Don't Miss!
- News
ಮಹಾರಾಷ್ಟ್ರದಲ್ಲಿ ಸಿಎಂ ಠಾಕ್ರೆ ಬಣದ ಶಾಸಕರಿಂದ ಮಹತ್ವದ ಸಭೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Automobiles
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
'ಜುರಾಸಿಕ್ ಪಾರ್ಕ್' ಸರಣಿಯ ಕಡೆಯ ಚಿತ್ರ ಆನ್‌ಲೈನ್‌ನಲ್ಲಿ ಲೀಕ್!
ಹಾಲಿವುಡ್‌ನಲ್ಲಿ ಸರಣಿ ಸಿನಿಮಾಗಳೇ ಹೆಚ್ಚು. 'ಸ್ಪೈಡರ್ ಮ್ಯಾನ್', 'ಸೂಪರ್ ಮ್ಯಾನ್' ಜೊತೆಗೆ ಹಾಲಿವುಡ್‌ನಲ್ಲಿ ಬಂದ ಮತ್ತೊಂದು ಹೆಸರಾಂತ ಸರಣಿ ಸಿನಿಮಾ ಎಂದರೆ ಅದು 'ಜುರಾಸಿಕ್ ವರ್ಲ್ಡ್'. 1993ರಿಂದ ಜುರಾಸಿಕ್ ಚಿತ್ರ ಸರಣಿ ಶುರುವಾಯಿತು. ಈ ಚಿತ್ರ ಜುರಾಸಿಕ್ ಪಾರ್ಕ್ ಕಾದಂಬರಿ ಆಧಾರಿತ ಸಿನಿಮಾ. ಇಲ್ಲಿ ತನಕ ಒಟ್ಟು ಆರು ಸರಣಿಗಳು ರಿಲೀಸ್ ಆಗಿವೆ. 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಕಟ್ಟ ಕಡೆಯ ಸರಣಿ.
'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಇಂದು (ಜೂನ್ 10) ರಿಲೀಸ್ ಆಗಿದೆ. ವಿಶ್ವದಾದ್ಯಂತ ರಿಲೀಸ್ ಆಗಿದೆ ಈ ಚಿತ್ರ. ಮೊದಲಿನಿಂದಲೂ' ಜುರಾಸಿಕ್ ಪಾರ್ಕ್' ಸರಣಿಗಳು ವಿಶೇಷವಾದ ಕ್ರೇಜ್ ಹುಟ್ಟು ಹಾಕಿವೆ. ಆಗಿನಿಂದ ಹಿಡಿದು ಈಗಿನಿ ಸರಣಿ ತನಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಈ ಜುರಾಸಿಕ್ ಸರಣಿ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುತ್ತಾರೆ.
ಕಾನ್
ರೆಡ್
ಕಾರ್ಪೆಟ್
ಒಳ
ಹೊಕ್ಕ
'ಮೇಲ್
ಇಗೋ'
ಅಭದ್ರತೆಯೋ
ಪ್ರಾಬಲ್ಯವೋ?
'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಜುರಾಸಿಕ್ ಫ್ರಾಂಚೈಸಿಯ ಆರನೇ ಮತ್ತು ಕೊನೆಯ ಸರಣಿ ಆಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರತಿದೆ. ಆದರೂ ಚಿತ್ರಕ್ಕೆ ವಿಶ್ವಾದ್ಯಂತ ಅಭಿಮಾನಿಗಳು ಇರುವ ಕಾರಣಕ್ಕೆ ಸಿನಿಮಾದ ಬಾಕ್ಸಾಫೀಸ್ ಉತ್ತಮ ರೀತಿಯಲ್ಲಿ ಇರಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹೇಗಿದೆ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್'!
ಜುರಾಸಿಕ್ ಪಾರ್ಕ್ ಹೆಸರಿನಿಂದ ಶುರುವಾದ ಜುರಾಸಿಕ್ ಜರ್ನಿ ಈಗ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ತನಕ ಬಂದು ನಿಂತಿದೆ. ಜುರಾಸಿಕ್ ಪಾರ್ಕ್ ಚಿತ್ರದಿಂದ ಹುಟ್ಟಿದ ಕ್ರೇಜ್ ಈಗಾಲೂ ಜುರಾಸಿಕ್ ಸರಣಿ ಸಿನಿಮಾ ಬರುತ್ತದೆ ಎಂದರೆ, ಚಿತ್ರವನ್ನು ನೋಡಲು ಹಲವು ದಿನಗಳಿಂದ ಸಾಕಷ್ಟು ಪ್ರೇಕ್ಷಕರು ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಇದೀಗ ರಿಲೀಸ್ ಆಗಿರುವ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಚಿತ್ರ ಅದೇ ಕೆಲವು ಹಳೆಯ ಸೂತ್ರಗಳನ್ನು ಅಳವಡಿಕೊಂಡ ಕಾರಣ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
'ವಾರಣಾಸಿ'
ರೆಸ್ಟಾರೆಂಟ್ನಲ್ಲಿ
ಒಂದೇ
ರಾತ್ರಿಗೆ
48
ಲಕ್ಷ
ಖರ್ಚು
ಮಾಡಿದ
ಜಾನಿ
ಡೆಪ್

ಜೀವಂತಾವಾಗಿವೆ ಡೈನೋಸಾರ್!
'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಚಿತ್ರದಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ಜೀವಿ ಡೈನೋಸಾರ್ ಬದುಕಿವೆ. ಇನ್ನು ಈ ಡೇಂಜರಸ್ ಡೈನೋರಾಸ್‌ಗಳು ಜಗತ್ತಿನ ಮೇಲೆ ದಾಳಿ ನಡೆಸುತ್ತವೆ. ಮಾನವರ ಮೇಲೆ ದಾಳಿ ಮಾಡುತ್ತವೆ. ಇದರಿಂದ ಹೇಗ ಪಾರಾಗುತ್ತಾರೆ ಮತ್ತು ಡೈನೋಸಾರ್‌ಗಳ ಅಂತ್ಯ ಆಗುತ್ತಾ? ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ.

ಆನ್‌ಲೈನ್‌ನಲ್ಲಿ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಸೋರಿಕೆ!
ಸಿನಿಮಾಗಳಿಗೆ ಪೈರಸಿ ಕಾಟ ಇಂದು ನಿನ್ನೆಯದಲ್ಲ. ಯಾವುದೇ ಸಿನಿಮಾ ಬಂದರೂ ಕೂಡ, ಪೈರಸಿ ಕಾಟ ಎದುರಿಸಬೇಕಾಗುತ್ತದೆ. ಅಂತೆಯೇ ಈ ಚಿತ್ರಕ್ಕೂ ಪೈರಸಿ ಕಾಟ ಕೊಟ್ಟಿದೆ. ಚಿತ್ರ ರಿಲೀಸ್ ಅದ ಮೊದಲ ದಿನವೇ ಅನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಹಲವೂ ಪೈರಸಿ ವೆಬ್‌ಸೈಟ್‌ಗಳಲ್ಲಿ ಹೆಚ್‌ಡಿ ಕ್ವಾಲಿಟಿ ಸಿನಿಮಾ ಲಭ್ಯವಿದೆ. ಆದರೆ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವನೇ ಬೇರೆ. ಹಾಗಾಗಿ ಈ ಚಿತ್ರ ಪೈರಸಿ ಆದರೂ ಗಳಿಕೆ ಏನು ತೊಂದರೆ ಆಗುವುದಿಲ್ಲ.
ಗೆಲುವಷ್ಟೆ
ಮುಖ್ಯ
ಹಣವಲ್ಲ:
ಪತ್ನಿಯಿಂದ
ಬರಬೇಕಿದ್ದ
100
ಕೋಟಿ
ಕೈಬಿಟ್ಟ
ಜಾನಿ
ಡೆಪ್!?

ಕಾಲಿನ್ ಟ್ರೆವೊರೊ ನಿರ್ದೇಶನ!
'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಚಿತ್ರವನ್ನು ನಿರ್ದೇಶಕ ಕಾಲಿನ್ ಟ್ರೆವೊರೊ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈ ಹಿಂದೆ ತೆರೆ ಕಂಡಿದ್ದ 'ಜುರಾಸಿಕ್ ವರ್ಲ್ಡ್ ಫಾಲೆನ್ ಕಿಂಗ್‌ಡಮ್' ಚಿತ್ರದ ಸೀಕ್ವೆಲ್ ಆಗಿದೆ. ಈ ಚಿತ್ರದಲ್ಲಿ ನಟ ಕ್ರಿಸ್ಟೋಫರ್ ಮೈಕಲ್, ನಟಿ ಬ್ರೈಸ್ ಡಲಾಸ್ ಹೊವಾರ್ಡ್, ಜೆಫ್ ಲೈನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.