»   » ಆಸ್ಕರ್ ರೇಸಿನಲ್ಲಿ ನಮ್ಮ ಗಾಯಕಿ ಬಾಂಬೆ ಜಯಶ್ರೀ

ಆಸ್ಕರ್ ರೇಸಿನಲ್ಲಿ ನಮ್ಮ ಗಾಯಕಿ ಬಾಂಬೆ ಜಯಶ್ರೀ

Posted By:
Subscribe to Filmibeat Kannada
Jayashri Ramnath’s ‘Life of Pi’ lullaby nominated for the Oscars
2009ರಲ್ಲಿ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ನಂತರ ಚೆನ್ನೈ ಮೂಲದ ಗಾಯಕಿ ಬಾಂಬೆ ಜಯಶ್ರೀ ಅವರು ಆಸ್ಕರ್ ರೇಸ್ ನಲ್ಲಿದ್ದಾರೆ. ಮುಂಬೈಯಲ್ಲಿ ನೆಲೆಸಿರುವ ಜಯಶ್ರೀ ಅವರು ಕನ್ನಡದಲ್ಲೂ ಕೆಲವು ಗೀತೆಗಳನ್ನು ಹಾಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಅಂಗ್ ಲೀ ಅವರ 'ಲೈಫ್ ಆಫ್ ಪೈ' ಚಿತ್ರದ ಆರಂಭದ ಹಾಗೂ ಕೊನೆ ದೃಶ್ಯಗಳಲ್ಲಿ ಬರುವ ಹಾಡು ಶ್ರೇಷ್ಠ ಸಂಗೀತ(Original Song) ವಿಭಾಗದಲ್ಲಿ ಆಸ್ಕರ್ ಪಟ್ಟಿಯಲ್ಲಿ ಸ್ಪರ್ಧಿಸಿದೆ. ಒಟ್ಟಾರೆ ಲೈಫ್ ಆಫ್ ಪೈ ಚಿತ್ರ 11 ವಿಭಾಗದಲ್ಲಿ ಆಸ್ಕರ್ ನಾಮಾಂಕಣಗೊಂಡಿದೆ.

ಮೈಕಲ್ ಡನ್ನ ಅವರು ಕಂಪೋಸ್ ಮಾಡಿರುವ ಈ ಗೀತೆಗೆ ಬಾಂಬೆ ಜಯಶ್ರೀ ಅವರು ಸಾಹಿತ್ಯ ರಚಿಸಿದ್ದಾರೆ. ಒಂದು ಕೆಟಗೆರಿಯಲ್ಲಿ 5 ನಾಮಾಂಕಣ ಮಾತ್ರ ಸಾಧ್ಯವಿರುವುದರಿಂದ ಜಯಶ್ರೀ ಅವರಿಗೆ ಪ್ರಶಸ್ತಿ ಒಲಿಯುವ ಸಾಧ್ಯತೆ ಶೇ 20ರಷ್ಟಿದೆ.

ತಾಯಿಯೊಬ್ಬಳು ತನ್ನ ಮಗುವನ್ನು ನಿದ್ರೆಗೆ ಜಾರಿಸುವ ಈ ಲಾಲಿ ಹಾಡು ಸಾಮಾಜಿಕ ಜಾಲ ತಾಣ, ಯೂಟ್ಯೂಬ್ ನಲ್ಲಿ ಈಗಾಗಲೇ ಜನಪ್ರಿಯಗೊಂಡಿದೆ.

ದೇಶದ ಖ್ಯಾತ ಸಂಗೀತಗಾರರಾದ ರೆಹಮಾನ್, ಇಳಯರಾಜ, ಹ್ಯಾರೀಸ್ ಜಯರಾಜ್, ಯುವನ್ ಶಂಕರ್ ರಾಜ ಅವರ ಸಂಯೋಜನೆಯಲ್ಲಿ ಜಯಶ್ರೀ ಹಾಡಿದ್ದಾರೆ.

ನಾಡಿನ ಖ್ಯಾತ ಶಾಸ್ತ್ರೀಯ ಗಾಯಕಿಯಾಗಿರುವ ಜಯಶ್ರೀ ಅವರು ಚಾಮರಾಜಪೇಟೆಯ ರಾಮನವಮಿ ಸಂಗೀತೋತ್ಸವದಲ್ಲೂ ಅನೇಕ ಬಾರಿ ಕಚೇರಿ ನೀಡಿದ್ದಾರೆ. ಕನ್ನಡದಲ್ಲಿ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ 'ಪ್ರೀತ್ಸೆ ಅಂಥಾ ಪ್ರಾಣ ತಿನ್ನೋ..' ಹಾಡು ಜನಪ್ರಿಯಗೊಂಡಿದೆ. ತಮಿಳಿನಲ್ಲಿ 'ವಸೀಗರ..' ಹಿಂದಿನಲ್ಲಿ 'ಜರಾ ಜರಾ..' ಹಾಡು ಸಂಗೀತ ಪ್ರೇಮಿಗಳ ಅಚ್ಚುಮೆಚ್ಚಿನ ಹಾಡು

ಸಂಗೀತಗಾರ ಮೈಕಲ್ ಡನ್ನ ಅವರು ಈ ಹಿಂದೆ ದೀಪಾ ಮೆಹ್ತಾ 'ವಾಟರ್', ಮೀರಾ ನಾಯರ್ ಅವರ' ಮಾನ್ಸೂನ್ ವೆಡ್ಡಿಂಗ್' ಚಿತ್ರಗಳಿಗೆ ಸಂಗೀತ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಳಿದಂತೆ ಆಸ್ಕರ್ ರೇಸ್ ನಲ್ಲಿರುವ ನೆಚ್ಚಿನ ಚಿತ್ರಗಳು ಇಂತಿದೆ:
* ಸ್ಟೀವನ್ ಸ್ಪೀಲ್ ಬರ್ಗ್ ಅವರ 'Lincoln' -12 ವಿಭಾಗಗಳಲ್ಲಿ ನಾಮಾಂಕಣ
* ಅಂಗ್ ಲೀ ಅವರ 3ಡಿ ಚಿತ್ರ Life of Pi- 11 ವಿಭಾಗಗಳಲ್ಲಿ ನಾಮಾಂಕಣ
* Silver Linings Playbook- 4 ವಿಭಾಗಗಳಲ್ಲಿ ನಾಮಾಂಕಣ
* ಜೇಮ್ಸ್ ಬಾಂಡ್ ಚಿತ್ರ 'Skyfall' -5 ವಿಭಾಗಗಳಲ್ಲಿ ನಾಮಾಂಕಣ

ಹೆಚ್ಚಿನ ಮಾಹಿತಿಗೆ ಆಸ್ಕರ್ ವೆಬ್ ತಾಣದ ಈ ಕೊಂಡಿಯನ್ನು ಕ್ಲಿಕ್ಕಿಸಿ

English summary
The 85th Academy Awards is due to take place on February 24th and the winners will be announced on that day in the Dolby Theatre in Hollywood. Check out the nominees in the main categories for this year's Oscars including our Jayashri Ramnath’s ‘Life of Pi’ lullaby

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada