»   » ಅಂತರ್ಜಾಲದಲ್ಲಿ ಹರಿದಾಡಿದ ಜಾಕಿ ಚಾನ್ ಸಾವಿನ ಸುದ್ದಿ

ಅಂತರ್ಜಾಲದಲ್ಲಿ ಹರಿದಾಡಿದ ಜಾಕಿ ಚಾನ್ ಸಾವಿನ ಸುದ್ದಿ

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮಾರ್ಷಲ್ ಆರ್ಟ್ಸ್ ಸೂಪರ್ ಸ್ಟಾರ್ ಜಾಕಿ ಚಾನ್ ನಿಧನರಾಗಿದ್ದಾರೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಹರಿದಾಡಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅವರು ಹಾಲಿವುಡ್ ಚಿತ್ರಕ್ಕಾಗಿ ಡೆಡ್ಲಿ ಸಾಹಸ ಮಾಡಬೇಕಾದರೆ ಸಾವಪ್ಪಿದರು ಎಂಬ ಸುದ್ದಿ ಸ್ಫೋಟಗೊಂಡು ಜಾಕಿ ಚಾನ್ ಅಭಿಮಾನಿಗಳನ್ನು ದಂಗುಬಡಿಸಿತು.

  ಆದರೆ ಜಾಕಿ ಚಾನ್ ಅವರು ಸತ್ತಿಲ್ಲ. ತಾನಿನ್ನೂ ಜೀವಂತವಾಗಿದ್ದೀನಿ ಎಂದು ಸ್ವತಃ ಜಾಕಿ ಚಾನ್ ಅವರೇ ಸ್ಪಷ್ಟಪಡಿಸಿದ್ದಾರೆ. ಫೇಸ್ ಬುಕ್ ನ ಪಾಪ್ ಅಲ್ ಆಪ್ ಒಂದರ ಮೂಲಕ ಜಾಕಿ ಚಾನ್ ಸತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು.

  "The 59-year-old actor recently died after perfecting a deadly movie stunt in Hollywood" ಎಂಬ ಸಂದೇಶದ ಫೇಸ್ ಬುಕ್ ಆಪ್ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಗೊಂದಲ, ಕಳವಳ ಮೂಡಿಸಿತ್ತು. ದಯವಿಟ್ಟು ಈ ಫೇಸ್ ಬುಕ್ ಆಪ್ ಕ್ಲಿಕ್ಕಿಸಬೇಡಿ. ಇದೊಂದು ಸ್ಪ್ಯಾಮ್ ಎಂದು ತಿಳಿಸಲಾಗಿದೆ.


  "If I died, I would probably tell the world! I took a photo with today's date, just in case you don't believe me! However, thank you all for your concern. Kiss kiss and love you all," ಎಂಬ ಜಾಕಿ ಚಾನ್ ಪ್ರತಿಕ್ರಿಯೆಯನ್ನು ಸ್ವತಃ ಗೂಗಲ್ ಪ್ರಕಟಿಸಿದೆ.

  ಜಾಕಿ ಚಾನ್ ಅವರು ಸತ್ತಿದ್ದಾರೆ ಎಂಬ ವದಂತಿ ಹಬ್ಬಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಅಂತರ್ಜಾಲದಲ್ಲಿ ನಿಗೂಢವಾಗಿ ಸತ್ತಿದ್ದ ಸುದ್ದಿಯೂ ಹಬ್ಬಿತ್ತು. ಈ ರೀತಿಯ ಸುದ್ದಿಗಳನ್ನು ಹಬ್ಬಿಸಿ ಫೇಸ್ ಬುಕ್ ನಲ್ಲಿ ಒಂದಷ್ಟು ಲಾಭ, ಇನ್ನೊಂದಿಷ್ಟು ಬೇಳೆ ಬೇಯಿಸಿಕೊಳ್ಳುವ ತರ್ಲೆ ಜನ ಇದ್ದೇ ಇರುತ್ತಾರೆ ಬಿಡಿ.

  ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರು ಹಾಲಿವುಡ್ ನಿಂದ ಹಿಡಿದು ನಮ್ಮ ಗಾಂಧಿನಗರದ ತನಕ ಇದ್ದಾರೆ ಎಂಬುದೇ ವಿಶೇಷ. ನಟ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರೂ ಸತ್ತಿದ್ದಾರೆ ಎಂಬ ಗಾಳಿಸುದ್ದಿಗಳನ್ನು ಹಬ್ಬಿಸಿ ಅವರ ಅಭಿಮಾನಿಗಳನ್ನು ಕಳವಳಕ್ಕೀಡು ಮಾಡಿದ್ದನ್ನು ಇಲ್ಲಿ ನೆನೆಯಬಹುದು. (ಏಜೆನ್ಸೀಸ್)

  English summary
  Let's make this perfectly clear - "Rush Hour" actor Jackie Chan is NOT dead. So if fans see a shady Facebook pop-up app claiming that the 59-year-old actor recently died after perfecting a deadly movie stunt in Hollywood, DO NOT click it! It's spam... Chan is simply another victim of the morbid online celebrity death hoax.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more