For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಿಕಿನಿಯಲ್ಲಿ ಮಾಜಿ ಬಾಂಡ್ ಗರ್ಲ್

  By ಜೇಮ್ಸ್ ಮಾರ್ಟಿನ್
  |

  ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಬಾಂಡ್ ಗರ್ಲ್ ಗಳು ಟೂ ಪೀಸ್, ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ. ಆದರೆ, 60ಕ್ಕೆ ಅರಳೋ ಮರಳೋ ಎನ್ನುವ ಕಾಲದಲ್ಲೂ ಮಾಜಿ ಬಾಂಡ್ ಗರ್ಲ್ ಒಬ್ಬರು ಬಿಕಿನಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಹೌದು ಮಾಜಿ ಬಾಂಡ್ ಗರ್ಲ್ ಜೇನ್ ಸೀಮೌರ್ ಬಟ್ಟೆ ಕಳಚಿ ಟೂ ಪೀಸ್ ನಲ್ಲಿ ನಿಂತು ಕೆಮೆರಾ ಮುಂದೆ ಪೋಸ್ ನೀಡಿದ್ದಾರೆ. 62ರ ಹರೆಯ ಜೇನ್ ಫೋಟೊ ಶೂಟ್ ಮಾಡಿದ್ದು ಈಗ ಭಾರಿ ಚರ್ಚೆಗೀಡಾಗಿದೆ. ಘೇರಿ ಛೇರಿ ವಿನ್ಯಾಸ ವಸ್ತ್ರಗಳಿಗೆ ರೂಪದರ್ಶಿಯಾಗಿ ಮಾಜಿ ಬಾಂಡ್ ಗರ್ಲ್ ಕಾಣಿಸಿಕೊಂಡಿದ್ದಾರೆ. 62ನೇ ಹುಟ್ಟುಹಬ್ಬವನ್ನು ಹುಟ್ಟುಡುಗೆಯಲ್ಲೇ ಆಚರಿಸಿಕೊಳ್ಳುವ ಇರಾದೆ ಹೊಂದಿದ್ದ ಜೇನ್ ಕಡೆಗೆ ಬಿಕಿನಿಯಲ್ಲಿ ಮಾನ ಮುಚ್ಚಿಕೊಂಡಿದ್ದಾರೆ.

  ಟೂ ಪೀಸ್ ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಂಡಿರುವ ಸೀಮೌರ್ ಅವರು ತಮ್ಮ ಊರು ಕ್ಯಾಲಿಫೋರ್ನಿಯಾದ ಮಲಿಬು ಬಳಿ ಕಡಲಿನಲ್ಲೇ ತೆಗೆದಿದ್ದಂತೆ. ಆಕೆ ಚಿತ್ರಗಳನ್ನು ತೆಗೆದಿದ್ದು ಸ್ವಂತ ಮಗ ಛಾಯಾಗ್ರಾಹಕ್ ಸೀನ್ ಫಿನ್ ಎಂಬುದು ವಿಶೇಷ ಎಂದು ಕಾಂಟ್ಯಾಕ್ ಮ್ಯೂಸಿಕ್.ಕಾಂ ವರದಿ ಮಾಡಿದೆ.

  ನನಗೆ ಮೊದಲು ವಸ್ತ್ರ ವಿನ್ಯಾಸಕರು ಕೊಟ್ಟ ಗಿಫ್ಟ್ ಪಡೆದಾಗ ಹಾಸ್ಯ ಮಾಡುತ್ತಿರಬಹುದು ಎನಿಸಿತ್ತು. ಏಕೆಂದರೆ ನಾನು 20 ರ ಹರೆಯದಲ್ಲಿದ್ದಾಗ ಕೊನೆ ಸಲ ನಾನು ಬಿಕಿನಿ ತೊಟ್ಟಿದ್ದು ಬಿಟ್ಟರೆ ಮತ್ತೆ ಟೂ ಪೀಸ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

  ಆದರೆ, ಕಡಲಿನಲ್ಲಿ ನಿಂತು ಒಮ್ಮೆ ಯೋಚಿಸಿದಾಗ ನನ್ನ ದೇಹದ ಸಿರಿ ಮುಚ್ಚಿಟ್ಟು ಏನು ಮಾಡುವುದು ಎನಿಸಿತು. ನನ್ನ ಮಗ ಕೂಡಾ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ಮೇಲೆ ಫೋಟೊ ಶೂಟ್ ನಡೆಸಲಾಯಿತು ಎಂದು ಜೇನ್ ಹೇಳಿದ್ದಾರೆ.

  ನಾನು ಇಡೀ ಫೋಟೋ ಶೂಟ್ ನಲ್ಲಿ ಕೃತಕ ಕೇಶ ವಿನ್ಯಾಸ, ಮೇಕಪ್ ಏನು ಬಳಸಿಲ್ಲ. ಇದು ಮಗನಿಂದ ತಾಯಿಗೆ ಬರ್ಥಡೇ ಗಿಫ್ಟ್, ಗರ್ಲ್ ಫ್ರೆಂಡ್ ನಿಂದ ಫ್ರೆಂಡ್ ಗೆ ಗಿಫ್ಟ್ ಎಂದು ಜೇನ್ ಹೇಳಿದ್ದಾರೆ ಎಂದು ಬ್ರಿಟನ್ನಿನ ಹೆಲ್ಲೋ ಮ್ಯಾಗಜೀನ್ ವರದಿ ಮಾಡಿದೆ.

  ಸೀಮೌರ್ ಅವರು ತಮ್ಮ ಚಿತ್ರಗಳನ್ನು ನೋಡಿ ತಾವೇ ಅಚ್ಚರಿ ಪಟ್ಟಿದ್ದಾರೆ. ನಾನು ಎಲ್ಲರಂತೆ ಸಾಮಾನ್ಯ ಡಯೆಟ್ ಫಾಲೋ ಮಾಡುತ್ತೇನೆ. ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸುತ್ತೇನೆ ಅಷ್ಟೆ ಎಂದು ಜೇನ್ ಹೇಳಿದ್ದಾರೆ.

  ಜೇನ್ ಸೀಮೌರ್ ಎಂದ ಕೂಡಲೆ ನೆನಪಾಗುವುದು ಬಾಂದ್ ಚಿತ್ರ ಲಿವ್ ಅಂಡ್ ಲೆಟ್ ಡೈ(1973), ಸಮ್ ವೇರ್ ಇನ್ ಟೈಮ್ (1980) ಹಾಗೂ ಈಸ್ಟ್ ಆಫ್ ಈಡೇನ್ (1981). ಎಮ್ಮಿ ಪ್ರಶಸ್ತಿ ಹಾಗೂ ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿರುವ ಜೇನ್ ಅವರ ಹೆಸರನ್ನು ಹಾಲಿವುಡ್ ನ ವಾಕ್ ಆಫ್ ಫೇಮ್ ಪಟ್ಟಿಯಲ್ಲೂ ಸೇರಿಸಲಾಗಿದೆ. ಬ್ರಿಟಿಷ್ ಎಂಪೈರ್ ನ ಅಧಿಕಾರಿಯಾಗಿ ಕೂಡಾ ಜೇನ್ ಕಾರ್ಯ ನಿರ್ವಹಿಸಿದ್ದರು. ಅರವತ್ತಕ್ಕೆ ಅರಳು ಮರಳು ಎನ್ನುವ ಬದಲು ಹಳೆ ನೆನಪು ಮರಕಳಿಸುತ್ತದೆ ಎಂಬುದನ್ನು ಜೇನ್ ನೋಡಿ ಹೇಳಬಹುದು (ಐಎಎನ್ಎಸ್), ಚಿತ್ರ ಕೃಪೆ ; Hello!

  English summary
  Actress Jane Seymour has stripped down to a bikini for a photoshoot at the age of 62. Seymour was given the bikini by her designer friend Cheri Ingle on her 62nd birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X