For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್ ಬಾಂಡ್'ನ ದುಬಾರಿ ಮತ್ತು ಅಪರೂಪದ ಬಂದೂಕು ಕಳವು

  |

  ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ವೈರಸ್ ಗೆ ಇಡೀ ವಿಶ್ವವೆ ತತ್ತರಿಸಿದೆ. ಇದರ ನಡುವೆ ಹಾಲಿವುಡ್ ನ ಖ್ಯಾತ ಸಿನಿಮಾ ಸರಣಿಗಳಲ್ಲಿ ಒಂದಾಗಿರುವ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸಿದ್ದ ಅಪರೂಪದ ದುಬಾರಿ ಬಂದೂಕುಗಳು ಕಳುವಾಗಿವೆ.

  ಈ ವರ್ಷ ಖ್ಯಾತ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಂ ಟು ಡೈ' ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ಗೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದ್ದು ನವೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾ ಮುಂದಕ್ಕೆ ಹೋದ ತಲೆನೋವಿನಲ್ಲಿದ್ದ ಬಾಂಡ್ ಸರಣಿಗೀಗ ಮತ್ತೊಂದು ಆಘಾತವೊಂಟಾಗಿದೆ. ಬಾಂಡ್ ಸಿನಿಮಾದಲ್ಲಿ ಬಳಸಿದ್ದ ದುಬಾರಿ ಬಂದೂಕುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಮುಂದೆ ಓದಿ...

  1 ಕೋಟಿಗೂ ಅಧಿಕ ಬೆಲೆಬಾಳುವ ಬಂದೂಕು

  1 ಕೋಟಿಗೂ ಅಧಿಕ ಬೆಲೆಬಾಳುವ ಬಂದೂಕು

  ಅನೇಕ ವರ್ಷಗಳಿಂದ ಬಾಂಡ್ ಸಿನಿಮಾದಲ್ಲಿ ಬಳಸಿದ ಅಪರೂಪದ 5 ಬಂದೂಕುಗಳನ್ನು ಲಂಡನ್ ನ ಎನ್ ಫೀಲ್ಡ್ ಪ್ರದೇಶದ ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಬಂದೂಕಿನ ಬೆಲೆ ಸುಮಾರು 1 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ.

  ಬಂದೂಕು ಕದ್ದ ಪೂರ್ವ ಯೂರೋಪಿಯನ್ನರು

  ಬಂದೂಕು ಕದ್ದ ಪೂರ್ವ ಯೂರೋಪಿಯನ್ನರು

  ನೆರೆಹೊರೆಯವರು ಹೇಳುವ ಪ್ರಕಾರ ಕಳ್ಳರು ಪೂರ್ವ ಯೂರೋಪಿಯನ್ ಭಾಷೆ ಮಾತನಾಡುತ್ತಿದ್ದರಂತೆ. ಬಿಳಿ ಬಣ್ಣದ ಪುರುಷರಾಗಿದ್ದು, ಸಿಲ್ವರ್ ಬಣ್ಣದ ಕಾರಿನಲ್ಲಿ ಬಂದಿದ್ದರಂತೆ. ನೆರೆಹೊರೆಯವರ ಗಲಾಟೆ ಜೋರಾಗುತ್ತಿದ್ದಂತೆ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಎಂದು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಎಂಟ್ರಿ ಕೊಡುವ ಮೊದಲೆ ಮಾಯವಾಗಿದ್ದಾರೆ.

  ನಿಷ್ಕ್ರಿಯಗೊಳಿಸಿದ 5 ಬಂದೂಕುಗಳು ಕಳವು

  ನಿಷ್ಕ್ರಿಯಗೊಳಿಸಿದ 5 ಬಂದೂಕುಗಳು ಕಳವು

  ಈ 5 ಬಂದೂಕುಗಳು ನಿಷ್ಕ್ರಿಯಗೊಳಿಲಾಗಿದ್ದು, ಅವುಗಳಿಂದ ಗುಂಡು ಹಾರಿಸಲು ಸಾಧ್ಯವಿಲ್ಲ. ಆದರೆ ಅನೇಕ ವರ್ಷಗಳಿಂದ ಸಿನಿಮಾದಲ್ಲಿ ಬಳಸಿದ ಅಪರೂಪದ, ವಿಶಿಷ್ಟ ಗನ್ ಗಳಾಗಿವೆ. ಹಾಗಾಗಿ ಈ ಗನ್ ಗಳನ್ನು ಖಂಡಿತವಾಗಿಯು ಸಾರ್ವಜನಿಕರು ಗುರುತಿಸುತ್ತಾರೆ. ಅಲ್ಲದೆ ಕದ್ದವರು ಒಂದು ವೇಳೆ ಮಾರಾಟ ಮಾಡಿದರೆ ಗೊತ್ತಾಗುತ್ತೆ ಎಂದು ಡಿಟೆಕ್ವಿವ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  ಸಾರ್ವಜನಿಕರು ಸಹಾಯ ಮಾಡುವ ಭರವಸೆ

  ಸಾರ್ವಜನಿಕರು ಸಹಾಯ ಮಾಡುವ ಭರವಸೆ

  ಇನ್ನು ಕದ್ದ ಬಂದೂಕುಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರು ಸಹಾಯ ಮಾಡಬಹುದೆಂಬ ಭರವಸೆಯಲ್ಲಿ ಮೆಟ್ರೋಪಾಲಿಟನ್ ಪೊಲೀಸರು ಬಂದೂಕಿನ ಚಿತ್ರಗಳು ಮತ್ತು ಸರಣಿ ಸಂಖ್ಯೆಗಳನ್ನು ಪೋಸ್ಟ್ ಮಾಡಿದ್ದಾರೆ.

  English summary
  James Bond irreplaceable and costliest gun stolen from enfield burglary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X