Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
RRR ಸಿನಿಮಾ ಮೆಚ್ಚಿ ಕೊಂಡಾಡಿದ 'ಅವತಾರ್' ಸೃಷ್ಟಿಕರ್ತ!
ಭಾರತೀಯ ಸಿನಿಮಾಗಳನ್ನು ಟೀಕಿಸುತ್ತಿದ್ದ ಪಾಶ್ಚಾತ್ಯ ಸಿನಿಮಾಗಳ ಪ್ರೇಮಿಗಳು ಸಾಮಾನ್ಯವಾಗಿ ಹೇಳುತ್ತಿದ್ದು, ಸಿನಿಮಾ ಎಂದರೆ 'ಟೈಟ್ಯಾನಿಕ್' ನಂತಿರಬೇಕು ಇಲ್ಲವೇ 'ಅವತಾರ್' ನಂತಿರಬೇಕು ಎಂದು. ಆದರೀಗ ಆ ಎರಡೂ ಸಿನಿಮಾಗಳ ಸೃಷ್ಟಿಕರ್ತನೇ ಭಾರತೀಯ ಸಿನಿಮಾವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ.
ಹೌದು, ರಾಜಮೌಳಿ ನಿರ್ದೇಶನದ RRR ಸಿನಿಮಾವನ್ನು ಜಗದ್‌ವಿಖ್ಯಾತ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರನ್ ನೋಡಿ ಮೆಚ್ಚಿದ್ದಾರೆ. ಅದೂ ಒಂದು ಬಾರಿಯಲ್ಲ ಎರಡೆರಡು ಬಾರಿ ನೋಡಿದ್ದಾರೆ.
'ಟೈಟ್ಯಾನಿಕ್', 'ಅವತಾರ್' ಸೇರಿದಂತೆ ಇನ್ನು ಹಲವು ಐಕಾನಿಕ್ ಸಿನಿಮಾಗಳ ನಿರ್ದೇಶಕ ಆಗಿರುವ ಜೇಮ್ಸ್ ಕ್ಯಾಮರನ್ 'RRR' ಸಿನಿಮಾವನ್ನು ವೀಕ್ಷಿಸಿದ್ದಲ್ಲದೆ, ತಮ್ಮ ಪತ್ನಿ, ಆಸ್ಕರ್ ವಿಜೇತ ನಿರ್ದೇಶಕಿ ಸುಜಿ ಏಮಿಸ್‌ಗೂ ಸಿನಿಮಾ ವೀಕ್ಷಿಸುವಂತೆ ಹೇಳಿ ಮತ್ತೊಮ್ಮೆ ಪತ್ನಿಯೊಡನೆ ಸಿನಿಮಾ ನೋಡಿದ್ದಾರಂತೆ ಜೇಮ್ಸ್ ಕ್ಯಾಮರನ್.
ಜೇಮ್ಸ್ ಕ್ಯಾಮರನ್ RRR ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ವಿಷಯವನ್ನು ಸ್ವತಃ ನಿರ್ದೇಶಕ ರಾಜಮೌಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೇಮ್ಸ್ ಕ್ಯಾಮರನ್ ಹಾಗೂ ಅವರ ಪತ್ನಿ ಸುಜಿ, ರಾಜಮೌಳಿಯೊಟ್ಟಿಗೆ ಆಪ್ತವಾಗಿ ಮಾತನಾಡಿರುವ ಚಿತ್ರವನ್ನು ಸ್ವತಃ ರಾಜಮೌಳಿ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಜೆಮ್ಸ್ ಕ್ಯಾಮರನ್‌ಗೆ ರಾಜಮೌಳಿ ಧನ್ಯವಾದ
''ಮಹಾನ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ RRR ಸಿನಿಮಾ ವೀಕ್ಷಿಸಿದರು. ಸಿನಿಮಾವನ್ನು ಅವರು ಬಹಳ ಇಷ್ಟಪಟ್ಟರು ಮತ್ತು ತಮ್ಮ ಪತ್ನಿ ಸುಜಿಗೂ ಸಹ ಸಿನಿಮಾ ನೋಡುವಂತೆ ಶಿಫಾರಸು ಮಾಡಿದರು ಮತ್ತು ಪತ್ನಿಯೊಂದಿಗೆ ಮತ್ತೆ ಸಿನಿಮಾ ವೀಕ್ಷಿಸಿದರು. ಸರ್, ನೀವು ಸಿನಿಮಾ ನೋಡಿ, ಹತ್ತು ನಿಮಿಷಗಳ ಕಾಲ ಸಿನಿಮಾ ಬಗ್ಗೆ ನಮ್ಮೊಟ್ಟಿಗೆ ಚರ್ಚಿಸಲು ಸಮಯ ಮಾಡಿಕೊಂಡಿದ್ದನ್ನು ನನಗೆ ಈಗಲೂ ನಂಬಲಾಗುತ್ತಿಲ್ಲ. ನೀವೇ ಹೇಳಿರುವಂತೆ 'ಐ ಆಮ್ ಟಾಪ್ ಆಫ್ ದಿ ವರ್ಲ್ಡ್' (ಟೈಟ್ಯಾನಿಕ್ ಸಿನಿಮಾ ಡೈಲಾಗ್) ನಿಮ್ಮಿಬ್ಬರಿಗೂ ಧನ್ಯವಾದ'' ಎಂದಿದ್ದಾರೆ ರಾಜಮೌಳಿ.

ಸರಣಿ ಪ್ರಶಸ್ತಿಗಳ ಗೆಲ್ಲುತ್ತಿರುವ RRR
RRR ಸಿನಿಮಾಕ್ಕೆ ವಿವಿಧ ಪ್ರತಿಷ್ಠಿತ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಲಭಿಸುತ್ತಿದ್ದು, ಬಹು ಸಮಯದಿಂದಲೂ ರಾಜಮೌಳಿ ವಿದೇಶದಲ್ಲಿಯೇ ಇದ್ದಾರೆ. ಅಂತೆಯೇ ಅಲ್ಲಿ ಹಾಲಿವುಡ್‌ನ ಹಲವು ಖ್ಯಾತ ನಿರ್ದೇಶಕರನ್ನು ಭೇಟಿಯಾಗಿದ್ದಾರೆ. ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. RRR ಸಿನಿಮಾ ಬಗ್ಗೆ ಹೊಗಳಿಕೆಗಳನ್ನು ಸ್ವೀಕರಿಸುತ್ತಿದ್ದಾರೆ.

ಸ್ಟಿವನ್ ಸ್ಪೀಲ್‌ಬರ್ಗ್ ಭೇಟಿಯಾದ ರಾಜಮೌಳಿ
ಕೆಲವು ದಿನಗಳ ಹಿಂದಷ್ಟೆ ರಾಜಮೌಳಿ, ವಿಶ್ವ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಸ್ಟಿವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದರು. ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿ, 'ನಾನು ದೇವರನ್ನು ಭೇಟಿಯಾದೆ' ಎಂದು ಖುಷಿಯಿಂದ ಚಿತ್ರ ಹಂಚಿಕೊಂಡಿದ್ದರು ರಾಜಮೌಳಿ. ಸ್ಪೀಪ್‌ಬರ್ಗ್ ಜೊತೆಗೆ ಚಿತ್ರವನ್ನೂ ಸಹ ರಾಜಮೌಳಿ ಹಂಚಿಕೊಂಡಿದ್ದರು. 'ಜುರಾಸಿಕ್ ಪಾರ್ಕ್', 'ಇಟಿ', 'ಸೇವಿಂಗ್ ಪ್ರೈವೇಟ್ ರಿಯಾನ್', 'ಶಿಂಡರ್ಸ್ ಲಿಸ್ಟ್' ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನು ಸ್ಪೀಲ್‌ಬರ್ಗ್ ನೀಡಿದ್ದಾರೆ

ಆಸ್ಕರ್ ಗೆಲ್ಲುವ ನಿರೀಕ್ಷೆಯಲ್ಲಿ ಚಿತ್ರತಂಡ
ರಾಜಮೌಳಿ ನಿರ್ದೇಶಿಸಿ ಜೂ ಎನ್‌ಟಿಆರ್, ರಾಮ್ ಚರಣ್ ತೇಜ ನಟಿಸಿರುವ 'RRR' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಬಾರಿಯ ಆಸ್ಕರ್ ಗೆಲ್ಲುವ ಸಾಧ್ಯತೆಯೂ ಇದೆ. ಈಗಾಗಲೇ ಪ್ರತಿಷ್ಟಿತ ಗ್ರಾಮಿ ಪ್ರಶಸ್ತಿಯನ್ನು ಅತ್ಯುತ್ತಮ ಹಾಡು ವಿಭಾಗದಲ್ಲಿ ಪಡೆದಿದೆ. ಕ್ರಿಟಿಕ್ ಚಾಯ್ಸ್ ಅವಾರ್ಡ್ ನಲ್ಲಿಯೂ ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ಹಾಗೂ ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಮಾರ್ಚ್ ತಿಂಗಳಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಆಸ್ಕರ್ ಗೆಲ್ಲುವ ನಿರೀಕ್ಷೆಯನ್ನು ಸಿನಿಮಾ ಹುಟ್ಟು ಹಾಕಿದೆ.