For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋನಲ್ಲಿ ಖ್ಯಾತ ತಾರೆಗೆ ಗರ್ಭಪಾತ

  By ರವಿಕಿಶೋರ್
  |

  ರಿಯಾಲಿಟಿ ಶೋ ಚಿತ್ರೀಕರಣ ವೇಳೆ ತಮಗೆ ಗರ್ಭಸ್ರಾವ ಆಗಿದ್ದಾಗಿ ಹಾಲಿವುಡ್ ನಲ್ಲಿ ಟ್ರಬಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಲಿಂಡ್ಸೆ ಲೋಹನ್ ಹೇಳಿಕೊಂಡಿದ್ದಾರೆ. ಇಪ್ಪತ್ತೇಳರ ಹರೆಯದ ಈ ತಾರೆ ಇಷ್ಟು ದಿನ ತುಟಿಪಿಟಕ್ಕೆನ್ನದೆ ಇದ್ದು 'ಲಿಂಡ್ಸೆ' ಹೆಸರಿನ ರಿಯಾಲಿಟಿ ಶೋನ ಕೊನೆಯ ಎಪಿಸೋಡಿನಲ್ಲಿ ತಮಗೆ ಅಕಾಲಪ್ರಸವವಾಗಿದ್ದನ್ನು ಹೇಳಿದ್ದಾರೆ.

  ಕಳೆದ ಎರಡು ವಾರಗಳ ಹಿಂದೆ ನನಗೆ ರಿಯಾಲಿಟಿ ಶೋನಲ್ಲೇ ಅಕಾಲಪ್ರಸವವಾಯಿತು. ಹಾಗಾಗಿ ನಾನು ಎರಡು ವಾರಗಳ ಕಾಲ ವಿಶ್ರಾಂತಿ ಪಡೆದೆ. ಓರ್ಪಾ ವಿನ್ ಫ್ರೇ ಅವರ ಓನ್ ನೆಟ್ ವರ್ಕ್ ಟಿವಿ ವಾಹಿನಿಗಾಗಿ ಲಿಂಡ್ಸೆ ಲೋಹನ್ ಈ ರಿಯಾಲಿಟಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. [Interesting Facts About Lindsay Lohan]

  ಆದರೆ ತಮಗೆ ಗರ್ಭಪಾತವಾದಾಗ ಯಾರಿಗೂ ಗೊತ್ತಾಗಲಿಲ್ಲ. ಎರಡು ವಾರಗಳ ಕಾಲ ಸುಮ್ಮನೆ ಮನೆಯಲ್ಲೇ ಇದ್ದುಬಿಟ್ಟೆ. ಮೌನವಾಗಿದ್ದುಕೊಂಡೇ ಬಹಳ ನೋವು ಅನುಭವಿಸಿದೆ. ಓಡಾಡಲು ಕಷ್ಟವಾಗುತ್ತಿತ್ತು, ಆರೋಗ್ಯ ಕೂಡ ಕೈಕೊಡ್ತು. ಹಾಗಾಗಿ ಕೆಲ ವಾರಗಳ ಕಾಲ ಶೋ ನಡೆಸಿಕೊಡಲು ಆಗಲಿಲ್ಲ ಎಂದು ಹೇಳಿದ್ದಾರೆ.

  ಆದರೆ ತನ್ನ ಮಗುವಿನ ತಂದೆಯ ಹೆಸರನ್ನು ಮಾತ್ರ ಲಿಂಡ್ಸೆ ಬಹಿರಂಗಪಡಿಸಿಲ್ಲ. ರಿಯಾಲಿಟಿ ಶೋನ ಕೊನೆಯ ದಿನ ಅವರ ತಾಯಿ ದಿನಾ ಟ್ವೀಟ್ ಮಾಡಿ "Oprah call me" ಎಂದು ಸಣ್ಣ ಸಂದೇಶ ರವಾನಿಸಿದ್ದರು. ಆಗಲೇ ಏನೋ ಎಡವಟ್ಟಾಗಿದೆ ಎಂದು ಗೊತ್ತಾಗಿತ್ತು. ಆದರೆ ಈಗ ಲಿಂಡ್ಸೆ ತಮಗೇನಾಯಿತು ಎಂಬುದನ್ನು ವಿವರಿಸಿದ್ದಾರೆ.

  English summary
  Hollywood Trouble Star Lindsay Lohan has revealed that she suffered a miscarriage while filming her reality show Lindsay. The 27-year-old Mean Girls star made the announcement in the final episode of her reality series for the season. She said it was the reason she took a couple of weeks off from filming the programme for Oprah Winfrey's OWN network, reported TMZ online. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X