»   » 'ಜೇಮ್ಸ್ ಬಾಂಡ್' ಚಿತ್ರಗಳ ಸರದಾರ ಗಯ್ ಹ್ಯಾಮಿಲ್ಟನ್ ಇನ್ನಿಲ್ಲ

'ಜೇಮ್ಸ್ ಬಾಂಡ್' ಚಿತ್ರಗಳ ಸರದಾರ ಗಯ್ ಹ್ಯಾಮಿಲ್ಟನ್ ಇನ್ನಿಲ್ಲ

By: ಸೋನು ಗೌಡ
Subscribe to Filmibeat Kannada

ಹಾಲಿವುಡ್ ಹಿಟ್ ಸಿನಿಮಾ 'ಜೇಮ್ಸ್ ಬಾಂಡ್' ಸೀರಿಸ್ ಸಿನಿಮಾ ಮಾಡಿದ್ದ ಖ್ಯಾತ ಬ್ರಿಟಿಷ್ ನಿರ್ದೇಶಕ ಗಯ್ ಹ್ಯಾಮಿಲ್ಟನ್ ಅವರು ಗುರುವಾರ (ಏಪ್ರಿಲ್ 21) ನಿಧನ ಹೊಂದಿದ್ದಾರೆ.

ಸುಮಾರು 93 ವರ್ಷ ವಯಸ್ಸಾಗಿದ್ದ ನಿರ್ದೇಶಕ ಗಯ್ ಹ್ಯಾಮಿಲ್ಟನ್ ಅವರು 'ಜೇಮ್ಸ್ ಬಾಂಡ್' ಹೊರತಾಗಿ 'ಗೋಲ್ಡ್ ಫಿಂಗರ್', 'ಡೈಮಂಡ್ಸ್ ಅಂಡ್ ಲೆಟ್ ಡೈ', 'ಲಿವ್ ಅಂಡ್ ಲೆಟ್ ಡೈ' ಮತ್ತು 'ದ ಮ್ಯಾನ್ ವಿತ್ ದ ಗೋಲ್ಡನ್ ಗನ್' ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.[ಜೇಮ್ಸ್ ಬಾಂಡ್ 'ಸ್ಪೆಕ್ಟ್ರಾ' ಅಷ್ಟಕಷ್ಟೆ.? ವಿಮರ್ಶಕರ ಮಾತೇನು?]

'James Bond' director Guy Hamilton is No More

ಹಲವಾರು ಹಿಟ್ ಸಿನಿಮಾಗಳ ಸರದಾರ ನಿರ್ದೇಶಕ ಹ್ಯಾಮಿಲ್ಟನ್ ಅವರು ಸ್ಪೇನ್ ನ ಮಲ್ಲೋರ್ಕಾ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ವರದಿ ಮಾಡಲಾಗಿದೆ.

'James Bond' director Guy Hamilton is No More

ಸುಮಾರು 50ರ ದಶಕದಿಂದ 80ರ ದಶಕದವರೆಗೆ ಹಲವಾರು ಚಿತ್ರಗಳನ್ನು ಹ್ಯಾಮಿಲ್ಟನ್ ಅವರು ನಿರ್ದೇಶನ ಮಾಡಿದ್ದರು. ಮೈಕೆಲ್ ಕ್ಯಾನ್ ಅವರ 'ಬ್ಯಾಟಲ್ ಆಫ್ ಬ್ರಿಟನ್' ಮತ್ತು ಹ್ಯಾರಿ ಪಾರ್ಮರ್ ಅವರ ಹಾರರ್-ಥ್ರಿಲ್ಲರ್ ಸಿನಿಮಾ 'ಪ್ಯೂನೆರಲ್ ಇನ್ ಬರ್ಲಿನ್' ಚಿತ್ರವನ್ನು ನಿರ್ದೇಶನ ಮಾಡಿದ್ದರು.[23 ನೇ ಜೇಮ್ಸ್ ಬಾಂಡ್ ಚಿತ್ರಕ್ಕೂ ಕ್ರೆಗ್ ಹೀರೋ]

'James Bond' director Guy Hamilton is No More

ಮಾತ್ರವಲ್ಲದೇ ಖ್ಯಾತ ಲೇಖಕಿ ಅಗಾತ ಕ್ರಿಸ್ಟಿ ಕಾದಂಬರಿಗಳನ್ನು ಸಿನಿಮಾಗೆ ಅಳವಡಿಸಿ ಏಂಜೆಲಾ ಲ್ಯಾನ್ಸ್ಬರಿ ಜೊತೆಗೆ 'ದ ಮಿರರ್ ಕ್ರಾಕಡ್' ಮತ್ತು ಪೀಟರ್ ಉಸ್ತಿನಾವ್ ಪಾಯ್ರಟ್ ಆಗಿ ನಟಿಸಿದ್ದ 'ಈವಿಲ್ ಅಂಡರ್ ಸನ್' ಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದರು.

English summary
Hollywood Director Guy Hamilton, who directed four 'James Bond' films, has died aged 93.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada