»   » ಲೇಡಿ ಗಾಗಾ ಜೊತೆ ಮಡೋನ್ನಾ ಹೊಸ ರಾಗ

ಲೇಡಿ ಗಾಗಾ ಜೊತೆ ಮಡೋನ್ನಾ ಹೊಸ ರಾಗ

Posted By:
Subscribe to Filmibeat Kannada
Madonna
ಇಬ್ಬರು ಖ್ಯಾತ ಪಾಪ್ ತಾರೆಗಳು ಒಂದಾಗುತ್ತಿದ್ದಾರೆ. ಲೇಡಿ ಗಾಗಾ ಜೊತೆ ಮಡೋನ್ನಾ ಕೈಜೋಡಿಸಲು ಮುಂದಾಗಿದ್ದಾರೆ. ಅಂದರೆ ಗಾಗಾ ಜೊತೆ ಇನ್ನೂ ಮುಂದೆ ಮಡೋನ್ನಾ ಹೊಸ ರಾಗ ಶುರುವಾಗಲಿದೆ ಎಂದಾಯಿತು.

ಐವತ್ತನಾಲ್ಕರ ಹರೆಯದ ಮಡೋನ್ನಾ ಅವರು ತಮ್ಮ ಮ್ಯಾನೇಜರನ್ನು ಕರೆದು, ಗಾಗಾಗೆ ಫೋನು ಹಚ್ಚಿ ಎಂದಿದ್ದಾರೆ. ಈ ಸುದ್ದಿ mirror.co.ukಯಲ್ಲಿ ಲೀಕ್ ಆಗಿದೆ. ಮಡೋನ್ನಾರ ಆಹ್ವಾನವನ್ನು ಗಾಗಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

"ಮಡೋನ್ನಾ ಕರೆಮಾಡಿರುವುದು ಯಾಂಕಿ ಸ್ಟೇಡಿಯಂನಲ್ಲಿ ಇಬ್ಬರೂ ಕಾರ್ಯಕ್ರಮ ನೀಡುವ ಸಲುವಾಗಿ. ಗಾಗಾ ಅವರ ಜೊತೆ ಮಡೋನ್ನಾ ಕಾರ್ಯಕ್ರಮ ನೀಡಲು ಉತ್ಸುಕರಾಗಿದ್ದಾರೆ" ಎಂದು ಗಾಗಾ ಮ್ಯಾನೇಜರ್ ವಿನ್ಸೆಂಟ್ ಹರ್ಬರ್ಟ್ ತಿಳಿಸಿದ್ದಾರೆ.

ಆದರೆ ಮಡೋನ್ನಾ ಅವರ ಜೊತೆ ಕುಣಿಯಲು ಇಪ್ಪತ್ತಾರರ ಹರೆಯದ ಗಾಗಾ ಆಗಲ್ಲ ಎಂದಿದ್ದಾಗಿ ಸುದ್ದಿ. ಇದಕ್ಕೆ ಗಾಗಾ ಕೊಟ್ಟಿರುವ ಕಾರಣ, ಅಯ್ಯೋ ನಾನು ನಿಮ್ಮಷ್ಟು ಫ್ರೀ ಇಲ್ಲ. ಸಿಕ್ಕಾಪಟ್ಟೆ ಬಿಜಿಯಾಗಿದ್ದೀನಿ. ಸಾರಿ ಕ್ಷಮಿಸಿ" ಎಂದಿದ್ದಾರಂತೆ.

ಅಲ್ಲಿಗೆ ಮಡೋನ್ನಾರ ಮುಖಕ್ಕೆ ಮಂಗಳಾರತಿ ಮಾಡಿದಂತಾಗಿದೆ. ಪಾಪ್ ಅಭಿಮಾನಿಗಳ ಪಾಡು ಅಯ್ಯೋ ಪಾಪ ಎಂಬಂತಾಗಿದೆ. 54ರ ತಾರೆಯೇನೋ ಬಿಂಕ ಬಿಟ್ಟು ಮನಬಿಚ್ಚಿ ಆಸೆ ತೋಡಿಕೊಂಡರು. 26ರ ಚೆಲುವೆ ಬಿಂಕದಿಂದ ಆಗಲ್ಲ ಎಂದಳು. (ಏಜೆನ್ಸೀಸ್)

English summary
Madonna wants to join hands with Lady Gaga and perform with her. Madonna, 54, reportedly asked her manager to call Gaga to discuss the proposal, reports mirror.co.uk.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada