For Quick Alerts
  ALLOW NOTIFICATIONS  
  For Daily Alerts

  ಪಾಪ್ ತಾರೆ ಲೇಡಿ ಗಾಗಾ ಮುಖಕ್ಕೆ ಬಲವಾದ ಪೆಟ್ಟು

  By Rajendra
  |

  ಪಾಪ್ ತಾರೆ ಲೇಡಿ ಗಾಗಾ (26) ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ನ್ಯೂಜಿಲ್ಯಾಂಡ್‌ನಲ್ಲಿ ಕಾರ್ಯಕ್ರಮವೊಂದನ್ನು ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿ ಅವರ ಮುಖಕ್ಕೆ ಬಲವಾದ ಪೆಟ್ಟುಬಿದ್ದಿದೆ. ಬಳಿಕ ಚೇತರಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ.

  ಚೇತರಿಸಿಕೊಂಡ ಕೂಡಲೆ ತಮ್ಮ ಮುಖಕ್ಕೆ ಪೆಟ್ಟಾಗಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ನ್ಯೂಜಿಲ್ಯಾಂಡ್‌ನ ಆಕ್ಲಾಂಡ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಾದರೆ ಉಕ್ಕಿನ ಕಂಬಕ್ಕೆ ಮುಖ ಹೊಡೆದುಕೊಂಡ ಕಾರಣ ಬಲವಾಗಿ ಗಾಯವಾಗಿತ್ತು.

  ಈ ಬಗ್ಗೆ ತನ್ನ ಅಪಾರ ಅಭಿಮಾನಿ ಬಳಕ ಆತಂಕಪಡುವುದು ಬೇಡ ಎಂದು ತಮ್ಮ ಲೇಟೆಸ್ಟ್ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿ ವರದಿ ನೀಡುತ್ತಿದ್ದಾರೆ. ಆಕೆಯ ಅಭಿಮಾನಿಗಳಿಂದಲೂ ಶೀಘ್ರ ಚೇತರಿಸಿಕೊಳ್ಳಲಿ ಎಂಬ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

  ಅಂದಹಾಗೆ ಲೇಡಿ ಗಾಗಾ ಗಂಡೋ ಹೆಣ್ಣೋ ಎಂಬ ಅನುಮಾನ ಪಾಪ್ ಲೋಕದಲ್ಲಿ ಪಾಪ್‌ಕಾರ್ನ್‌ನಂತೆ ಚಿಟಪಟ ಸಿಡಿದಿತ್ತು. ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಇತ್ತೀಚೆಗೆ ಲಿಂಗ ಪರಿವರ್ತನೆಗೆ ಒಳಗಾಗಿರುವುದೇ ಈಕೆಯ ಮೇಲೆ ಈ ಡೌಟ್ ಬರಲು ಕಾರಣವಾಗಿತ್ತು. ಇಷ್ಟು ದಿನ ಹೆಣ್ಣಾಗಿದ್ದ ಈಕೆ ಲಿಂಗಪರಿವರ್ತನೆ ಮೂಲಕ ಗಂಡಾಗಿ ಬದಲಾಗಿದ್ದರು.

  ನಿಜವಾಗಿಯೂ ಲೇಡಾ ಗಾಗಾ ಲಿಂಗಪರಿವರ್ತನೆ ಒಳಗಾಗಿದ್ದರೆಯೇ ಅಥವಾ ಇದು ಕೇವಲ ವದಂತಿಯೇ ಎಂಬ ಪ್ರಶ್ನೆಯೂ ಆಕೆಯ ಅಪಾರ ಅಭಿಮಾನಿಗಳನ್ನು ಕಾಡುತ್ತಿದೆ. ಹೆಣ್ಣಾಗಿದ್ದ ಈಕೆ ಈಗ ಗಂಡಾಗಿದ್ದಾರೆ ಎಂಬ ಸುದ್ದಿ ಗಾಗಾ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

  ತೀರಾ ಇತ್ತೀಚೆಗೆ ಲೇಡಿ ಗಾಗಾ ಭಾರತಕ್ಕೆ ಭೇಟಿ ನೀಡಿದ್ದರು. ಫಾರ್ಮುಲಾ ಒನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗಾನಾಲಾಪದಲ್ಲಿ ಅಭಿಮಾನಿಗಳನ್ನು ತೇಲಾಡಿಸಿದ್ದರು. ಸದ್ಯಕ್ಕೆ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗಕ್ಕೇರಿರುವ ಗಾಗಾ ಕಾರ್ಯಕ್ರಮಗಳು ದಾವಣಗೆರೆ ಬೆಣ್ಣೆ ದೋಸೆಯಂತೆ ಬಿಕರಿಯಾಗುತ್ತಿವೆ. (ಏಜೆನ್ಸೀಸ್)

  English summary
  Pop star Lady Gaga injured during concert at New Zealand. Her face was bruised and swollen. She posted a picture of her bruised face on micro-blogging site Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X