For Quick Alerts
  ALLOW NOTIFICATIONS  
  For Daily Alerts

  ಗೆಲುವಷ್ಟೆ ಮುಖ್ಯ ಹಣವಲ್ಲ: ಪತ್ನಿಯಿಂದ ಬರಬೇಕಿದ್ದ 100 ಕೋಟಿ ಕೈಬಿಟ್ಟ ಜಾನಿ ಡೆಪ್!?

  |

  ಹಾಲಿವುಡ್ ನಟ ಜಾನಿ ಡೆಪ್ ಹಾಗೂ ಮಾಜಿ ಪತ್ನಿ ಅಂಬರ್ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ವಿಶ್ವದ ಗಮನ ಸೆಳೆದಿತ್ತು. ವಿಚಾರಣೆ ಅಂತ್ಯವಾಗಿ, ಜಾನಿ ಡೆಪ್ ಪರವಾಗಿ ತೀರ್ಪು ಪ್ರಕಟವಾಗಿದೆ. ಆ ಮೂಲಕ ಅಂಬರ್ ಹರ್ಡ್ ಮಾಡಿದ್ದ ಆರೋಪಗಳು ಸುಳ್ಳೆಂಬುದು ಸಾಬೀತಾಗಿದೆ.

  ವಿಚಾರಣೆ ನಡೆಸಿದ ಫೇರ್‌ಫಾಕ್ಸ್ ಕೌಂಟಿ ವರ್ಜೀನಿಯಾದ ನ್ಯಾಯಾಲಯವು ಜಾನಿ ಡೆಪ್ ಪರ ತೀರ್ಪು ನಿಡಿ, ಮಾಜಿ ಪತ್ನಿ ಅಂಬರ್ ಹರ್ಡ್ ಮಾನನಷ್ಟ ಪರಿಹಾರವಾಗಿ 10 ಮಿಲಿಯನ್ ಡಾಲರ್, ಆಸ್ತಿ ನಷ್ಟಕ್ಕೆ 5 ಮಿಲಿಯನ್ ಡಾಲರ್ ನೀಡುವಂತೆ ಸೂಚಿಸಿದ್ದು, ಜಾನಿ ಡೆಪ್ ಸಹ ಅಂಬರ್‌ಗೆ 2 ಮಿಲಿಯನ್ ಡಾಲರ್ ನೀಡುವಂತೆ ಸೂಚಿಸಿತ್ತು. ಅಲ್ಲಿದೆ ಜಾನಿ ಡೆಪ್‌ಗೆ 13 ಮಿಲಿಯನ್ ಹಣ ಸೇರಬೇಕಿತ್ತು. ಭಾರತದ ರುಪಾಯಿ ಲೆಕ್ಕಾಚಾರದಲ್ಲಿ 101 ಕೋಟಿ ರು. ಹಣವನ್ನು ಅಂಬರ್‌, ಜಾನಿ ಡೆಪ್‌ಗೆ ಪಾವತಿಸಬೇಕಿತ್ತು.

  'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

  ಆದರೆ ಈಗ ಜಾನಿ ಡೆಪ್‌ ವಕೀಲರ ಕಡೆಯಿಂದ ಹೊರಬಿದ್ದಿರುವ ಹೇಳಿಕೆಯ ಪ್ರಕಾರ, ಜಾನಿ ಡೆಪ್, ಅಂಬರ್ ಹರ್ಡ್‌ ಕಡೆಯಿಂದ ಯಾವುದೇ ಹಣ ಪಡೆದುಕೊಳ್ಳುತ್ತಿಲ್ಲ ಎನ್ನಲಾಗಿದೆ.

  ಈ ಹೋರಾಟ ಹಣಕ್ಕಾಗಿ ಮಾಡಲಿಲ್ಲ: ಜಾನಿ ಪರ ವಕೀಲ

  ಈ ಹೋರಾಟ ಹಣಕ್ಕಾಗಿ ಮಾಡಲಿಲ್ಲ: ಜಾನಿ ಪರ ವಕೀಲ

  ಟಿವಿ ಸಂದರ್ಶನದಲ್ಲಿ ಭಾಗವಹಿಸಿದ್ದ ಜಾನಿ ಡೆಪ್ ಪರ ವಕೀಲ ಬೆಂಜಮಿನ್ ಶಿವ್ ಮಾತನಾಡುತ್ತಾ, ''ದಂಡ ವಸೂಲಿ ಬಗ್ಗೆ ನನ್ನ ಕ್ಲೈಂಟ್ (ಜಾನಿ ಡೆಪ್) ಹೊಂದಿರುವ ಅಭಿಪ್ರಾಯದ ಬಗ್ಗೆ ನಾನು ಹೇಳಲಾಗುವುದಿಲ್ಲ. ಆದರೆ ನಾನು ಮತ್ತು ಜಾನಿ ಡೆಪ್ ಈಗಾಗಲೇ ನ್ಯಾಯಾಲಯದಲ್ಲಿ ಹೇಳಿದ್ದೇವೆ. ಈ ಪ್ರಕರಣವನ್ನು ನಾವು ಹಣಕ್ಕಾಗಿ ಹೋರಾಡುತ್ತಿಲ್ಲ ಬದಲಿಗೆ ಗೌರವವನ್ನು ಮರಳಿ ಸಂಪಾದಿಸುವ ಹೋರಾಟ ಇದಾಗಿತ್ತು'' ಎಂದಿದ್ದಾರೆ.

  ಜಾನಿ ಡೆಪ್ ಗೆಲುವು ಮಾಜಿ ಪತ್ನಿ ಅಂಬರ್‌ಗೆ 116 ಕೋಟಿ ದಂಡ!ಜಾನಿ ಡೆಪ್ ಗೆಲುವು ಮಾಜಿ ಪತ್ನಿ ಅಂಬರ್‌ಗೆ 116 ಕೋಟಿ ದಂಡ!

  ಶ್ರೀಮಂತ ನಟರಲ್ಲಿ ಒಬ್ಬರು ಜಾನಿ

  ಶ್ರೀಮಂತ ನಟರಲ್ಲಿ ಒಬ್ಬರು ಜಾನಿ

  ಬೆಂಜಮಿನ್ ಶಿವ್ ನೀಡಿರುವ ಹೇಳಿಕೆಯಂತೆ ಜಾನಿ ಡೆಪ್, ಕೋರ್ಟ್ ಅಣತಿಯಂತೆ ಅಂಬರ್ ಹರ್ಡ್ ನೀಡಬೇಕಿದ್ದ ಹಣವನ್ನು ನಿರಾಕರಿಸುವ ಸಾಧ್ಯತೆ ಇದೆ. ಹಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರಾದ ಜಾನಿ ಡೆಪ್‌ಗೆ 10 ಮಿಲಿಯನ್ ಡಾಲರ್ ಭಾರಿ ದೊಡ್ಡ ಮೊತ್ತವೇನಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಗೆದ್ದ ಬಳಿಕ ಜಾನಿ ಡೆಪ್‌, ಇಂಗ್ಲೆಂಡ್‌ನ ಭಾರತೀಯ ರೆಸ್ಟೊರೆಂಟ್ 'ವಾರಣಾಸಿ'ಯಲ್ಲಿ ಗೆಳೆಯರೊಟ್ಟಿಗೆ ಪಾರ್ಟಿ ಮಾಡಿ ಒಂದೇ ರಾತ್ರಿಯಲ್ಲಿ 48 ಲಕ್ಷ ರುಪಾಯಿ ಬಿಲ್ ಪಾವತಿ ಮಾಡಿದ್ದರು.

  54 ಕೋಟಿ ಹಣ ನೀಡಿದ್ದ ಜಾನಿ ಡೆಪ್

  54 ಕೋಟಿ ಹಣ ನೀಡಿದ್ದ ಜಾನಿ ಡೆಪ್

  ಈ ಹಿಂದೆ ಜಾನಿ ಡೆಪ್‌, ಅಂಬರ್ ಹರ್ಡ್‌ಗೆ ವಿಚ್ಛೇಧನ ನೀಡಿದಾಗ 54 ಕೋಟಿ ಹಣವನ್ನು ಜೀವನಾಧಾರವಾಗಿ ನೀಡಿದ್ದರು. ಆ ಹಣವನ್ನು ತಾವು ಸಮಾಜ ಕಾರ್ಯಕ್ಕೆ ನೀಡುವುದಾಗಿ ಅಂಬರ್ ಹೇಳಿದ್ದರು. ಆದರೆ ಆ ಹಣವನ್ನು ಅವರು ಯಾವುದೇ ಚಾರಿಟಿಗೆ ನೀಡಿರಲಿಲ್ಲ ಎನ್ನುವುದು ಇತ್ತೀಚೆಗಿನ ವಿಚಾರಣೆ ವೇಳೆ ಬಹಿರಂಗವಾಗಿದೆ. ಇದಕ್ಕೆ ತಮ್ಮ ಆರ್ಥಿಕ ಸಮಸ್ಯೆಗಳೇ ಕಾರಣ ಎಂದು ಅಂಬರ್ ನ್ಯಾಯಾಲಯದಲ್ಲಿ ಹೇಳಿದ್ದರು.

  ಭಾರಿ ನಷ್ಟ ಅನುಭವಿಸಿರುವ ಜಾನಿ ಡೆಪ್

  ಭಾರಿ ನಷ್ಟ ಅನುಭವಿಸಿರುವ ಜಾನಿ ಡೆಪ್

  ಅದು ಮಾತ್ರವೇ ಅಲ್ಲದೆ, ''ನಾನು ತೀವ್ರ ಆರ್ಥಕ ಸಂಕಷ್ಟದಲ್ಲಿದ್ದು, ನನಗೆ 15 ಮಿಲಿಯನ್ ಡಾಲರ್ ಅನ್ನು ಪಾವತಿಸಲು ಸಾಧ್ಯವಿಲ್ಲ'' ಎಂದು ಅಂಬರ್ ಸಹ ನ್ಯಾಯಾಲಯಕ್ಕೆ ಹೇಳಿದ್ದರು. ಇದೀಗ ಜಾನಿ ಡೆಪ್, ಸ್ವತಃ ಅಂಬರ್‌ ಇಂದ ಹಣ ಪಡೆಯದೇ ಇರಲು ನಿರ್ಧರಿಸಿದಂತಿದ್ದು, ಇದು ಅಂಬರ್ ಹರ್ಡ್‌ಗೆ ನಿರಾಳತೆ ಮೂಡಿಸಲಿದೆ. ಆದರೆ ಅಂಬರ್, ಜಾನಿ ಡೆಪ್ ವಿರುದ್ಧ ಮಾಡಿದ ಆರೋಪದಿಂದಾಗಿ ಐಕಾನಿಕ್ ಸಿನಿಮಾ ಸರಣಿ 'ಪೈರೇಟ್ಸ್ ಆಫ್ ಕೆರೆಬಿಯನ್'ನ 'ಕ್ಯಾಪ್ಟನ್ ಜಾಕ್ ಸ್ಪ್ಯಾರೊ' ಪಾತ್ರದಿಂದ ಜಾನಿಯನ್ನು ಡಿಸ್ನಿ ತೆಗೆದು ಹಾಕಿತು. ಇದು ಅವರ ವೃತ್ತಿ ಜೀವನದಲ್ಲಿ ತುಂಬಲಾರದ ನಷ್ಟ.

  English summary
  Johnny Depp may not make Amber Heard to pay 100 crore rs to him. Johnny Depp's lawyer said this fight is not for money.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X