For Quick Alerts
  ALLOW NOTIFICATIONS  
  For Daily Alerts

  'ಜೋಕರ್' ಆದ ಚುನಾವಣಾ ಅಭ್ಯರ್ಥಿ ನೋಡಿ ನೆಟ್ಟಿಗರು ಕಂಗಾಲು

  |

  ಜೋಕರ್ ವೇಷ ಧರಿಸಿ ಕಚೇರಿಗೆ ಬಂದ ಚುನಾವಣಾ ಅಭ್ಯರ್ಥಿ ಈಗ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಹೀಗೆ ಜೋಕರ್ ವೇಷ ಧರಿಸಿ ಚುನಾವಣೆಗೆ ಸ್ಪರ್ಧಿಸಿದ್ದು ಜಪಾನಿನ ವ್ಯಕ್ತಿ.

  ಟೋಕಿಯೋದ ಹೊರವಲಯ ಒಂದು ಸಣ್ಣ ಜಪಾನೀಸ್ ಪ್ರಾಂತ್ಯದ ವ್ಯಕ್ತಿ ಜೋಕರ್ ವೇಷ ಧರಿಸಿ ಗರ್ವನರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚಿಬಾ ಪ್ರಿಫೆಕ್ಟರ್ ಗವರ್ನರ್ ಸ್ಪರ್ಧೆಯಲ್ಲಿರುವ ವ್ಯಕ್ತಿ ಹೆಸರು ಯೂಸುಕೆ ಕವಾಯಿ. ಖ್ಯಾತ ನಟ ಜೊವಾಕ್ವಿನ್ ಫೀನಿಕ್ಸ್ ಅಭಿನಯದ ಜೋಕರ್ ಪಾತ್ರದಿಂದ ಸ್ಫೂರ್ತಿ ಪಡೆದು ಯೂಸುಕೆ ಚುನಾವಣೆಯಲ್ಲಿ ಜೋಕರ್ ರೀತಿ ಕಾಣಿಸಿಕೊಳ್ಳುವ ಮೂಲಕ ಎಲ್ಲರೂ ಗೊಂದಲಕ್ಕೀಡಾಗುವಂತೆ ಮಾಡಿದ್ದಾರೆ.

  ಈ ವರ್ಷ ನೋಡಬೇಕಾದ ಹತ್ತು ಹಾಲಿವುಡ್ ಸಿನಿಮಾಗಳುಈ ವರ್ಷ ನೋಡಬೇಕಾದ ಹತ್ತು ಹಾಲಿವುಡ್ ಸಿನಿಮಾಗಳು

  ಜೋಕರ್ ರೀತಿ ಮುಖಕ್ಕೆ ಬಣ್ಣ ಮತ್ತು ಕಾಸ್ಟ್ಯೂಮ್ ಧರಿಸಿರುವ ವ್ಯಕ್ತಿ ನೋಡಿದ್ರೆ ಥೇಟ್ ಸೂಪರ್ ವಿಲನ್ ಜೋಕರ್ ಹಾಗೆ ಕಾಣಿಸುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಈ ಜೋಕರ್ ರಾಜಕಾರಣಿ, ನಾಮನಿರ್ದೇಶನವನ್ನು ಘೋಷಿಸಿದ ನಂತರ, ತನ್ನ ವಯಕ್ತಿಕ ಯೂಟ್ಯೂಬ್ ಖಾತೆಯಲ್ಲಿ ಪ್ರಾಂತ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

  Recommended Video

  ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada

  ವಿಶ್ವದ ಗಮನ ಸೆಳೆಯುತ್ತಿರುವ 40 ವರ್ಷದ ಈ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Japanese political candidate Yusuke Kawai dressed as Joker.
  Sunday, March 14, 2021, 11:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X