For Quick Alerts
  ALLOW NOTIFICATIONS  
  For Daily Alerts

  ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?

  |

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಜಾಕಿ ಚಾನ್. 2016 ರಲ್ಲಿ ಬಿಡುಗಡೆ ಆಗಿದ್ದ ಫೋರ್ಬ್ಸ್ ಪಟ್ಟಿಯ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆವ ವಿಶ್ವದ ಎರಡನೇ ನಟ ಎನಿಸಿಕೊಂಡಿದ್ದರು ಜಾಕಿ.

  ಮಗನ ಹೆಸರಿಗೆ ಆಸ್ತಿ ಬರೆಯದೆ ಚಾರಿಟಿಗೆ ನೀಡಿದ್ಯಾಕೆ ನಟ Jackie Chan | Filmibeat Kannada

  ಜಾಕಿ ಒಟ್ಟು ಆಸ್ತಿ ಮೌಲ್ಯ ಅಂದಾಜು 3000 ಕೋಟಿಗೂ ಹೆಚ್ಚು. ಇಷ್ಟೊಂದು ಆಸ್ತಿ ಹೊಂದಿರುವ ಜಾಕಿ ಸರಳವಾದ ಜೀವನವನ್ನು ಇಷ್ಟಪಡುತ್ತಿದ್ದವರು. ಹೆಚ್ಚು ಐಶಾರಾಮಿತನವನ್ನು ಇಷ್ಟ ಪಡದಿದ್ದ ಜಾಕಿ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ಅಭ್ಯಾಸ ಇಟ್ಟುಕೊಂಡಿದ್ದರು. ಈ ಬಗ್ಗೆ ಸಂದರ್ಶನಗಳಲ್ಲಿಯೂ ಅವರು ಹೇಳಿಕೊಂಡಿದ್ದರು.

  ಹಣದ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರದ ಜಾಕಿ ಚಾನ್ ತಮ್ಮ ಸಾವಿರಾರು ಕೋಟಿ ಆಸ್ತಿಯನ್ನು ತಮ್ಮ ಮಗ ಜಾಯ್ಸಿ ಚಾನ್‌ಗೆ ಕೊಡುತ್ತಿಲ್ಲ. ಹೌದು, ಜಾಕಿ ತಮ್ಮ ಆಸ್ತಿಯನ್ನು ಅನಾಥಾಶ್ರಮಗಳಿಗೆ ಹಾಗೂ ಇನ್ನಿತರೆ ಸಾಮಾಜಿಕ ಕಾರ್ಯ ಮಾಡುವ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಇದಕ್ಕೆ ಕಾರಣವನ್ನು ನೀಡಿದ್ದಾರೆ ಜಾಕಿ.

  ತಾವು ತಮ್ಮ ಆಸ್ತಿಯನ್ನು ದಾನ ನೀಡುವ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಮತ್ತೆ ಇದೇ ಮಾತನ್ನು ಹೇಳಿದ್ದಾರೆ. 'ನನ್ನ ಮಗ ಉತ್ತಮನಾಗಿದ್ದರೆ ಅವನ ಹಣವನ್ನು ಅವನೇ ದುಡಿದುಕೊಳ್ಳುತ್ತಾನೆ. ಒಂದು ವೇಳೆ ಅಪ್ರಯೋಜಕನಾಗಿದ್ದರೆ ನನ್ನ ಕಷ್ಟದ ದುಡಿಮೆಯನ್ನು ಹಾಳು ಮಾಡುತ್ತಾನೆ' ಎಂದಿದ್ದರು.

  ಜಾಕಿ ಚಾನ್ ಅವರ ಮಗ ಜೇಯ್ಸಿ ಈ ಹಿಂದೆ ಒಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಆಗ ಜಾಕಿ ಚಾನ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. 'ನನ್ನ ಮಗನಿಗೆ ಸರಿಯಾದ ಜೀವನ ಶಿಕ್ಷಣ ನೀಡುವುದರಲ್ಲಿ ನಾನು ಸೋತಿದ್ದೀನಿ. ನೀವು ಜೆಯ್ಸಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ಅವನು ಮಾಡಿದ ತಪ್ಪನ್ನು ಎಂದೂ ಮಾಡಬೇಡಿ' ಎಂದಿದ್ದರು.

  ಆರು ತಿಂಗಳು ಜೈಲು ವಾಸ ಅನುಭವಿಸಿ ಹೊರಬಂದ ಮಗನನ್ನು ಭೇಟಿಯಾಗಿದ್ದ ಜಾಕಿ ಚಾನ್, ಜಾಯ್ಸಿ ಈಗ ಬದಲಾಗಿದ್ದಾನೆ ಎನಿಸುತ್ತದೆ ಎಂದಿದ್ದರು. ಜೇಯ್ಸಿ ಈಗ ಲಾಸ್‌ ಏಂಜಲಿಸ್‌ನಲ್ಲಿದ್ದಾನೆ.

  ಜಾಕಿ ಚಾನ್‌ಗೆ ಎಟ್ಟಾ ನಂಗ್‌ ಚೋಕ್‌ ಹೆಸರಿನ ಹೆಣ್ಣು ಮಗುವೊಂದಿದೆ. ಜಾಕಿ ಚಾನ್‌ನ 'ಅನೈತಿಕ ಸಂಬಂಧ'ದಿಂದ ಹುಟ್ಟಿದ ಮಗು ಇದಾಗಿರುವ ಕಾರಣ ಅಧಿಕೃತ ಮಗ ಜಾಯ್ಸಿ ಒಬ್ಬನೇ.

  English summary
  Actor Jackie Chan explains why he is not giving his wealth to his only son Jaycee Chan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X