»   » ಜೆನ್ನಿಫರ್ ಲೋಫೆಜ್ ಖಾಸಗಿ ಡಾನ್ಸ್ ಶೋಗೆ ರು.11 ಕೋಟಿ

ಜೆನ್ನಿಫರ್ ಲೋಫೆಜ್ ಖಾಸಗಿ ಡಾನ್ಸ್ ಶೋಗೆ ರು.11 ಕೋಟಿ

Posted By:
Subscribe to Filmibeat Kannada

ಹಾಲಿವುಡ್ ನಟಿ, ಪಾಪ್ ತಾರೆ ಜೆನ್ನಿಫರ್ ಲೋಪೆಜ್ ಬಗ್ಗೆ ಹಾಗೂ ಜಗತ್ತಿನಾದ್ಯಂತ ಅವರಿಗಿರುವ ಜನಪ್ರಿಯತೆಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಅವರ ಒಟ್ಟಾರೆ ಆಸ್ತಿ ಮೌಲ್ಯವೇ ಅಂದಾಜು 400 ಮಿಲಿಯನ್ ಡಾಲರ್ಸ್ (ರು.2,500 ಕೋಟಿ). ಇಷ್ಟೆಲ್ಲಾ ದುಡ್ಡಿದ್ದರೂ ಹಣ ಸಂಪಾದನೆಗೆ ಯಾವುದೇ ಚಾನ್ಸ್ ಸಿಕ್ಕಿದರೂ ಜೆನ್ನಿಫರ್ ಮಿಸ್ ಮಾಡಿಕೊಳ್ಳಲ್ಲ.

ತಮ್ಮ ಫೇಸ್ ಬುಕ್ ಮೂಲಕ ಆಗಿಂದ್ದಾಗ್ಗೆ ತಾಜಾ ಸಮಾಚಾರವನ್ನು ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕ್ರಿಸ್ಮಸ್ ಪ್ರಯುಕ್ತ ಮಕಾವುನಲ್ಲಿ ಒಂದು ಖಾಸಗಿ ಡಾನ್ಸ್ ಪಾರ್ಟಿಯಲ್ಲಿ ತಮ್ಮ ಮೈ ಬಳುಕಿಸಿದರು. ಇದಕ್ಕಾಗಿ ಅವರು 1.75 ಡಾಲರ್ (ರು.11 ಕೋಟಿಗೂ ಅಧಿಕ) ಚಾರ್ಚ್ ಮಾಡಿದರು.

Jennifer Lopez

ನಲವತ್ತೈದರ ಹರೆಯದ ಜೆನ್ನಿಫರ್ ಈಗಲೂ ತಮ್ಮ ಸೆಕ್ಸಿ ಲುಕ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಕೇವಲ 40 ನಿಮಿಷಗಳ ಕಾಲ ಕುಣಿಯಲು 1.75 ಕೋಟಿ ಸಂಭಾವನೆ ಪಡೆದಿದ್ದಾರೆ. ಇದಕ್ಕಾಗಿ ಅಮೆರಿಕಾದಿಂದ ಮಕಾವುವರೆಗೂ ವಿಶೇಷ ವಿಮಾನದಲ್ಲಿ ಅವರನ್ನು ಕರೆಸಲಾಗಿತ್ತಂತೆ.

ಇದುವರೆಗೂ ಜೆನ್ನಿಫರ್ ಲೋಪೆಜ್ ಮೂರು ಸಲ ಮದುವೆಯಾಗಿ ವಿಚ್ಛೇದನವನ್ನೂ ಪಡೆದಿದ್ದಾರೆ. ಸದ್ಯಕ್ಕೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ ಜೆನ್ನಿಫರ್. ಪ್ರೀತಿ, ಪ್ರೇಮ ವಿಚಾರದಲ್ಲಿ ಸಾಕಷ್ಟು ಎಡವಿದೆ ಎಂದು ಪಶ್ಚಾತಾಪವನ್ನೂ ಪಟ್ಟಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ತನ್ನ ಮಕ್ಕಳಿಗೆ ತಂದೆ ಇಲ್ಲವಲ್ಲಾ ಎಂಬ ನೋವು ಕಾಡುತ್ತಿದೆ. ಆದರೂ ಅವರನ್ನು ಜಾಗ್ರತೆಯಿಂದ ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಜೆನ್ನಿಫರ್. ಮೂರು ಮದುವೆಗಳು ಮುರಿದುಬಿದ್ದ ಬಳಿಕ ನಾಲ್ಕನೇ ಮದುವೆಗೂ ಜೆನ್ನಿಫರ್ ಮುಂದಾಗಿದ್ದರು. ಆ ಸುದ್ದಿ ಇಲ್ಲಿ ಓದಿ. (ಏಜೆನ್ಸೀಸ್)

English summary
Hollywood diva, pop star Jennifer Lopez was paid 11 crore for a 40 minute performance. It was a private concert in Macau. She is worth almost $400 million. But Jennifer Lopez still seems interested in making as much money as she possibly can.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada