»   » ಜಾಕಿ ಚಾನ್ ಮಗಳಿಗೆ ಎಂತಹ ದುರ್ಗತಿ ಬಂತಪ್ಪಾ.!

ಜಾಕಿ ಚಾನ್ ಮಗಳಿಗೆ ಎಂತಹ ದುರ್ಗತಿ ಬಂತಪ್ಪಾ.!

Posted By:
Subscribe to Filmibeat Kannada

ಹಾಲಿವುಡ್ ಆಕ್ಷನ್ ಕಿಂಗ್ ಜಾಕಿ ಚಾನ್ ತನ್ನ ಮಗಳನ್ನ ಮನೆಯಿಂದ ಹೊರಹಾಕಿದ್ದಾರೆ ಎಂಬ ಸುದ್ದಿ ಈಗ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಇದನ್ನ ಸ್ವತಃ ಜಾಕಿ ಚಾನ್ ಅವರ ಮಗಳೇ ಹೇಳಿದ್ದು, ಯೂಟ್ಯೂಬ್ ನಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಮಾತನಾಡಿರುವ ಜಾಕಿ ಚಾನ್ ಪುತ್ರಿ ಎಟಾ ''ಒಂದು ತಿಂಗಳಿನಿಂದ ನಾನು ನನ್ನ ಹೆತ್ತವರಿಂದ ದೂರವಾಗಿದ್ದು, ನಿರಾಶ್ರಿತಳಾಗಿದ್ದೇನೆ. ಸದ್ಯ, ನನ್ನ ಗೆಳತಿ ಜೊತೆ ಇದ್ದು, ನಾವು ಬ್ರಿಡ್ಜ್ ಕೆಳಗೆ ರಾತ್ರಿಯನ್ನು ಕಳೆಯುತ್ತಿದ್ದೇವೆ. ಆಸ್ಪತ್ರೆ, ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾತರ ಸಹಾಯ ಕೇಂದ್ರಗಳಲ್ಲಿ ಸಹಾಯ ಕೇಳಿದರೂ, ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ'' ಎಂದು ಎಟಾ ಕಣ್ಣೀರಿಟ್ಟಿದ್ದಾರೆ.

Jackie Chans estranged daughter Etta Ng homeless

ಜಾಕಿ ಚಾನ್, ಸಲ್ಮಾನ್ ಖಾನ್ ಅಪರೂಪದ ಸಮಾಗಮ

''ಹೀಗಾಗಿ, ನಮಗೆ ಈಗ ಏನೂ ಮಾಡಬೇಕೆಂಬುದು ತಿಳಿಯುತ್ತಿಲ್ಲ. ನಾವು ಎಷ್ಟು ಕಷ್ಟದಲ್ಲಿ ಇದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ. ಇದು ಈಗ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದು, ಜಾಕಿ ಚಾನ್ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಿದೆ.

ಜಾಕಿ ಚಾನ್ ಹಾಗೂ ತಾಯಿ ಮಾಜಿ ರೂಪದರ್ಶಿ ಎಲೈನ್ ಎನ್ ಜಿ ಇಬ್ಬರಿಂದ ಎಟಾ ದೂರವಾಗಿದ್ದು, ಎಟಾ ಸಲಿಂಗಕಾಮಿ ಎಂದು ಜಾಕಿ ಚಾನ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ಸಲಿಂಗಕಾಮವನ್ನ ಜಾಕಿ ಚಾನ್ ಮತ್ತು ಪತ್ನಿ ವಿರೋಧ ಮಾಡಿದ್ದು, ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Jackie Chans estranged daughter Etta Ng homeless

ಮುಂಬೈನಲ್ಲಿ ಕುಂಗ್ ಫು ಪಂಡಾದ ಮೆರುಗು, ಎಲ್ಲೆಲ್ಲೂ ಜಾಕಿ ಚಾನ್ ರಂಗು

ಈ ಬಗ್ಗೆ ಜಾಕಿ ಚಾನ್ ಪತ್ನಿ ಎಲೈನ್ ''ದುಡ್ಡಿನ ಅವಶ್ಯಕತೆ ಇದ್ದರೇ ಯಾವುದಾದರೂ ಕೆಲಸ ಹುಡುಕಿಕೊಂಡು ಬದುಕಿಲಿ. ಸುಮ್ಮನೆ ತಂದೆಯ ಹೆಸರಿಗೆ ಧಕ್ಕೆ ತರುವುದು ಬೇಡ. ವಿಶ್ವಾದ್ಯಂತ ಜನರು ದುಡಿದು ಜೀವನ ನಡೆಸುತ್ತಿದ್ದಾರೆ'' ಎಂದು ಖಾರವಾಗಿ ಹೇಳಿದ್ದಾರೆ. ಇನ್ನು ಮಗಳ ಈ ವಿಡಿಯೋ ಬಗ್ಗೆ ಜಾಕಿ ಚಾನ್ ಎಲ್ಲಿಯೋ ಮಾತನಾಡಲಿಲ್ಲ.

English summary
Action star Jackie Chan's estranged daughter Etta Ng has claimed she is homeless and is living on the streets of Hong Kong with her girlfriend Andi Autumn.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X