For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಜಾಕ್ವಿನ್ ಫೀನಿಕ್ಸ್, ಬ್ರಾಡ್ ಪಿಟ್

  By ಜೇಮ್ಸ್ ಮಾರ್ಟಿನ್
  |

  ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಆಯೋಜನೆಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಹಾಲಿವುಡ್ ನ ಸ್ಟಾರ್ ನಟ ಜಾಕ್ವಿನ್ ಫೀನಿಕ್ಸ್ ಅವರು ಜೋಕರ್ ಚಿತ್ರದ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

  ಆಸ್ಕರ್ ಪ್ರಶಸ್ತಿ ಗೆಲ್ಲಲು ಮುನ್ನಡಿಯಂತಿರುವ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಟ್ಟಿಯಲ್ಲಿ ಜನಪ್ರಿಯ ನಟ ಬ್ರಾಡ್ ಪಿಟ್ ಕೂಡಾ ಕಾಣಿಸಿಕೊಂಡಿದ್ದು, ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್ ಚಿತ್ರಕ್ಕಾಗಿ 77ನೇ ಗೋಲ್ಡನ್ ಗೋಬ್ಸ್ ಪೋಷಕ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

  'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು

  ಲಾಸ್ ಏಂಜಲೀಸ್ ನ ಬೆವರ್ಲಿ ಹಿಲ್ಟನ್ ಹೋಟೆಲ್ ನಲ್ಲಿ ಈ ಸಮಾರಂಭಕ್ಕೆ ರಿಕಿ ಗೆರ್ವಾಸ್ ನಿರೂಪಣೆಯಿತ್ತು. ಈ ಬಾರಿಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ನಾಮಾಂಕಿತ ಪಟ್ಟಿಯೇ ವೀಕ್ಷಕರಿಗೆ ಅಚ್ಚರಿ ಮೂಡಿಸಿತ್ತು. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಮೆಚ್ಚುಗೆ ಪಡೆದ ಎಚ್ ಬಿ ಒನ ಸರಣಿ ಗೇಮ್ ಆಫ್ ಥ್ರೋನ್ಸ್ ಗೆ ಕೇವಲ ಒಂದು ವಿಭಾಗದಲ್ಲಿ ನಾಮಿನೇಷನ್ ಭಾಗ್ಯ ಸಿಕ್ಕಿತ್ತು.

  ಜೋಕರ್ ಚಿತ್ರಕ್ಕೆ ಉತ್ತಮ ಮೂಲ ಸಂಗೀತ ಸಂಯೋಜನೆ ಮಾಡಿದ ಹಿಲ್ಡರ್ ಗುಯೊಡೊಟಿರ್ ಗೂ ಪ್ರಶಸ್ತಿ ಲಭಿಸಿದೆ. ಉತ್ತಮ ನಟಿ ಪ್ರಶಸ್ತಿ ಜ್ಯೂಡಿ ಚಿತ್ರದ ಅಭಿನಯಕ್ಕಾಗಿ ರೆನೀ ಜೆಲ್ವೆಜರ್ ಗೆ ಲಭಿಸಿದೆ. ಹೆಚ್ಚು ಚರ್ಚಿತವಾದ ಸರಣಿ ಚೆರ್ನೊಬಿಲ್ ಗೆ ಪ್ರಶಸ್ತಿ ಲಭಿಸಿದೆ. ಮ್ಯಾರೇಜ್ ಸ್ಟೋರಿಯ ನಟಿ ಲೌರಾ ಡೆರ್ನ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

  ಲಿಯಾನಾರ್ಡೊ ಡಿಕಾಪ್ರಿಯೋ, ಸ್ಟಾಲೋನ್ ಗೆ ಗೋಲ್ಡನ್ ಗ್ಲೋಬ್ ಲಿಯಾನಾರ್ಡೊ ಡಿಕಾಪ್ರಿಯೋ, ಸ್ಟಾಲೋನ್ ಗೆ ಗೋಲ್ಡನ್ ಗ್ಲೋಬ್

  2020 ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಪಟ್ಟಿ

  ಉತ್ತಮ ಚಿತ್ರ: 1917
  ಉತ್ತಮ ನಟ, ನಟಿ: ನಟಿ ರೆನೀ ಜೆಲ್ವೆಗರ್(ಜ್ಯೂಡಿ), ನಟ ಜಾಕ್ವಿನ್ ಫೀನ್ಸಿಕ್ಸ್ (ಜೋಕರ್)
  ಉತ್ತಮ ಸಂಗೀತ: ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
  ಉತ್ತಮ ಕಾಮಿಡಿ/ಸಂಗೀತ: ನಟಿ ಆವಾಕ್ವಾಫೆನಾ, ದಿ ಫೇರ್ ವೆಲ್
  ನಟ ತರೋನ್ ಎಗರ್ ಟನ್, ರಾಕೆಟ್ ಮನ್
  ಉತ್ತಮ ಪೋಷಕ ನಟ: ಬ್ರಾಡ್ ಪಿಟ್, ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
  ಉತ್ತಮ ಮೂಲ ಸಂಗೀತ: ಜೋಕರ್ ಚಿತ್ರ, ಹಿಲ್ಡರ್ ಗುಯೊನಡೊಟ್ಟಿರ್
  ಉತ್ತಮ ಟಿವಿ ನಿಯಮಿತ ಸರಣಿ: ಚೆರ್ನೊಬಿಲ್.
  ಉತ್ತಮ ನಟನೆ ನಿಯಮಿತ ಸರಣಿ: ಮಿಚೆಲ್ ವಿಲಿಯಮ್ಸ್, ಫೊಸೆ/ವರ್ಡನ್
  ಉತ್ತಮ ನಿರ್ದೇಶನ: ಸ್ಯಾಮ್ ಮೆಂಡೆಸ್, 1917
  ಉತ್ತಮ ನಟನೆ ಟಿವಿ: ಒಲಿವಿಯಾ ಕೊಲ್ಮನ್, ದಿ ಕ್ರೋನ್
  ಉತ್ತಮ ಟಿವಿ, ನಿಯಮಿತ ಸರಣಿ ಪೋಷಕ ಪಾತ್ರ: ನಟಿ ಪ್ಯಾಟ್ರಿಸಿಯಾ ಅರ್ಕ್ವೆಟೆ, ದಿ ಆಕ್ಟ್, ನಟ ಸ್ಟೆಲಾನ್ ಸ್ಕಾರ್ಸ್ಗಾರ್ಡ್, ಚೆರ್ನೊಬಿಲ್.
  ಉತ್ತಮ ಹಾಡು: ಐಯಾಮ್ ಗೋನಾ ಲವ್ ಮಿ ಅಗೇನ್, ರಾಕೆಟ್ ಮ್ಯಾನ್.
  ಉತ್ತಮ ಟಿವಿ ಸರಣಿ-ಸಂಗೀತ/ಕಾಮಿಡಿ: ಫ್ಲೀಬ್ಯಾಗ್
  ಉತ್ತಮ ಪೋಷಕ ನಟಿ: ಲೌರಾ ಡೆರ್ನ್, ಮ್ಯಾರೇಜ್ ಸ್ಟೋರಿ.
  ಉತ್ತಮ ಚಿತ್ರ- ಅನಿಮೇಷನ್: ಮಿಸ್ಸಿಂಗ್ ಲಿಂಕ್
  ಉತ್ತಮ ಚಿತ್ರಕಥೆ: ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
  ಉತ್ತಮ ನಟ, ಟಿವಿ ಸರಣಿ: ಬ್ರಿಯಾನ್ ಕಾಕ್ಸ್, ಸಕ್ಸೆಸನ್
  ಉತ್ತಮ ಚಿತ್ರ: ವಿದೇಶಿ ಭಾಷೆ: ಪ್ಯಾರಸೈಟ್.
  ಟಿವಿ ಸರಣಿ, ಸಂಗೀತ: ನಟಿ ಫಿಯೋಬಿ ವಾಲರ್: ಬ್ರಿಡ್ಜ್, ಫ್ಲೀಬ್ಯಾಗ್
  ನಟ: ರಾಮಿ ಯೂಸೆಫ್, ರಾಮಿ

  ಉತ್ತಮ ಟಿವಿ ಸರಣಿ: ಸಕ್ಸಸನ್
  ಉತ್ತಮ ನಟ, ಟಿವಿ ಸರಣಿ: ರಸಲ್ ಕ್ರೋವ್, ದಿ ಲೌಡೆಸ್ಟ್ ವಾಯ್ಸ್.
  ವಿಶೇಷ ಕರೋಲ್ ಬರ್ನೆಟ್ ಪ್ರಶಸ್ತಿ: ಎಲೆನ್ ಡೆಗೆನೆರೆಸ್.

  English summary
  Hollywood star Joaquin Phoenix won the Golden Globes for the best actor in a motion picture - drama for his performance in "Joker" while Brad Pitt walked away with the best supporting actor trophy for his performance of a gruff stuntman in "Once Upon a Time In Hollywood" at the 77th Golden Globes Awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X