Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Evil Dead Rise Trailer: ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿಲೀ? ಮೈ ನಡುಗುವುದು ಗ್ಯಾರೆಂಟಿ!
'ಶ್', 'ಆಪ್ತಮಿತ್ರ', 'ನಾ ನಿನ್ನ ಬಿಡಲಾರೆ' ರೀತಿಯ ಹಾರರ್ ಸಿನಿಮಾಗಳನ್ನು ನೋಡಿ ಪ್ರೇಕ್ಷಕರು ಭಯಬಿದ್ದಿದ್ದರು. ಇದನ್ನೇ ನಾವು ದೊಡ್ಡದು ಎಂದುಕೊಂಡಿದ್ದೇವೆ. ಆದರೆ ಹಾಲಿವುಡ್ 'ಇವಿಲ್ ಡೆಡ್' ಸಿನಿಮಾ ಹೆಸರು ಕೇಳಿದ್ರೆ, ಇವನ್ನೆಲ್ಲಾ ಮರೆತು ಬಿಡುತ್ತೇವೆ. ಈಗ ಅಂಥದ್ದೇ ಮೈ ನಡುಗಿಸುವ ಮತ್ತೊಂದು ಸಿನಿಮಾ ಸಿದ್ಧವಾಗಿದೆ.
ನಮ್ಮಲ್ಲಿ ಪ್ರತಿಯೊಬ್ಬರು ನೋಡಿದ, ಭಯಬಿದ್ದ ಸಿನಿಮಾ ಅಂದರೆ ಅದು 'ಇವಿಲ್ ಡೆಡ್'. ಎಂತಹ ಗಟ್ಟಿ ಗುಂಡಿಗೆಯವರನ್ನು ಒಂದು ಕ್ಷಣ ನಡುಗಿಸಿಬಿಡುವ ಸರಣಿ ಸಿನಿಮಾಗಳು ಇವು. ಇವಿಲ್ ಡೆಡ್ ಫ್ರಾಂಚೈಸಿಯಿಂದ 1981ರಲ್ಲಿ ಮೊದಲ ಬಾರಿಗೆ 'ದಿ ಇವಿಲ್ ಡೆಡ್' ಎನ್ನುವ ಸಿನಿಮಾ ಬಂದಿತ್ತು. ಹಾರರ್ ಸಿನಿಮಾಗಳಿಗೆ ಬೆಂಚ್ ಮಾರ್ಕ್ ಕ್ರಿಯೇಟ್ ಮಾಡಿತ್ತು. ಬಿಜಿಎಂನಿಂದಲೇ ನೋಡುಗರನ್ನು ನಡುಗಿಸುವುದು ಹೇಗೆ ಎನ್ನುವುದು ಸಿನಿಮಾದಿಂದ ಗೊತ್ತಾಗಿತ್ತು. 6 ವರ್ಷಗಳ ನಂತರ 'ಇವಿಲ್ ಡೆಡ್'-2 ಬಂದು ಮತ್ತಷ್ಟು ಬೆಚ್ಚಿ ಬೀಳುವಂತೆ ಮಾಡಿದ್ದು ಸುಳ್ಳಲ್ಲ. ಹಾರರ್ ಸಿನಿಮಾ ಅಂದರೆ ಈ ಸಿನಿಮಾ ನೆನಪಾಗದೇ ಇರುವುದಿಲ್ಲ. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ.
'ಅವೇಂಜರ್ಸ್'
ನಟನಿಗೆ
ಅಪಘಾತ,
ಸ್ಥಿತಿ
ಗಂಭೀರ
1993ರಲ್ಲಿ 'ಆರ್ಮಿ ಆಫ್ ಡಾರ್ಕ್‌ನೆಸ್' ಸಿನಿಮಾ ತೆರೆಗೆ ಬಂದಿತ್ತು. ಇದರ ಸೀಕ್ವೆಲ್ ಎನ್ನುವಂತೆ ಬಂದ ಸಿನಿಮಾಗಳು ಹಾರರ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದಿದ್ದು ಸುಳ್ಳಲ್ಲ. 3ನೇ ಭಾಗದಲ್ಲಿ ಹಾರರ್ ಕಮ್ಮಿ ಆಗಿ ಆಕ್ಷನ್ ಹೆಚ್ಚು ಜಾಗ ಮಾಡಿಕೊಂಡಿತ್ತು. ಇತ್ತೀಚೆಗೆ 'ಇವಿಲ್ ಡೆಡ್' ಸರಣಿ ಸಿನಿಮಾಗಳು ಬಂದಿರಲಿಲ್ಲ. ಆದರೆ ಈಗ ಮತ್ತೊಂದು ಸಿನಿಮಾ ಬರ್ತಿದೆ.

ಲೀ ಕ್ರೊನಿನ್ ನಿರ್ದೇಶನ
2013 ರಲ್ಲಿ, ಈ ಫ್ರ್ಯಾಂಚೈಸ್‌ನಿಂದ 'ಇವಿಲ್ ಡೆಡ್' ಹೆಸರಲ್ಲಿ ಮತ್ತೊಂದು ಸಿನಿಮಾ ಬಂದಿತ್ತು. ಇದು ಹಿಂದಿನ ಮೂರು ಚಿತ್ರಗಳ ಕಥೆಗಳನ್ನು ಬಿಟ್ಟು ಬೇರೆ ಕಥೆ ಹೇಳಿದ್ದರು. ಇದೀಗ ಇದೆ ಸರಣಿಯ 'ಇವಿಲ್ ಡೆಡ್ ರೈಸ್' ಸಿನಿಮಾ ಸಿದ್ಧವಾಗಿದ್ದು, ಟ್ರೈಲರ್ ರಿಲೀಸ್ ಆಗಿ ಭಯಹುಟ್ಟಿಸಿದೆ. ಮತ್ತದೇ ಭಯಹುಟ್ಟಿಸುವ ದೃಶ್ಯಗಳಿಂದ ಸಿನಿಮಾ ಕುತೂಹಲ ಕೆರಳಿಸಿದೆ. ಸಿಲ್ವರ್ ಸ್ಕ್ರೀನ್‌ನಲ್ಲಿ ಸಿನಿಮಾ ಸಖತ್ ಥ್ರಿಲ್ ಕೊಡುವುದು ಗ್ಯಾರೆಂಟಿ. ಲೀ ಕ್ರೊನಿನ್ ನಿರ್ದೇಶನದಲ್ಲಿ ಈ ಸೂಪರ್ ನ್ಯಾಚುರಲ್ ಹಾರರ್ ಸಿನಿಮಾ ನಿರ್ಮಾಣವಾಗಿದೆ.

ಒಂದು ಫ್ಯಾಮಿಲಿ ಕಥೆ
ಎಲ್ಲಿಸಾ ಸುಥರ್‌ಲೆಂಡ್, ಲಿಲಿ ಸುಲ್ಲಿವನ್, ಮಾರ್ಗನ್ ಡೇವಿಯಸ್ 'ಇವಿಲ್ ಡೆಡ್ ರೈಸ್' ಚಿತ್ರದ ತಾರಾಗಣದಲ್ಲಿದ್ದಾರೆ. ರಾಬರ್ಟ್ ಜಿ ಟಾಪೆರ್ಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಟೀಫನ್ ಮೆಕ್ಕಾನ್ ಸಂಗೀತ ಚಿತ್ರಕ್ಕಿದೆ. 2019ರಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಈ ಸರಣಿ ಸಿನಿಮಾಗಳ ಹೆಸರು ಕೇಳದ ಸಿನಿರಸಿಕರು ಇಲ್ಲ ಎನ್ನಬಹುದು. 'ಇವಿಲ್ ಡೆಡ್' ಎನ್ನುವ ಬ್ರ್ಯಾಂಡ್‌ಗೆ ತಕ್ಕಂತೆ ಈ ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. 1981ರಲ್ಲಿ ಬಂದಿದ್ದ ಮೊದಲ ಸಿನಿಮಾ ಕಥೆಯಂತೆ ಇದು ಕೂಡ ಕಾಣ್ತಿದೆ. ಒಂದು ಫ್ಯಾಮಿಲಿಯ ಕಥೆ ಇಲ್ಲಿದೆ.

6500 ಲೀಟರ್ ನಕಲಿ ರಕ್ತ ಬಳಕೆ
'ಇವಿಲ್ ಡೆಡ್' ಸಿನಿಮಾ ಅಂದಾಕ್ಷಣ ನೆನಪಾಗುವುದು ದೆವ್ವದ ಆರ್ಭಟ. ಚಿತ್ರವಿಚಿತ್ರವಾಗಿ ಎಲ್ಲರನ್ನು ಕೊಲ್ಲುವುದು, ಅದನ್ನು ಕೊನೆಗಾಣಿಸುವುದು. ಈ ಹಾದಿಯಲ್ಲಿ ಸಾಕಷ್ಟು ರಕ್ತ ಹರಿಯುತ್ತದೆ. ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಈ ಚಿತ್ರದ ಚಿತ್ರೀಕರಣದಲ್ಲಿ ಬರೋಬ್ಬರಿ 6500 ಲೀಟರ್ ನಕಲಿ ರಕ್ತವನ್ನು ಬಳಸಿಕೊಳ್ಳಲಾಗಿದೆಯಂತೆ. ಅದು ಕೂಡ ಒಂದು ದಾಖಲೆಯೇ ಸರಿ. ಏನೇ ಆದರೂ 'ಇವಿಲ್ ಡೆಡ್ ರೈಸ್' ಸಿನಿಮಾ ನೋಡಲು ಹೋಗುವವರು ಕೊಂಚ ಗುಂಡಿಗೆಯನ್ನು ಗಟ್ಟಿ ಮಾಡಿಕೊಳ್ಳಬೇಕು. ಪ್ರತಿ ಪ್ರೇಮ್‌ನಲ್ಲೂ ಸಿನಿಮಾ ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ.

ಏಪ್ರಿಲ್ 21ಕ್ಕೆ ಸಿನಿಮಾ ರಿಲೀಸ್
ಈಗಾಗಲೇ 'ಇವಿಲ್ ಡೆಡ್ ರೈಸ್' ಚಿತ್ರವನ್ನು ಏಪ್ರಿಲ್ 21ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಟ್ರೈಲರ್ ನೋಡಿದವರು ಒಂದು ಕ್ಷಣ ಭಯಬಿದ್ದಿದ್ದಾರೆ. ಟ್ರೈಲರ್‌ರೇ ಈ ಪಾಟಿ ಹೆದರಿಸಿದರೆ ಇನ್ನು ಕಂಪ್ಲೀಟ್ ಸಿನಿಮಾ ಯಾವ ರೀತಿ ಇರುತ್ತೋ ಎಂದು ಕೆಲವರು ಊಹಿಸಿಕೊಂಡೇ ಥ್ರಿಲ್ಲಾಗಿದ್ದಾರೆ. ಇಂಟರ್‌ವಲ್ ಇಲ್ಲದೇ 2 ಗಂಟೆಗಳ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ.