For Quick Alerts
  ALLOW NOTIFICATIONS  
  For Daily Alerts

  ಯಡವಟ್ಟು: ಬಿಡುಗಡೆ ಆಗದ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಯ್ತು!

  |

  ಬಿಡುಗಡೆ ಆದ ಸಿನಿಮಾಗಳು ಪೈರಸಿಗೊಂಡು ಮೊಬೈಲ್‌ಗಳಲ್ಲಿ ಪ್ರಸಾರವಾಗುವುದು ಸಾಮಾನ್ಯ. ಆದರೆ ಯಾರದ್ದೋ ಯಡವಟ್ಟಿನಿಂದಾಗಿ ಇನ್ನೂ ಬಿಡುಗಡೆ ಆಗದ ಸಿನಿಮಾ ಒಂದು ಒಟಿಟಿ ಮೂಲಕ ಮೊಬೈಲ್, ಲ್ಯಾಪ್‌ಟಾಪ್, ಹೋಮ್‌ಥಿಯೇಟರ್‌ಗಳಲ್ಲಿ ಪ್ರಸಾರವಾಗಿದೆ.

  ಹೌದು, 'ಜಸ್ಟಿಸ್ ಲೀಗ್; ಜಾಕ್ ಸ್ನಿಡೆರ್ಸ್' ಸಿನಿಮಾವು ಮಾರ್ಚ್ 18 ರಂದು ವಿಶ್ವದಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ ಯಾರದ್ದೊ ಯಡವಟ್ಟಿನಿಂದಾಗಿ ನಿನ್ನೆ ರಾತ್ರಿ ಸಿನಿಮಾವು ಒಟಿಟಿಯಲ್ಲಿ ಪ್ರಸಾರವಾಗಿಬಿಟ್ಟಿದೆ.

  ಒಟಿಟಿ ಎಚ್‌ಬಿಒ ಮ್ಯಾಕ್ಸ್‌ನಲ್ಲಿ ನಿನ್ನೆ 'ಟಾಮ್ ಆಂಡ್ ಜೆರ್ರಿ' ಸಿನಿಮಾ ಪ್ರಸಾರವಾಗಬೇಕಿತ್ತು, ಇದಕ್ಕಾಗಿ ಕಾತು ಕೂತಿದ್ದವರಿಗೆ ಆಶ್ಚರ್ಯ ಕಾದಿತ್ತು, ಏಕೆಂದರೆ ಟಾಮ್ ಆಂಡ್ ಜೆರ್ರಿ ಸಿನಿಮಾದ ಬದಲಿಗೆ ಪ್ರಸಾರವಾಗಿದ್ದ ಹೊಸ ಜಸ್ಟಿಸ್ ಲೀಗ್ ಸಿನಿಮಾ. ಅದೂ ಇನ್ನೂ ಬಿಡುಗಡೆ ಆಗದ ಸಿನಿಮಾ.

  ಕೂಡಲೇ ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಸಿನಿಮಾ ಪ್ರಸಾರವಾಗುತ್ತಿರುವ ಚಿತ್ರಗಳು ತುಂಬಿಕೊಂಡವು. ಸಿನಿಮಾ ಪ್ರಸಾರವಾದ ಒಂದು ಗಂಟೆ ಬಳಿಕ ಎಚ್ಚೆತ್ತುಕೊಂಡ ಎಚ್‌ಬಿಒ ಮ್ಯಾಕ್ಸ್ ತಂಡ ಸಿನಿಮಾದ ಸ್ಟ್ರೀಮಿಂಗ್ ನಿಲ್ಲಿಸಿತು. ಆ ವೇಳೆಗಾಗಲೆ ಹಲವು ಮಂದಿ ಸಿನಿಮಾವನ್ನು ನೊಡಿಯಾಗಿತ್ತು.

  ಎಚ್‌ಬಿಓ ಮ್ಯಾಕ್ಸ್‌ನಲ್ಲಿ ಮಾರ್ಚ್ 18 ಕ್ಕೆ ಜಸ್ಟಿಸ್ ಲೀಗ್ ಸಿನಿಮಾ ಬಿಡುಗಡೆ ಆಗಲಿದೆ. ಅದು ಮಾತ್ರವೇ ಅಲ್ಲದೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರಮಂದಿರದಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.

  Recommended Video

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

  ವಂಡರ್ ವುಮನ್, ಬ್ಯಾಟ್‌ ಮ್ಯಾನ್, ಫ್ಲ್ಯಾಷ್, ಆಕ್ವಾಮ್ಯಾನ್, ಸೂಪರ್ ಮ್ಯಾನ್ ಇನ್ನೂ ಕೆಲವು ಸೂಪರ್ ಹೀರೋಗಳು ಸೇರಿಕೊಂಡು ಭೂಮಿಗೆ ಸಂಚಕಾರ ತರುವ ದುಷ್ಟರ ವಿರುದ್ಧ ಹೊಡೆದಾಡುವ ಕತೆಯನ್ನು ಜಸ್ಟಿಸ್ ಲೀಗ್ ಹೊಂದಿದೆ.

  English summary
  Not yet released movie 'Justice League' streamed on HBO Max ott. Movie set to release on March 18.
  Tuesday, March 9, 2021, 18:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X