For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಚಿತ್ರದಲ್ಲಿ ಪ್ರೇಮಲೋಕ ಹುಡುಗಿ ಜೂಹಿ

  By Rajendra
  |

  ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ "ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ ಎಷ್ಟು ಬಾರಿ ಹಾಡಿದರು ಚೆನ್ನ..." ಎಂದು ಹಾಡಿದ್ದ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಹಾಲಿವುಡ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ಜೊತೆ ಕೆಲಸ ಮಾಡಲಿದ್ದಾರೆ.

  ಆಸ್ಕರ್ ಪ್ರಶಸ್ತಿ ವಿಜೇತ ಲಾಸ್ಸೆ ಹಾಲ್ ಸ್ಟ್ರಾಮ್ ಹಾಗೂ ಸ್ಟೀವನ್ ಸ್ಪೀಲ್ ಬರ್ಗ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಜೂಹಿ ಅಭಿನಯಿಸಲಿದ್ದಾರೆ. ಈಗಾಗಲೆ ಸಹಿ ಹಾಕಿರುವ ಜೂಹಿ ಶೀಘ್ರದಲ್ಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

  ಈ ಚಿತ್ರದ ಹೆಸರು 'ಹಂಡ್ರಡ್ ಫುಟ್ ಜರ್ನಿ'. ಸದ್ಯಕ್ಕೆ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಭಾರತೀಯ ದಂಪತಿಗಳಿಬ್ಬರ ಸುತ್ತ ಸುತ್ತವ ಕಥೆ ಇದು. ಫ್ರಾನ್ಸ್ ನಲ್ಲಿನ ಒಂದು ಗ್ರಾಮದಲ್ಲಿ ನೆಲೆಸಲು ಬಯಸುವ ಇವರು ಒಂದು ಫ್ರೆಂಚ್ ರೆಸ್ಟೋರೆಂಟ್ ಎದುರಿಗೆ ಇಂಡಿಯನ್ ರೆಸ್ಟೋರೆಂಟ್ ಆರಂಭಿಸುತ್ತಾರೆ.

  ಫ್ರೆಂಚ್ ರೆಸ್ಟೋರೆಂಟ್ ಓನರ್ ಆಗಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟಿ ಹೆಲೆನ್ ಮಿರ್ರೆನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಓಂಪುರಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಅವರ ಪತ್ನಿಯಾಗಿ ಜೂಹಿ ಚಾವ್ಲಾ ಅಭಿನಯಿಸುತ್ತಿದ್ದಾರೆ.

  ಪ್ರಮುಖ ಕಾದಂಬರಿಕಾರ ಸಿ.ಮಾರಿಯಾಸ್ ಅವರ ದಿ ಹಂಡ್ರಡ್ ಫುಟ್ ಜರ್ನಿ ಎಂಬ ಕೃತಿ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರಕ್ಕೆ ಅಮೆರಿಕದ ಖ್ಯಾತ ಟಾಕ್ ಶೋ ನಿರೂಪಕಿ, ನಟಿ, ನಿರ್ಮಾಪಕಿ ಓಫ್ರಾ ವಿನ್ ಫ್ರೇ, ಜೂಲಿಯಟ್ ಬ್ಲಾಕ್ ಸಹ ನಿರ್ಮಾಪಕರು. ಇಷ್ಟೆಲ್ಲಾ ವಿಶೇಷಗಳುಳ್ಳ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಜೂಹಿ ಚಾವ್ಲಾ ಫುಲ್ ಖುಷ್ ಆಗಿದ್ದಾರೆ. (ಏಜೆನ್ಸೀಸ್)

  English summary
  Indian sweet heart Juhi Chawla has been away from the news for quite sometime. However she is back with a bang and reportedly has signed up a movie produced by none other than Steven Spielberg. Oscar winning director Lasse Hallstrom and Steven Spielberg are joining hands for this venture and have roped in the Indian actress for their movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X