»   »  ಲೈಂಗಿಕ ಚಿತ್ರ ಶೂಟಿಂಗ್ ವೇಳೆಯೆ ಮೂವರಿಗೆ ಏಡ್ಸ್

ಲೈಂಗಿಕ ಚಿತ್ರ ಶೂಟಿಂಗ್ ವೇಳೆಯೆ ಮೂವರಿಗೆ ಏಡ್ಸ್

Posted By:
Subscribe to Filmibeat Kannada
los-angeles-third-actor-tests-hiv-positive-porn-filming-suspended
ಲೈಂಗಿಕ ಚಿತ್ರಗಳು ನಿರ್ಮಾಣದ ನಂತರ ಯುವಕರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ನಿಜ. ಆದರೆ ಶೂಟಿಂಗ್ ಹಂತದಲ್ಲೇ ಅಂತಹ ಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಟ/ನಟಿಯರಿಗೆ ಮಾರಕ ಏಡ್ಸ್ ಸೋಂಕು ತಗುಲಿದರೆ ಗತಿಯೇನು?

ಏನಿಲ್ಲ. ಮೂವರು ಕಲಾವಿದರಿಗೆ ಎಚ್ಐವಿ ಪಾಸಿಟೀವ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿರುವುದರಿಂದ ಕಂಗೆಟ್ಟಿರುವ ಲಾಸ್ ಎಂಜಲೀಸ್ ನಲ್ಲಿರುವ ನಿರ್ಮಾಣ ಸಂಸ್ಥೆಯು ಸದ್ಯಕ್ಕೆ ಅಂತಹ ಅಶ್ಲೀಲ ಚಿತ್ರಗಳ ಶೂಟಿಂಗ್ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಇದು ಮುಂದೆ ಸಾಂಕ್ರಾಮಿಕದಂತೆ ಇತರೆ ಕಲಾವಿದರಿಗೂ ಹಬ್ಬುವ ಭೀತಿ ಎದುರಾಗಿರುವುದರಿಂದ ಲೈಂಗಿಕ ಚಿತ್ರಗಳ ನಿರ್ಮಾಣ ಸಾಹಸವನ್ನು ಕೈಬಿಟ್ಟಿದೆ. ಆದರೆ ಚಿತ್ರೋದ್ಯಮದ ಮೂಲಗಳ ಪ್ರಕಾರ ಈಗಾಗಲೇ ಹತ್ತಾರು ನಟಿಯರು ಎಚ್ಐವಿ ಪಾಸಿಟೀವ್ ಆಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಕಳೆದ 15 ದಿನಗಳಲ್ಲಿ ಒಬ್ಬರಾದಮೇಲೊಬ್ಬರಂತೆ ಒಟ್ಟು 3 ವ್ಯಕ್ತಿಗಳಿಗೆ ಈ ರೋಗ ಲಕ್ಷಣ ಅಂಟಿಕೊಂಡಿದೆ. ಆದರೆ ಆ ಮೂರನೆಯ ನಟ/ ನಟಿ ಯಾರು ಎಂಬುದು ಬಹಿರಂಗವಾಗಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

32 ವರ್ಷದ ಈ ಮೂರನೆಯ ವ್ಯಕ್ತಿ ಶೂಂಟಿಂಗ್ ವೇಳೆಯೇ ಎಚ್ಐವಿ ಪಾಸಿಟೀವ್ ಸೋಂಕು ತಗುಲಿಸಿಕೊಂಡರಾ? ಅಥವಾ ಹೊರಗಿನ ಸಂಪರ್ಕದಿಂದಾಗಿ ಈ ರೋಗ ಲಕ್ಷಣ ಅಂಟಿಕೊಂಡಿದೆಯಾ? ಎಂಬುದು ಚಿತ್ರ ತಂಡಕ್ಕೇ ಇನ್ನೂ ಮನವರಿಕೆಯಾಗಿಲ್ಲ ಎಂದು Free Speech Coalition ನಿರ್ಮಾಣ ಸಂಸ್ಥೆ ತಿಳಿಸಿದೆ.

ಇದಕ್ಕೂ ಮುನ್ನ, ಪಾರ್ನ್ ತಾರೆ Cameron Bay ಮೊದಲು ಎಚ್ಐವಿ ಪಾಸಿಟೀವ್ ಆದರು. ಅದಾದ ನಂತರ ಆಕೆಯ ಬಾಯ್ ಫ್ರೆಂಡ್ ಕಮ್ ಚಿತ್ರದಲ್ಲಿನ ಸಹನಟ Rod Dailyಗೆ ಸಹ ಎಚ್ಐವಿ ಪಾಸಿಟೀವ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಮುಂದೆ ಏಡ್ಸ್ ರೋಗದಲ್ಲಿ ಪರ್ಯವಸನಾವಾಗುವ ಲಕ್ಷಣಗಳಿವೆ.

English summary
Los Angeles third actor tests HIV-positive Porn filming moratorium. A third porn star has tested positive for the deadly HIV virus, leaving dozens in the adult film industry quarantined, RadarOnline.com is exclusively reporting.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada