»   » ಬಾಯ್ ಫ್ರೆಂಡ್ ಜೊತೆ ಜೆನ್ನಿಫರ್ ಲೋಪೆಜ್ ಕುಚ್ ಚುಚ್

ಬಾಯ್ ಫ್ರೆಂಡ್ ಜೊತೆ ಜೆನ್ನಿಫರ್ ಲೋಪೆಜ್ ಕುಚ್ ಚುಚ್

Posted By: ರವಿಕಿಶೋರ್
Subscribe to Filmibeat Kannada

ಹಾಲಿವುಡ್ ನಟಿ, ಪಾಪ್ ತಾರೆ ಜೆನ್ನಿಫರ್ ಲೋಪೆಜ್ ಹಾಗೂ ಆಕೆಯ ಬಾಯ್ ಫ್ರೆಂಡ್ ಕಾಸ್ಪೆರ್ ಸ್ಮಾರ್ಟ್ ಕದ್ದುಮುಚ್ಚಿ ಪ್ರೇಮ ಸಲ್ಲಾಪ ನಡೆಸುತ್ತಿರುವುದು ಹೊಸದೇನಲ್ಲ. ಇವರಿಬ್ಬರ ನಡುವಿನ ಸುದ್ದಿಗಳು ಬಿತ್ತರವಾದಾಗ ಜೆನ್ನಿಫರ್ ಕೆಂಡಮಂಡಲವಾಗಿ ಖಂಡಿಸುತ್ತಾ ಬಂದಿದ್ದರು.

ಆದರೆ ಇತ್ತೀಚೆಗೆ ಇವರಿಬ್ಬರು ಕದ್ದುಮುಚ್ಚಿ ಆಡಿದ ಕಣ್ಣಾಮುಚ್ಚಾಲೆ ಬಹಿರಂಗವಾಗಿದೆ. ಈ ಮೂಲಕ ಜೆನ್ನಿ ಬಾಯಿಗೆ ಬೀಗ ಬಿದ್ದಂತಾಗಿದೆ. 'ಅಮೆರಿಕನ್ ಐಡಲ್' ಶೂಟಿಂಗ್ ನಲ್ಲಿ ಈ ಕಣ್ಣಾಮುಚ್ಚಾಲೆ ನಡೆದಿದೆ ಎನ್ನಲಾಗಿದೆ. 45ರ ಹರೆಯದ ಜೆನ್ನಿಫರ್ ಹಾಗೂ 27ರ ಪ್ರಾಯದ ಕೊರಿಯೋಗ್ರಾಫರ್ ಕಾಸ್ಪೆರ್ ಜೊತೆಗಿನ ಸಂಬಂಧಕ್ಕೆ ಇದೀಗ ಹೊಸ ಅರ್ಥ ಸಿಕ್ಕಂತಾಗಿದೆ. [ಜೆನ್ನಿಫರ್ 'ಹಾಟ್' ವರ್ಕ್ ಔಟ್ ವಿಡಿಯೋ ನೋಡಿ]

Jennifer Lopez and Casper Smart confirm dating with kiss

ತನ್ನ ಗಂಡ ಮಾರ್ಕ್ ಆಂಟೋನಿ ಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ಕಾಸ್ಪೆರ್ ಗೆ ಹತ್ತಿರವಾಗುತ್ತಾ ಬಂದಿದ್ದಾರೆ ಜೆನ್ನಿ. ಕಳೆದ ವರ್ಷ ನಡೆದ ಜೆನ್ನಿಫರ್ ವರ್ಲ್ಡ್ ಟೂರ್ ಗೆ ಕಾಸ್ಪೆರ್ ಪ್ರಮುಖ ಕೊರಿಯೋಗ್ರಾಫರ್ ಆಗಿದ್ದರು. ಇಬ್ಬರೂ ಕಲೆತು ಬೆರತು ಕೆಲಸ ಮಾಡಿದ ಕಾರಣ ಇನ್ನಷ್ಟು ಹತ್ತಿರವಾದರು.

ತನ್ನಿಬ್ಬರು ಅವಳಿಜವಳಿ ಮಕ್ಕಳಿಗೂ ಕಾಸ್ಪೆರ್ ಅಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದರು ಜೆನ್ನಿಫರ್. ಬಟ್ಟೆ ಬದಲಾಯಿಸಿದಂತೆ ಗಂಡಂದಿರನ್ನು ಬದಲಾಯಿಸುತ್ತಾ ಇದುವರೆಗೂ ಮೂರು ಬಾರಿ ಮದುವೆಯಾಗಿ ವಿಚ್ಛೇದನವನ್ನೂ ಪಡೆದಿದ್ದಾರೆ.

Jennifer Lopez and Casper Smart confirm dating with kiss

ಆದರೆ ನಾಲ್ಕನೆ ಮದುವೆಗೆ ಮಾತ್ರ ಕೊಂಚ ಟೈಮ್ ತಗೊಳ್ಳುತ್ತಿದ್ದಾರೆ. ಸದ್ಯಕ್ಕೆ ಒಂಟಿಯಾಗಿರುವ ಅವರ ಬಾಳಿನಲ್ಲಿ ಕಾಸ್ಪೆರ್ ಸ್ಮಾರ್ಟ್ ಅಡಿಯಿಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ಓಡಾಡುತ್ತಾ ಮಾಧ್ಯಮಗಳ ಗಮನಸೆಳೆಯುತ್ತಿದ್ದಾರೆ. ಈಗಾಗಲೆ ಇವರಿಬ್ಬರಿಗೂ ಮದುವೆಯಾಗಿದೆ ಎಂಬ ಸುದ್ದಿಯೂ ಇದೆ.

ಜನಪ್ರಿಯತೆಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಅವರ ಒಟ್ಟಾರೆ ಆಸ್ತಿ ಮೌಲ್ಯವೇ ಅಂದಾಜು 400 ಮಿಲಿಯನ್ ಡಾಲರ್ಸ್ (ರು.2,500 ಕೋಟಿ). ಇಷ್ಟೆಲ್ಲಾ ದುಡ್ಡಿದ್ದರೂ ಹಣ ಸಂಪಾದನೆಗೆ ಯಾವುದೇ ಚಾನ್ಸ್ ಸಿಕ್ಕಿದರೂ ಜೆನ್ನಿಫರ್ ಮಿಸ್ ಮಾಡಿಕೊಳ್ಳಲ್ಲ.

Jennifer Lopez and Casper Smart confirm dating with kiss

ತನ್ನ ಮಕ್ಕಳಿಗೆ ತಂದೆ ಇಲ್ಲವಲ್ಲಾ ಎಂಬ ನೋವು ಕಾಡುತ್ತಿದೆ. ಆದರೂ ಅವರನ್ನು ಜಾಗ್ರತೆಯಿಂದ ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಜೆನ್ನಿಫರ್. ಮೂರು ಮದುವೆಗಳು ಮುರಿದುಬಿದ್ದ ಬಳಿಕ ನಾಲ್ಕನೇ ಮದುವೆಗೂ ಜೆನ್ನಿಫರ್ ಮನಸ್ಸು ಮಾಡಿದ್ದಾರೆ.

English summary
After playing hide and seek for a long time and denying dating rumours, Jennifer Lopez and Casper Smart were spotted kissing backstage during the shooting of the 14th season of "American Idol" which just confirmed that they rekindled their romance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada