»   » ಕೇಟ್ ನಗ್ನ, ನ್ಯೂಯಾರ್ಕ್ ನಲ್ಲಿ ಟ್ರಾಫಿಕ್ ಜಾಮ್!

ಕೇಟ್ ನಗ್ನ, ನ್ಯೂಯಾರ್ಕ್ ನಲ್ಲಿ ಟ್ರಾಫಿಕ್ ಜಾಮ್!

By: ರವಿಕಿಶೋರ್
Subscribe to Filmibeat Kannada

ಹಾಲಿವುಡ್ ಸೂಪರ್ ಮಾಡೆಲ್ ಕೇಟ್ ಮೋಸ್ ನಗ್ನವಾಗಿ ಪೋಸ್ ಕೊಟ್ಟ ಪರಿಣಾಮ ನ್ಯೂಯಾರ್ಕ್ ನಲ್ಲಿ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ. ಕೇವಲ ಮೈಮೇಲೆ ತುಂಡು ನಿಕ್ಕರ್ ಹಾಗೂ ಹೀಲ್ಸ್ ಮಾತ್ರ ಧರಿಸುವ ಮೂಲಕ ಕೇಟ್ ತುಂಡ್ ಹೈಕ್ಳನ್ನು ತಡೆದು ನಿಲ್ಲಿಸಿದ್ದಾರೆ.

ಪ್ರಮುಖ ಶೂ ಬ್ರ್ಯಾಂಡ್ Stuart Weitzman ಜಾಹೀರಾತಿಗಾಗಿ ಕೇಟ್ ಈ ಅವತಾರ ಎತ್ತಿದ್ದಾರೆ. ಆಳೆತ್ತರದ ಕಟೌಟ್ ಎಲ್ಲರ ಗಮನಸೆಳೆಯುತ್ತಿದ್ದು ಪಾದಚಾರಿಗಳು ಹಾಗೂ ವಾಹನ ಸವಾರರ ಗಮನವನ್ನು ಸೆಳೆಯುತ್ತಿದೆಯಂತೆ.

Supermodel Kate Moss

ಆಕೆಯ ಅರೆನಗ್ನ ಪೋಸ್ಟರ್ ನೋಡುತ್ತಾ ವಾಹನಗಳು ನಿಧಾನಕ್ಕೆ ಸಾಗುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆಯಂತೆ. ಸ್ಟೈಲಿಷ್ ಸೋಹೋ ಎಂಬ ಕಟ್ಟಡದ ಮೇಲೆ ಆಕೆಯ ನಿಲುವು ಭಂಗಿ ಪೋಸ್ಟರ್ ಇಡಲಾಗಿದೆ.

ಇತ್ತೀಚೆಗಷ್ಟೇ Stuart Weitzman ರಾಯಭಾರಿಯಾಗಿದ್ದರು ಕೇಟ್. ಈ ಹಿಂದೆಂದೂ ಕೇಟ್ ಈ ರೀತಿ ಪೋಸ್ ನೀಡಿರಲಿಲ್ಲವಂತೆ. ಆದರೆ ನಾಲ್ಕು ವರ್ಷಗಳ ಹಿಂದೊಮ್ಮೆ ಈಕೆಯ ಕಟೌಟ್ ಲಂಡನಲ್ಲೂ ಇದೇ ರೀತಿ ಟ್ರಾಫಿಕ್ ಜಾಮ್ ಮಾಡಿತ್ತು ಎನ್ನುತ್ತಾರೆ.

ಅಂದಹಾಗೆ ಕೇಟ್ ಮೋಸ್ ಜಗತ್ತಿನ ಎರಡನೇ ಟಾಪ್ ಮಾಡೆಲ್. ಈಕೆ ಇದುವರೆಗೂ ಹಲವಾರು ನಿಯತಕಾಲಿಕೆಗಳಲ್ಲಿ ಹಿತಮಿತವಾಗಿ ತಮ್ಮ ದೇಹಸಿರಿಯನ್ನು ಪ್ರದರ್ಶಿಸಿದವರು. ಈಗ ಏಕ್ ದಂ ಕಟೌಟ್ ಮೂಲಕ ರಸಿಕರ ಕಣ್ಣುಕುಕ್ಕಿದ್ದಾರೆ. (ಏಜೆನ್ಸೀಸ್)

English summary
Supermodel Kate Moss’s nude poster brings traffic to a halt in New york. In this poster, Kate Moss was seen in just knickers and heels. This is Kate's posture for shoe brand Stuart Weitzman. The big poster of Kate grabbed every passers and cars drivers attraction.
Please Wait while comments are loading...