For Quick Alerts
  ALLOW NOTIFICATIONS  
  For Daily Alerts

  ಮೆಟ್ ಗಾಲಾ 2021: ವಿಚಿತ್ರ ಉಡುಗೆಯಲ್ಲಿ ಗಮನ ಸೆಳೆದ ಕಿಮ್ ಕರ್ದಾಶಿಯನ್

  By ಫಿಲ್ಮಿಬೀಟ್ ಡೆಸ್ಕ್
  |

  ಅಮೆರಿಕದ ಖ್ಯಾತ ಮಾಡೆಲ್, ಕಿರುತೆರೆ ಸ್ಟಾರ್​ ಕಿಮ್​ ಕರ್ದಾಶಿಯನ್ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕಿಮ್ ಅನೇಕ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ವಿಭಿನ್ನವಾಗಿ ಉಡುಗೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

  ಅಮೆರಿಕದ ಈ ಸುಂದರಿ ಸದಾ ಹಾಟ್​ ಅವತಾರದಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಮೈ ಮಾಟ ಪ್ರದರ್ಶಿಸುವಂತಹ ಉಡುಗೆಗಳನ್ನೇ ಧರಿಸಿ ಗಮನ ಸೆಳೆಯುತ್ತಿದ್ದರು. ಆದರೆ ಈ ಬಾರಿ ಅವರು​ 'ಮೆಟ್​ ಗಾಲಾ 2021' ಅದ್ದೂರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೀತಿಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಾಲಿನಿಂದ ನೆತ್ತಿಯವರೆಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಕಿಮ್​ ಕರ್ದಾಶಿಯನ್​ ಕ್ಯಾಮರಾ ಮುಂದೆ ಬಂದಿದ್ದಾರೆ. ಕಿಮ್ ಅವರ ಈ ವಿಚಿತ್ರ ವೇಷದ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

  ಮೆಟ್​ ಗಾಲಾ ಇದೊಂದು ಸೆಲೆಬ್ರಿಟಿಗಳ ಫ್ಯಾಷನ್ ಹಬ್ಬ. ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ವಿಶ್ವದ ಗಮನ ಸೆಳೆಯುತ್ತಾರೆ. ಸೆಲೆಬ್ರಿಟಿಗಳು ಧರಿಸುವ ಉಡುಗೆಯೇ ಈ ಸಂಭ್ರದ ಹೈಲೆಟ್ ಅಂದರೆ ತಪ್ಪಾಗಲ್ಲ. ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಈ ಬಾರಿ ಕೂಡ ಮೆಟ್ ಗಾಲಾ ಅದ್ದೂರಿಯಾಗಿಯೇ ಆಯೋಜನೆಗೊಂಡಿದ್ದು ಅನೇಕ ಸೆಲೆಬ್ರಿಟಿಗಳು ವಿಭಿನ್ನ ಉಡುಗೆಗಳಲ್ಲಿ ಮಿಂಚಿದ್ದಾರೆ. ಆದರೆ ಕಿಮ್ ಉಡುಗೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

  ಕಿಮ್ ಪಕ್ಕದಲ್ಲಿ ಮತ್ತೋರ್ವ ವ್ಯಕ್ತಿ ಅದೇ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ಕಣ್ಣಿಗೆ ಸೆರೆಯಾದ ಆ ವ್ಯಕ್ತಿ ಯಾರು ಎನ್ನುವುದು ಕುತೂಹಲ ಮೂಡಿಸಿದೆ. ಇತ್ತೀಚಿಗಷ್ಟೆ ಕಿಮ್ ವಿಚ್ಚೇದನ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಖ್ಯಾತ ಗಾಯಕ ಕನ್ಯೆ ವೆಸ್ಟೆ ಜೊತೆ 2014ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದ ಮಾಡೆಲ್ ಕಿಮ್ ಕಳೆದ ವರ್ಷ ವಿಚ್ಛೇದನ ಪಡೆಯುವ ಮೂಲಕ ದೂರ ದೂರ ಆದರು. ಇಬ್ಬರ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

  ಇತ್ತೀಚಿಗಷ್ಟೆ ಕಿಮ್, 'ಓಂ' ಆಕಾರದ ಓಲೆ ಧರಿಸಿ ಫೋಟೋಶೂಟ್ ಮಾಡಿಸುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಿಮ್ ಫೋಟೋಗೆ ಭಾರತೀಯ ಭಾರಿ ವಿರೋಧ ವ್ಯಕ್ತಪಡಿಸಿದ್ದರು. 'ನೀವು ಹಿಂದು ಧರ್ಮಕ್ಕೆ ಅಪಮಾನ ಎಸಗಿದ್ದೀರಿ. ನಮ್ಮ ಧರ್ಮವನ್ನು ಲಘುವಾಗಿ ಪ್ರೆಸೆಂಟ್ ಮಾಡುತ್ತಿದ್ದೀರಿ. ನಮ್ಮ ಧರ್ಮವನ್ನು ಅದರ ಪಾಡಿಗೆ ಬಿಟ್ಟುಬಿಡಿ' ಎಂದು ನಟ್ಟಿಗರು ಆಕ್ರೋಶ ಹೊರಹಾಕಿದ್ದರು. ಫೋಟೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಅನೇಕರು ಎಚ್ಚರಿಕೆ ನೀಡಿದ್ದರು.

  ಇನ್ನು 'ಸೆಕ್ಸ್‌ ಟೇಪ್' ಹೆಸರಿನ ನೀಲಿ ಚಿತ್ರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಬಂದ ಕಿಮ್ ಕರ್ದಾಶಿಯನ್, 'ಕೀಪಿಂಗ್ ಅಪ್ ವಿತ್ ಕರ್ದಾಶಿಯನ್ಸ್' ಹೆಸರಿನ ರಿಯಾಲಿಟಿ ಶೋ ಮೂಲಕ ಭಾರಿ ಯಶಸ್ಸು ಗಳಿಸಿದರು. ನಟಿಯಾಗಿ, ನಿರ್ಮಾಪಕಿಯಾಗಿ, ನಿರೂಪಕಿಯಾಗಿ ಸಾಕಷ್ಟು ಖ್ಯಾತಿ ಮತ್ತು ಹಣ ಗಳಿಸಿರುವ ಕಿಮ್‌ರ ಒಟ್ಟು ಆಸ್ತಿ ಮೌಲ್ಯ 7000 ಕೋಟಿಗೂ ಹೆಚ್ಚು.

  English summary
  Met Gala 2021: Kim Kardashian's black undercover look goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X