For Quick Alerts
  ALLOW NOTIFICATIONS  
  For Daily Alerts

  ಜಿಮ್ ಕ್ಯಾರಿಯ ಗರ್ಲ್ ಫ್ರೆಂಡ್ ವೈಟ್ ಆತ್ಮಹತ್ಯೆ

  By ಜೇಮ್ಸ್ ಮಾರ್ಟಿನ್
  |

  ಹಾಲಿವುಡ್ ನಲ್ಲಿ ವೈವಿಧ್ಯಮಯ ನಟನೆಗೆ ಹೆಸರಾಗಿರುವ ಜಿಮ್ ಕ್ಯಾರಿ ಅವರ ಒಂದು ಕಾಲದ ಗರ್ಲ್ ಫ್ರೆಂಡ್ ಕಥ್ರಿಯೋನಾ ವೈಟ್ ಅವರು ಲಾಸ್ ಏಂಜಲೀಸ್ ನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

  53ವರ್ಷ ವಯಸ್ಸಿನ ಜಿಮ್ ಕ್ಯಾರಿ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

  "White was a truly kind and delicate Irish flower, too sensitive for this soil, to whom loving and being loved was all that sparkled," ಎಂದು ಕಾವ್ಯಾತ್ಮಕವಾಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

  ಮಾರ್ಚ್ 2012ರಲ್ಲಿ ಇಬ್ಬರು ಡೇಟಿಂಗ್ ಮಾಡಲು ಆರಂಭಿಸಿದ್ದರು. ಒಂದು ವರ್ಷದ ಸಾಂಗತ್ಯದ ನಂತರ ಬೇರ್ಪಟ್ಟಿದ್ದರು. ಮೇ 2015ರಲ್ಲಿ ಮತ್ತೊಮ್ಮೆ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ನ್ಯೂಯಾರ್ಕ್ ನಲ್ಲಿ ಈ ಜೋಡಿ ಸುತ್ತಾಟ ಜೋರಾಗಿತ್ತು.

  28 ವರ್ಷ ವಯಸ್ಸಿನ ವೈಟ್ ಅವರು ಡೇವಿಡ್ ಹಸೆಲ್ ಹಾಫ್ ಹಾಗೂ ಲಿಂಡಿ ಗ್ರೀನ್ ವುಡ್ ಜೊತೆಗಿನ ಹೈ ಫ್ರೊಫೈಲ್ ಶೂಟ್ ಗಳಲ್ಲಿ ಪಾಲ್ಗೊಂಡಿದ್ದರು. ವೈಟ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಟ್ ಸಾವು ಆಘಾತ ತಂದಿದೆ ಎಂದು ಜಿಮ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.(ಪಿಟಿಐ)

  English summary
  Actor Jim Carrey’s on-again-off-again girlfriend, Cathriona White, was found dead in her home in Los Angeles from an apparent suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X