ಆನ್ ಲೈನ್ ನಲ್ಲಿ ಲೀಕ್ ಆಯ್ತು ಲಯನ್ ಕಿಂಗ್ ಸಿನಿಮಾ
ಹಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಲಯನ್ ಕಿಂಗ್' ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಆದರೆ, ರಿಲೀಸ್ ಆದ ದಿನವೇ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಕೆಲವು ವೆಬ್ ಸೈಟ್ ನಲ್ಲಿ 'ಲಯನ್ ಕಿಂಗ್' ಪೂರ್ಣ ಸಿನಿಮಾ ಲೀಕ್ ಆಗಿದೆ. ತಮಿಳು ರಾಕರ್ಸ್ ನಲ್ಲಿ 'ಲಯನ್ ಕಿಂಗ್' 720K ಕ್ವಾಲಿಟಿಯ HD ಪ್ರಿಂಟ್ ಪೈರಸಿ ಆಗಿದೆ. ಚಿತ್ರಮಂದಿರಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದ ಮಂದಿ ಇಲ್ಲಿಯೇ ಡೌನ್ ಲೋಡ್ ಮಾಡಲು ಶುರು ಮಾಡಿದ್ದಾರೆ.
ಲಯನ್ ಕಿಂಗ್ ಹಿಂದಿ ವರ್ಷನ್ ಲೀಕ್ ಆಗಿದೆ. ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ mufasa ಪಾತ್ರಕ್ಕೆ ಹಾಗೂ ಶಾರೂಕ್ ಪುತ್ರ ಆರ್ಯನ್ Simba ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿವೆ. ಆದರೆ, ಪೈರಸಿಯಿಂದ ಸಿನಿಮಾದ ಗಳಿಕೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಕನ್ನಡದ ಸಿನಿಮಾಗಳು ಕೂಡ ಪೈರಸಿ ವಿರುದ್ಧ ಹೋರಾಟ ನಡೆಸುತಲೇ ಇವೆ.
ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 'ಲಯನ್ ಕಿಂಗ್' ಇಂದು ದೇಶಾದ್ಯಂತ ಬಿಡುಗಡೆಯಾಗಿದೆ.
English summary
Lion King full movie leaked in tamilrockers website.


Click it and Unblock the Notifications