For Quick Alerts
  ALLOW NOTIFICATIONS  
  For Daily Alerts

  ಮಾಜಿ ಬಾಂಡ್ ಗರ್ಲ್ ಓಲ್ಗಾಗೂ ತಗುಲಿದ ಕೊರೊನಾವೈರಸ್

  By ಜೇಮ್ಸ್ ಮಾರ್ಟಿನ್
  |

  ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಬಾಂಡ್ ಸರಣಿಯ 25ನೇ ಸಿನಿಮಾ ಬಿಡುಗಡೆಯನ್ನು ಮುಂದೂಡಿರುವ ಸುದ್ದಿ ಓದಿರಬಹುದು. ಹಾಲಿವುಡ್ ಸಿನಿಮಾ ಜಗತ್ತನ್ನು ಅಲುಗಾಡಿಸಿರುವ ಕೊರೊನಾವೈರಸ್, ಅನೇಕ ಸೆಲೆಬ್ರಿಟಿಗಳನ್ನು ಕಾಡುತ್ತಿದೆ. ಟಾಮ್ ಹ್ಯಾಂಕ್ಸ್ ದಂಪತಿ ಬಳಿಕ ಮಾಜಿ ಬಾಂಡ್ ಗರ್ಲ್ ಓಲ್ಗಾ ಕುರಿಲೆಂಕೋಗೆ ವೈರಸ್ ಸೋಂಕು ತಗುಲಿದೆ.

  ಕ್ಯಾಸಿನೋ ರಾಯಲ್ ಚಿತ್ರದ ನಂತರದ ಭಾಗವಾಗಿ 'ಕ್ವಾಂಟಮ್ ಆಫ್ ಸೊಲಾಸ್' ಚಿತ್ರದಲ್ಲಿ ಬ್ರಿಟನ್ನಿನ ಹೊಸ ಬೆಡಗಿ ಜೆಮ್ಮಾ ಅರ್ಟಟನ್ ಜೊತೆಗೆ ಉಕ್ರೇನ್ ಬೆಡಗಿ ಓಲ್ಗಾ ಬಾಂಡ್ ಗರ್ಲ್ ಆಗಿ ಮಿಂಚಿದ್ದಳು. 2008ರಲ್ಲಿ ಕ್ರೇಗ್ ಜೊತೆ ನಟಿಸಿದ ಓಲ್ಗಾ ನಂತರ 2013ರಲ್ಲಿ ಓಬ್ಲಿವಿಲಿಯನ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಳು.

  ಆಸ್ಕರ್ ವಿಜೇತ ನಟ ಟಾಮ್ ಹ್ಯಾಂಕ್ಸ್ ದಂಪತಿಗೆ ಕೊರೊನಾ ಸೋಂಕುಆಸ್ಕರ್ ವಿಜೇತ ನಟ ಟಾಮ್ ಹ್ಯಾಂಕ್ಸ್ ದಂಪತಿಗೆ ಕೊರೊನಾ ಸೋಂಕು

  40 ವರ್ಷ ವಯಸ್ಸಿನ ಓಲ್ಗಾ ತನಗೆ ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಭಾನುವಾರದಂದು ಬರೆದುಕೊಂಡಿದ್ದಾಳೆ

  ಕಳೆದ ಒಂದು ವಾರದಿಂದ ನನಗೆ ಹುಷಾರಿರಲಿಲ್ಲ. ಜ್ವರ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೊಳಪಟ್ಟೆ, ಕೊರೊನಾ ತಗುಲಿರುವುದು ಪತ್ತೆಯಾಗಿದೆ. ನೀವೆಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿಟಕಿಯಿಂದ ಹೊರಜಗತ್ತು ಕಾಣುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾಳೆ.

  ಬಾಲ್ಯದ ದಿನಗಳಿಂದಲೂ ಕಷ್ಟ ಕಂಡಿರುವ ಓಲ್ಗಾ

  ಬಾಲ್ಯದ ದಿನಗಳಿಂದಲೂ ಕಷ್ಟ ಕಂಡಿರುವ ಓಲ್ಗಾ

  ಸೋವಿಯಟ್ ರಷ್ಯಾ ಮೂಲದ ತಾಯಿ, ಉಕ್ರೇನಿನ ತಂದೆಗೆ ಜನಿಸಿದ ಓಲ್ಗಾ ಬಾಲ್ಯದಲ್ಲಿ ತಂದೆ ತಾಯಿಯ ಪ್ರೀತಿಯನ್ನು ಕಳೆದುಕೊಂಡವಳು. ಮೂರು ವರ್ಷದವಳಿದ್ದಾಗ ಇವಳ ತಂದೆ-ತಾಯಿ ವಿಚ್ಛೇದನ ಪಡೆದರು. ಬಡತನದ ಆ ದಿನಗಳಲ್ಲಿ ತನ್ನ ಚಿಕ್ಕಮ್ಮನ ಆರೈಕೆಯೆ ಆಸರೆಯಾಯಿತು. ಅಜ್ಜ, ಅಜ್ಜಿ, ಮಾವನ ಜೊತೆಗೆ ತಾಯಿಯೂ ಸೇರಿ ಒಂದೆ ಫ್ಲಾಟ್ ನಲ್ಲಿ ವಾಸಮಾಡುತ್ತಿದ್ದ ಕಷ್ಟಕರ ಕಾಲ. ಓಲ್ಗಾ ಪುನಃ ತನ್ನ ತಂದೆಯನ್ನು ನೋಡಿದ್ದು ತನ್ನ ಹದಿಮೂರನೇ ವಯಸ್ಸಿನಲ್ಲಿ. ಅದು ಆತ ತನ್ನ ಎರಡನೇ ಪತ್ನಿಯಿಂದ ಡಿವೋರ್ಸ್ ಆಗಿ ಪುನಃ ಈ ಕಡೆ ಮುಖ ಮಾಡಿದಾಗ.

  ಸಾಂಸಾರಿಕ ಜೀವನದಲ್ಲಿ ಸುಖ ಕಂಡಿದ್ದು ಕಮ್ಮಿ.

  ಸಾಂಸಾರಿಕ ಜೀವನದಲ್ಲಿ ಸುಖ ಕಂಡಿದ್ದು ಕಮ್ಮಿ.

  ಸುಂದರ ಅಂಗಸೌಷ್ಟವ ಹೊಂದಿದ್ದ ಓಲ್ಗಾ ರೂಪದರ್ಶಿಯಾಗಿ ಹೆಸರು ಮಾಡತೊಡಗಿದಳು. ಶಾಲೆಯಲ್ಲಿ ಕಲಿತಿದ್ದು ಫ್ರೆಂಚ್ ಭಾಷೆ. ಇಂಗ್ಲೀಷ್ ಕೂಡ ಮಾತಾಡಬಲ್ಲಳು. ಅನ್ನುಲೈರ್ ಲಾ ( Annulaire, L" )ಎಂಬ ಚಿತ್ರದೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದಳು. ಫ್ಯಾಷನ್ ಫೋಟೋಗ್ರಾಫರ್ ಸೆಡ್ರಿಕ್ ವಾಲ್ ಮೊಲ್ ನನ್ನು ಮದುವೆಯಾದ ಓಲ್ಗಾ ದಾಂಪತ್ಯ ಉಳಿದಿದ್ದು ನಾಲ್ಕು ವರ್ಷ ಮಾತ್ರ. ನಂತರ ಡೆನಿಯಲ್ ಗ್ಯಾಬ್ರಿಲ್ ನನ್ನು ವರಿಸಿದರೂ 2007ರಲ್ಲಿ ಡಿವೋರ್ಸ್ ಕೊಟ್ಟಳು. ಒಟ್ಟಿನಲ್ಲಿ ಸಾಂಸಾರಿಕ ಜೀವನದಲ್ಲಿ ಸುಖ ಕಂಡಿದ್ದು ಕಮ್ಮಿ.

  ಹಲವು ಸಾಹಸಭರಿತ ಚಿತ್ರಗಳ ನಾಯಕಿ

  ಹಲವು ಸಾಹಸಭರಿತ ಚಿತ್ರಗಳ ನಾಯಕಿ

  ಬ್ರೂಕ್ಲೀನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ Annulaire, L" ಚಿತ್ರದ ಇರಿಸ್ ಪಾತ್ರಕ್ಕೆ ಅಪಾರ ಪ್ರಶಂಸೆ ಗಳಿಸಿದಳು. ನಂತರ Paris, je t'aime (2006), The Serpent (2006) , Hitman (2007) ಈಕೆಗೆ ಹೆಸರು ತಂದು ಕೊಟ್ಟ ಚಿತ್ರಗಳು. Quantum of Solace (2008) ಚಿತ್ರವಲ್ಲದೆ ವಿಡಿಯೋ ಗೇಮ್ ಆಧಾರಿತ ಚಿತ್ರ Max Payne (2008) ನಲ್ಲೂ ನಟಿಸಿದ್ದಾಳೆ. ನಂತರ ಹೆಸರು ತಂದುಕೊಟ್ಟಿದ್ದು 2013ರಲ್ಲಿ ಒಬ್ಲಿವಿಲಿಯನ್ ಚಿತ್ರ.

  ಕೊರೊನಾ ಭೀತಿಯಿಂದ ಬಾಂಡ್ ಚಿತ್ರ ಮುಂದಕ್ಕೆ

  ಈ ಮೊದಲು ಬಾಂಡ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲು ಸಿದ್ದವಾಗಿತ್ತು. ಯು.ಕೆಯಲ್ಲಿ ಏಪ್ರಿಲ್ 3ಕ್ಕೆ ರಿಲೀಸ್ ಆಗಬೇಕಿತ್ತು. ಇನ್ನು ಅಮೆರಿಕಾದಲ್ಲಿ ಏಪ್ರಿಲ್ 8ಕ್ಕೆ ತೆರೆಗೆ ಬರಬೇಕಿತ್ತು. 2015ರಲ್ಲಿ 24ನೇ ಬಾಂಡ್ ಸಿನಿಮಾ ಸ್ಪೆಕ್ಟರ್ ರಿಲೀಸ್ ಆಗಿತ್ತು. ಈಗ ನಾಲ್ಕು ವರ್ಷಗಳ ಬಳಿಕ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಮ್ ಟು ಡೈ' ತೆರೆಗೆ ಬರುತ್ತಿದೆ.

  English summary
  James Bond actress Olga Kurylenko is the latest name from international entertainment industry to have contracted the COVID-19. Earlier, American superstar Tom Hanks also revealed that he has tested positive for coronavirus along with his wife Rita Wilson

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X