For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಬಾಂಡ್‌ಗೆ ಬ್ರಿಟನ್ ಸೈನ್ಯದಲ್ಲಿ ಉನ್ನತ ಸ್ಥಾನ: ಧನ್ಯವಾದ ಹೇಳಿದ ನಟ

  By ಫಿಲ್ಮಿಬೀಟ್ ಡೆಸ್ಕ್
  |

  ಜೇಮ್ಸ್ ಬಾಂಡ್ ವಿಶ್ವ ವಿಖ್ಯಾತಿಗಳಿಸಿರುವ ಪಾತ್ರ. ಹಲವು ದಶಕಗಳಿಂದ ಈ ಪಾತ್ರ ವಿಶ್ವದಾದ್ಯಂತ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಲೇ ಬಂದಿದೆ. ಹಲವು ನಟರು ಜೇಮ್ಸ್ ಬಾಂಡ್ ಪಾತ್ರವನ್ನು ಈವರೆಗೆ ಮಾಡುತ್ತಲೇ ಬಂದಿದ್ದಾರೆ. ಈಗ ಡ್ಯಾನಿಯಲ್ ಕ್ರೇಗ್ ಬಾಂಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಜೇಮ್ಸ್ ಬಾಂಡ್‌ ಸಿನಿಮಾ ಸರಣಿಯ 25ನೇ ಸಿನಿಮಾ 'ನೋ ಟೈಮ್ ಟು ಡೈ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಜೇಮ್ಸ್ ಬಾಂಡ್ ಪಾತ್ರಧಾರಿ ಡ್ಯಾನಿಯಲ್ ಕ್ರೇಗ್‌ಗೆ ಬ್ರಿಟನ್ ಸೈನ್ಯವು ದೊಡ್ಡ ಗೌರವವೊಂದನ್ನು ನೀಡಿದೆ.

  ಬ್ರಿಟನ್‌ ದೇಶದ ರಾಯಲ್ ನೇವಿಯ ಗೌರವಾನ್ವಿತ ಕಮಾಂಡರ್ ಆಗಿ ಡ್ಯಾನಿಯಲ್ ಕ್ರೇಗ್ ಅನ್ನು ನೇಮಿಸಲಾಗಿದೆ. ನೇವಿ ವಿಭಾಗದಲ್ಲಿ ಕಮಾಂಡರ್ ಅತ್ಯುತ್ತಮ ರ‍್ಯಾಂಕ್ ಗಳಲ್ಲಿ ಒಂದಾಗಿದೆ.

  ರಾಯಲ್ ನೇವಿಯು ತಮಗೆ ನೀಡಿದ ಈ ಗೌರವಕ್ಕೆ ಧನ್ಯವಾದ ಹೇಳಿರುವ ಡ್ಯಾನಿಯಲ್ ಕ್ರೇಗ್, ''ಈ ಅತ್ಯುನ್ನತ ಗೌರವ ಪಡೆಯಲು ನಾನು ಅದೃಷ್ಟವಂತನಾಗಿದ್ದೇನೆ ಮತ್ತು ಬಹಳ ಹೆಮ್ಮೆ ಅನುಭವಿಸುತ್ತಿದ್ದೇನೆ'' ಎಂದಿದ್ದಾರೆ. ಡ್ಯಾನಿಯಲ್ ಕ್ರೇಗ್, ರಾಯಲ್ ನೇವಿಯ ಸಮವಸ್ತ್ರ ಧರಿಸುವ ಚಿತ್ರವನ್ನು ಜೇಮ್ಸ್ ಬಾಂಡ್ ಸಿನಿಮಾ ಸರಣಿಯ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

  ಡ್ಯಾನಿಯಲ್ ಕ್ರೇಗ್ ಈವರೆಗೆ ನಾಲ್ಕು ಬಾಂಡ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ನಟಿಸಿದ್ದಾರೆ. 'ಕ್ಯಾಸಿನೊ ರಾಯಲ್', 'ಸ್ಕೈ ಫಾಲ್', 'ಕ್ವಾಂಟಮ್ ಆಫ್ ಸೊಲಾಸ್', 'ಸ್ಪೆಕ್ಟರ್' ಸಿನಿಮಾಗಳಲ್ಲಿ ಡ್ಯಾನಿಯಲ್ ಕ್ರೇಗ್ ನಟಿಸಿದ್ದಾರೆ. ಇದೀಗ 'ನೋ ಟೈಮ್ ಟು ಡೈ' ಸಿನಿಮಾದಲ್ಲಿ ನಟಿಸಿದ್ದು, ಬಾಂಡ್ ಪಾತ್ರದಲ್ಲಿ ಡ್ಯಾನಿಯಲ್ ಕ್ರೇಗ್ ನಟಿಸುತ್ತಿರುವ ಕೊನೆಯ ಸಿನಿಮಾ ಇದಾಗಿರಲಿದೆ.

  'ನೋ ಟೈಮ್ ಟು ಡೈ' ಸಿನಿಮಾವು ಈಗಾಗಲೇ ಹಲವು ಬಾರಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಇದೀಗ ಸೆಪ್ಟೆಂಬರ್ 30ಕ್ಕೆ ಸಿನಿಮಾವು ಬಿಡುಗಡೆ ಆಗಲಿದೆ ಎನ್ನಲಾಗಿದೆ. 'ನೋ ಟೈಮ್ ಟು ಡೈ' ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಅತಿ ಕ್ಲಿಷ್ಟಕರ ಸನ್ನಿವೇಶಗಳನ್ನು, ಸವಾಲುಗಳನ್ನು ಎದುರಿಸಲಿದ್ದಾನೆ ಎಂದಿದ್ದಾರೆ. ಸಿನಿಮಾದ ಅಂತ್ಯದಲ್ಲಿ ಜೇಮ್ಸ್ ಬಾಂಡ್ ಸಾಯಲಿದ್ದಾನೆ ಎಂದೂ ಹೇಳಲಾಗುತ್ತಿದೆ.

  ಡ್ಯಾನಿಯಲ್ ಕ್ರೇಗ್ 2006ರಿಂದಲೂ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಡ್ಯಾನಿಯಲ್ ಕ್ರೇಗ್ ಅನ್ನು ಈವರೆಗಿನ ಅತ್ಯುತ್ತಮ ಬಾಂಡ್ ಎಂದು ಕರೆಯಲಾಗುತ್ತದೆ. ಆದರೆ ಇನ್ನು ಮುಂದೆ ಡ್ಯಾನಿಯಲ್, ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈವರೆಗೆ ಏಳು ನಟರು ಜೇಮ್ಸ್ ಬಾಂಡ್‌ ಪಾತ್ರದಲ್ಲಿ ನಟಿಸಿದ್ದಾರೆ. ಡ್ಯಾನಿಯಲ್ ಕ್ರೇಗ್‌ ಬಳಿಕ ಇನ್ನಾವ ನಟರು ಬಾಂಡ್ ಸೂಟ್ ಧರಿಸುತ್ತಾರೊ ಕಾದು ನೋಡಬೇಕಿದೆ.

  English summary
  James Bond actor Daniel Craig appointed as honorary Royal Navy commander of United Kingdom's navy force.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X