For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನಕ್ಕೆ ಮುಂದಾದರೇ ತಾರಾ ಜೋಡಿ ಕಿಮ್ ಕರ್ದಶಿಯನ್-ಕಾನ್ಯೆ ವೆಸ್ಟ್?

  |

  ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದು ಹಿನ್ನಡೆ ಅನುಭವಿಸಿರುವ ಖ್ಯಾತ ರಾಪ್ ಗಾಯಕ ಕಾನ್ಯೆ ವೆಸ್ಟ್ ಅವರ ಕೌಟುಂಬಿಕ ಬದುಕಿನಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಜಗತ್ತಿನ ಟಾಪ್ ಮಾಡೆಲ್‌ಗಳಲ್ಲಿ ಒಬ್ಬರಾದ ಕಿಮ್ ಕರ್ದಶಿಯನ್ ಜತೆ 2014ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ಸೌತ್ ಕರೊಲಿನಾದ ಚಾರ್ಲೆಸ್ಟನ್ ಚುನಾವಣಾ ಸಭೆಯಲ್ಲಿ ಭಾಗವಹಿಸಿದ ಬಳಿಕ, ವೆಸ್ಟ್ ವಿರುದ್ಧ ಕರ್ದಶಿಯನ್ ಅಸಮಾಧಾನಗೊಂಡಿದ್ದು, ಚುನಾವಣಾ ಪ್ರಚಾರದಿಂದ ಹಿಂದಕ್ಕೆ ಸರಿಯದೆ ಇದ್ದರೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ಹಿರಿಯ ಮಗು 'ನಾರ್ತ್' ಹೊಟ್ಟೆಯಲ್ಲಿದ್ದಾಗ ಗರ್ಭಪಾತಕ್ಕೆ ಯೋಚಿಸಿದ್ದೆವು ಎಂದು ವೆಸ್ಟ್ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದು, ಕಿಮ್ ಕೋಪಕ್ಕೆ ಕಾರಣವಾಗಿದೆ.

  ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆ

  ಸೋಮವಾರ ರಾತ್ರಿ ವೆಸ್ಟ್ ಅವರ ಟ್ವಿಟ್ಟರ್ ಖಾತೆಯಲ್ಲಿ ವಿಚಿತ್ರವಾದ ಟ್ವೀಟ್‌ಗಳು ಪೋಸ್ಟ್ ಆಗಿದ್ದವು. ಅವುಗನ್ನು ವೆಸ್ಟ್ ತಮ್ಮ ಸೆಲ್ ಫೋನ್‌ನಿಂದ ಮಾಡಿದ್ದರು ಎನ್ನಲಾಗಿದೆ. ಆದರೆ ಕೆಲವೇ ಗಂಟೆಗಳಲ್ಲಿ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಮುಂದೆ ಓದಿ...

  ವಿಚಿತ್ರ ಪೋಸ್ಟ್‌ಗಳು

  ವಿಚಿತ್ರ ಪೋಸ್ಟ್‌ಗಳು

  ನನ್ನನ್ನು ವೈದ್ಯರ ಬಳಿ ಕಟ್ಟಿಹಾಕುವ ಸಲುವಾಗಿ ಕಿಮ್ ವೈದ್ಯರನ್ನು ಕರೆತರಲು ಪ್ರಯತ್ನಿಸಿದ್ದರು ಎಂದು ವಿಚಿತ್ರ ಟ್ವೀಟ್ ಮಾಡಿದ್ದರು. ಕ್ರಿಸ್ ಆಂಡ್ ಕಿಮ್ ಕಾಲ್ ಮಿ ನೌ, 'ನನ್ನನ್ನು ಮಂಡೇಲಾ ರೀತಿ ಕೂಡಿಹಾಕಿದರೆ... ಹೌದು ಏಕೆಂದು ನನಗೆ ಗೊತ್ತು', 'ಕ್ರಿಸ್ ನನ್ನ ಜೊತೆ ಆಟವಾಡಬೇಡ. ನೀನು ಮತ್ತು ಆ ಕಾಲ್ಮಿಯನ್ನು ನನ್ನ ಮಕ್ಕಳ ಸಮೀಪ ಬರಲು ಬಿಡುವುದಿಲ್ಲ. ನನ್ನನ್ನು ಲಾಕ್‌ ಮಾಡಲು ಪ್ರಯತ್ನಿಸುತ್ತೇನೆ'- ಹೀಗೆ ಐದಾರು ಪೋಸ್ಟ್‌ಗಳನ್ನು ಅವರು ಮಾಡಿದ್ದರು.

  ನಗ್ನತೆ ಸ್ವತಂತ್ರದ ಸಂಕೇತ ಎಂದ ಕಿಮ್ ಗೆ ವಿಶ್ನಗ್ನತೆ ಸ್ವತಂತ್ರದ ಸಂಕೇತ ಎಂದ ಕಿಮ್ ಗೆ ವಿಶ್

  ನೆಲ್ಸನ್ ಮಂಡೇಲಾಗೆ ಹೋಲಿಕೆ

  ನೆಲ್ಸನ್ ಮಂಡೇಲಾಗೆ ಹೋಲಿಕೆ

  ತಮ್ಮನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಬಿಂಬಿಸಿಕೊಳ್ಳಲು ನಡೆಸಿದ್ದ ರಾಲಿಯಲ್ಲಿ ವೆಸ್ಟ್, ಪತ್ನಿ ಕಿಮ್ ಕರ್ದಶಿಯನ್ ಗರ್ಭವನ್ನು ತೆಗೆದುಹಾಕುವುದನ್ನು ತಡೆದಿದ್ದೆ ಎಂದು ಕಣ್ಣೀರಿಟ್ಟಿದ್ದರು. ನನ್ನ ಹೆಣ್ಣುಮಕ್ಕಳ ಜೀವ ಉಳಿಸಿದ್ದಕ್ಕಾಗಿ ನಾನು ನಿನ್ನೆ ಕಣ್ಣೀರಿಟ್ಟಿದ್ದಕ್ಕಾಗಿ 'ಗೆಟ್ ಔಟ್' ಚಿತ್ರದಲ್ಲಿ ಮಾಡಿದಂತೆ ತಮ್ಮನ್ನು ನೆಲ್ಸನ್ ಮಂಡೇಲಾ ಅವರಂತೆ ಕಟ್ಟಿಹಾಕುತ್ತಾರೆ ಎಂದು ಬರೆದುಕೊಂಡಿದ್ದರು.

  ಹಾಲಿವುಡ್ ನಟಿ ಕೆಲ್ಲಿ ಪ್ರೆಸ್ಟೊನ್ ಸ್ತನ ಕ್ಯಾನ್ಸರ್‌ಗೆ ಬಲಿಹಾಲಿವುಡ್ ನಟಿ ಕೆಲ್ಲಿ ಪ್ರೆಸ್ಟೊನ್ ಸ್ತನ ಕ್ಯಾನ್ಸರ್‌ಗೆ ಬಲಿ

  ಸೆಕ್ಸ್ ಟೇಪ್ ಉಲ್ಲೇಖ

  ಸೆಕ್ಸ್ ಟೇಪ್ ಉಲ್ಲೇಖ

  ಅವರ ಮತ್ತೊಂದು ಟ್ವೀಟ್ ತಮ್ಮ ಆರು ವರ್ಷದ ಮಗಳು ನಾರ್ತ್ ವೆಸ್ಟ್ ಹಾಗೂ 2007ರಲ್ಲಿ ಸಂಚಲನ ಮೂಡಿಸಿದ್ದ ಕಿಮ್ ಕರ್ದಶಿಯನ್ ಅವರ ಆಗಿನ ಪ್ರಿಯಕರ ರೇ ಜೆ ಜತೆಗಿನ ಸೆಕ್ಸ್ ಟೇಪ್ ಕುರಿತಾಗಿದೆ. 'ನನ್ನ ಜೀವನವನ್ನು ನನ್ನ ಮಕ್ಕಳಿಗಾಗಿ ಮುಡಿಪಾಗಿರಿಸಿದ್ದೇನೆ, ನಾರ್ತ್‌ನ ತಾಯಿ ತನ್ನ ಸೆಕ್ಸ್‌ ಟೇಪನ್ನು ಮಾರಾಟಮಾಡುವುದಿಲ್ಲ' ಎಂದು ಬರೆದಿದ್ದರು.

  ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯಿಂದ ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಆಹ್ವಾನಪ್ರತಿಷ್ಠಿತ ಆಸ್ಕರ್ ಅಕಾಡೆಮಿಯಿಂದ ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಆಹ್ವಾನ

  ವಿಚ್ಛೇದನಕ್ಕೆ ಮುಂದು

  ವಿಚ್ಛೇದನಕ್ಕೆ ಮುಂದು

  ಕಾನ್ಯೆ ವೆಸ್ಟ್ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಕಿಮ್ ಕರ್ದಶಿಯನ್‌ಗೆ ಒಲವು ಇಲ್ಲ. ಆದರೂ ವೆಸ್ಟ್ ಪ್ರಚಾರದಲ್ಲಿ ಭಾಗವಹಿಸುತ್ತಿರುವುದು ಅವರಲ್ಲಿ ಅಸಮಾಧಾನ ಉಂಟುಮಾಡಿದೆ. ಅಲ್ಲದೆ, ಖಾಸಗಿ ಸಂಗತಿಗಳನ್ನು ಹಂಚಿಕೊಂಡಿರುವುದು ಅವರನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಕೆನ್ಯೆ ವೆಸ್ಟ್ ಅವರಿಂದ ಕಾನೂನು ಬದ್ಧವಾಗಿ ದೂರವಾಗಲಿ ಕಿಮ್ ನಿರ್ಧರಿಸಿದ್ದಾರೆ. ಆ ಬೇಸರದಲ್ಲಿಯೇ ಅವರು ಈ ರೀತಿ ಪೋಸ್ಟ್‌ಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

  ಕಿಮ್ ಕರ್ದಶಿಯನ್ ಮಾದಕ ಕುಂಡಿ ಸಹಜ ಸುಂದರಕಿಮ್ ಕರ್ದಶಿಯನ್ ಮಾದಕ ಕುಂಡಿ ಸಹಜ ಸುಂದರ

  English summary
  Rumours says Rapper Kanye West and his wife Kim Kardashian heading towards divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X