»   » ಜಾಕಿ ಚಾನ್ ಸ್ಟಂಟ್ ಟೀಮ್‌ಗೆ 40 ರ ಸಂಭ್ರಮ

ಜಾಕಿ ಚಾನ್ ಸ್ಟಂಟ್ ಟೀಮ್‌ಗೆ 40 ರ ಸಂಭ್ರಮ

Posted By:
Subscribe to Filmibeat Kannada

ಮಾರ್ಷಲ್ ಆರ್ಟ್ಸ್ ಕಿಂಗ್ ಮತ್ತು ಸಿನಿ ಪ್ರಿಯರ ಹಾಟ್ ಫೇವರಿಟ್ ಹಾಂಗ್ ಕಾಂಗ್ ನಟ ಜಾಕಿ ಚಾನ್ ರವರ 'ಜಾಕಿ ಚಾನ್ ಸ್ಟಂಟ್ ಟೀಮ್' 40 ವರ್ಷಗಳನ್ನು ಪೂರೈಸಿದೆ. ಇಂದು ಈ ಸಂತೋಷವನ್ನು ಜಾಕಿ ಚಾನ್ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

"ನಾನು ಎಂದಿಗೂ ಜೆಸಿ ಸ್ಟಂಟ್ ಟೀಮ್ 40 ವರ್ಷಗಳನ್ನು ಪೂರೈಸುತ್ತದೆ, ಈ ರೀತಿ ಅಭಿವೃದ್ದಿ ಹೊಂದುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದನ್ನು 1976 ರಲ್ಲಿ ಸ್ಥಾಪಿಸಲಾಗಿತ್ತು. ಇಂದು ನಾವು ಹಲವು ಮರೆಯಲಾಗದ ಮತ್ತು ಅವಿಸ್ಮರಣೀಯ ನೆನಪುಗಳೊಂದಿಗೆ 40 ರ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಎಲ್ಲಾ ನನ್ನ ಸಹೋದರರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಜೆಸಿ ಸ್ಟಂಟ್ ಟೀಮ್ ಇನ್ನೂ ಹಲವು 40 ವರ್ಷಗಳ ಸಂಭ್ರಮವನ್ನು ಪಡೆಯಲಿದೆ" ಎಂದು ಹಾಲಿವುಡ್ ನಟ ಜಾಕಿ ಚಾನ್ ರವರು ಫೇಸ್‌ಬುಕ್ ಪೇಜ್ ನಲ್ಲಿ ಬರೆದಿದ್ದಾರೆ. ಜೊತೆಗೆ ಅವರ 'ಜಾಕಿ ಚಾನ್ ಸ್ಟಂಟ್‌ಮೆನ್ ಅಸೋಸಿಯೇಶನ್' ಗ್ರೂಪ್ ನ ಸದಸ್ಯರೊಂಗಿದೆ ತೆಗೆಸಿಕೊಂಡಿರುವ ಫೊಟೋವನ್ನು ಅಪ್‌ಲೋಡ್ ಮಾಡಿದ್ದಾರೆ.

Jackie Chan Stunt Team completes 40 years

ಜಾಕಿ ಚಾನ್ ದೀರ್ಘ ಕಾಲದ ನಂತರ 'ಕುಂಗ್ ಫು ಯೋಗ' ಚಿತ್ರದ ಮೂಲಕ ಇತ್ತೀಚೆಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಚಿತ್ರ ಭಾರತದಲ್ಲೂ ಬಿಡುಗಡೆ ಆಗಿತ್ತು. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಭಾರತದ ಬಹುಭಾಷಾ ನಟ ಸೋನು ಸೂದ್ ಅಭಿನಯಿಸಿದ್ದರು. ಆದ್ದರಿಂದ ಚಿತ್ರದ ಪ್ರಮೋಷನ್ ಹಿನ್ನೆಲೆಯಲ್ಲಿ ಜಾಕಿ ಚಾನ್ ಕೆಲ ತಿಂಗಳ ಹಿಂದಷ್ಟೆ ಭಾರತಕ್ಕೆ ಭೇಟಿ ನೀಡಿದ್ದರು.

Jackie Chan Stunt Team completes 40 years

ಜಾಕಿ ಚಾನ್ ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಮತ್ತು ಅಭಿನಯಕ್ಕೆ ಈ ವರೆಗೆ 25 ಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.

English summary
Hong Kong martial artist, actor, film director Jackie Chan owned 'Jackie Chan Stunt Team' was Completed 40 Years. Jackie Chan shared this unforgettable moment in his facebook page.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada