಬ್ಬನಿಂದ ನಿರಂತರವಾಗಿ ಸಂದೇಶಗಳು ಬರಲಾರಂಭಿಸುತ್ತದೆ. ಎಲ್ಲದರಲ್ಲೂ ಐ ನೋ ವಾಟ್ ಯೂ ಡಿಡ್ ಲಾಸ್ಟ್ ಸಮ್ಮರ್ ಎಂದು ಹಾಕಲಾಗಿರುತ್ತದೆ. ನಂತರ ಹಂತಕ ನಾಲ್ವರು ಗೆಳೆಯರನ್ನು ಕೊಲ್ಲಲು ಸಂಚು ಹೂಡುತ್ತಾನೆ. ಈ ಚಿತ್ರ ಮತ್ತೆ ತೆರೆಗೆ ಬರುತ್ತಿರುವ ಬಗ್ಗೆ ಡೆಡ್ ಲೈನ್.ಕಾಂನಲ್ಲಿ ಮೊದಲಿಗೆ ವರದಿಗಳು ಬಂದಿತ್ತು. ನಂತರ ಈ ಬಗ್ಗೆ ಫ್ಲಾಗನಾನ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದರು.

ಮೊದಲ ಅವೃತ್ತಿಯ ಟ್ರೇಲರ್ ಹೀಗಿತ್ತು:


English summary
Good news for all the 'I Know What You Did Last Summer' movie fans. The thriller movie will be apparently rebooted by the Sony Pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada