Don't Miss!
- News
ನಮ್ಮ ಪಕ್ಷ ಶವಾಗಾರ ಅಲ್ಲ, ಸಿದ್ದರಾಮಯ್ಯ ಅವರ ಹೆಣ ಬಿಜೆಪಿಗೆ ಬೇಕಿಲ್ಲ: ಛಲವಾದಿ ನಾರಾಯಣಸ್ವಾಮಿ
- Sports
IND vs NZ: ದ್ವಿಶತಕ ಬಾರಿಸಿದ ನಂತರ ಇಶಾನ್ ಕಿಶನ್ ಗ್ರಾಫ್ ಏರುತ್ತದೆ ಎಂದು ಭಾವಿಸಿದ್ದೆ; ಗೌತಮ್ ಗಂಭೀರ್
- Finance
1500 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ Olx: ಭಾರತದಲ್ಲಿಯೇ ಹೆಚ್ಚು ಉದ್ಯೋಗ ಕಡಿತ
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟೈಟಾನಿಕ್‌ಗೆ 25 ವರ್ಷಗಳ ಸಂಭ್ರಮ; ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಯಾಗಲಿದೆ ಚಿತ್ರ
ಸದ್ಯ ವಿಶ್ವ ಬಾಕ್ಸ್ ಆಫೀಸ್ ಅನ್ನು ಅವತಾರ್ ದ ವೇ ಆಫ್ ವಾಟರ್ ಚಿತ್ರದ ಮೂಲಕ ಧೂಳ್ ಎಬ್ಬಿಸುತ್ತಿರುವ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ದಂತಕತೆ ಟೈಟಾನಿಕ್ 25 ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಆಚರಿಸಲು ಜೇಮ್ಸ್ ಕ್ಯಾಮರೂನ್ ಈ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿದೆ 4K ವರ್ಷನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಹೌದು, ಫೆಬ್ರವರಿ 10ರಂದು ವಿಶ್ವದಾದ್ಯಂತ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಟೈಟಾನಿಕ್ ಚಿತ್ರದ 4K ಪ್ರಿಂಟ್ ಬಿಡುಗಡೆಗೊಳ್ಳಲಿದೆ. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಎಕ್ಸ್‌ಪೀರಿಯನ್ಸ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ಸಿನಿ ರಸಿಕರು ಈ ಬಾರಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಇನ್ನು ಜೇಮ್ಸ್ ಕ್ಯಾಮರೂನ್ ಈ ಪ್ರಕಟಣೆಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿದ್ದು, ಸಿನಿ ರಸಿಕರನ್ನು ಚಿತ್ರ ವೀಕ್ಷಿಸಲು ಆಹ್ವಾನಿಸಿದ್ದಾರೆ.
ಇನ್ನು ಟೈಟಾನಿಕ್ 1997ರಲ್ಲಿ ಬಿಡುಗಡೆಗೊಂಡು ಆಗಿನ ಸಮಯದಲ್ಲಿಯೇ 2,207,986,545 ಡಾಲರ್ ಕಲೆಕ್ಷನ್ ಮಾಡುವ ಮೂಲಕ ವಿಶ್ವದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆಯನ್ನು ಬರೆದಿತ್ತು. ಈ ದಾಖಲೆಯನ್ನು 2009ರಲ್ಲಿ ಬಿಡುಗಡೆಗೊಂಡ ಇದೇ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಮುರಿದು ಅಗ್ರಸ್ಥಾನವನ್ನು ಅಲಂಕರಿಸಿತ್ತು ಹಾಗೂ ಟೈಟಾನಿಕ್ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಹಾಗೂ 2019ರಲ್ಲಿ ಬಿಡುಗಡೆಗೊಂಡ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಸಹ ಟೈಟಾನಿಕ್‌ಗಿಂತ ಹೆಚ್ಚು ಗಳಿಸಿತು. ಈ ಮೂಲಕ ಟೈಟಾನಿಕ್ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈಗಲೂ ಸಹ ಟೈಟಾನಿಕ್ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದು, 25 ವರ್ಷಗಳಲ್ಲಿ ಈ ಚಿತ್ರದ ದಾಖಲೆಯನ್ನು ಮುರಿಯುವಲ್ಲಿ ಕೇವಲ ಎರಡು ಚಿತ್ರಗಳು ಮಾತ್ರ ಯಶಸ್ವಿಯಾಗಿವೆ.