For Quick Alerts
  ALLOW NOTIFICATIONS  
  For Daily Alerts

  ಸ್ನಾನ ಮಾಡುತ್ತಿರುವ ಬೆತ್ತಲೆ ವಿಡಿಯೋ ಹಂಚಿಕೊಂಡ ಖ್ಯಾತ ನಟಿ: ಅಭಿಮಾನಿಗಳು ಶಾಕ್!

  By ಫಿಲ್ಮಿಬೀಟ್ ಡೆಸ್ಕ್
  |

  ಹಾಲಿವುಡ್ ಖ್ಯಾತ ನಟಿ, ಪಾಪ್ ಗಾಯಕಿ ಮೈಲಿ ಸೈರಸ್ ಬಾತ್‌ ರೂಂ ವಿಡಿಯೋ ಶೇರ್ ಮಾಡಿದ್ದಾಳೆ. ಹಾಡು ಹಾಡುತ್ತಾ ಸ್ನಾನ ಮಾಡುತ್ತಿರುವ ತಮ್ಮದೇ ವಿಡಿಯೋ ಶೂಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಕೆಯ ಈ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿ ನಡೀತಿದೆ.

  ಮೈಲಿ ಸೈರಸ್ ಶೀಘ್ರದಲ್ಲೇ 'ಫ್ಲವರ್ಸ್' ಎನ್ನುವ ಆಲ್ಬಮ್ ಒಂದನ್ನು ಬಿಡುಗಡೆ ಮಾಡುತ್ತಿದ್ದಾಳೆ. ಹಾಗಾಗಿ ಅದರ ಪ್ರಮೋಷನ್‌ಗಾಗಿ ಹೀಗೆ ಸ್ನಾನ ಮಾಡುವ ಬೆತ್ತಲೆ ವಿಡಿಯೋ ಹಂಚಿಕೊಂಡಿದ್ದಾಳೆ. ಪ್ರಮೋಷನ್‌ಗಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರಾ? ಎಂದು ಕೆಲವರು ಚಕಾರ ಎತ್ತಿದ್ದಾರೆ. ಮತ್ತೆ ಕೆಲವರು ಆಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ಇನ್‌ಸ್ಟಾ ಪೋಸ್ಟ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡ್ತಿದೆ. ನಟಿ ಮೈಲಿ ಸೈರಸ್‌ಗೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 192 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆಕೆಯ ಈ ಬಾತ್‌ರೂಮ್ ವಿಡಿಯೋಗೆ ಪೋಸ್ಟ್‌ಗೆ 18 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಇನ್ನು 15 ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಸಿಕ್ಕಿದೆ.

  Miley Cyrus shared a spicy naked shower video to promote her album

  'ಬ್ರೇಕ್‌ಔಟ್', 'ಯಂಗರ್ ನವ್', 'ಪ್ಲಾಸ್ಟಿಕ್ ಹಾರ್ಟ್', 'ಎಂಡ್‌ಲೆಸ್ ಸಮ್ಮರ್ ವಕೇಶನ್' ಸೇರಿದಂತೆ ಹಲವು ಆಲ್ಬಮ್ ಸಾಂಗ್ಸ್‌ನ ಮೈಲಿ ಸೈರಸ್ ಮಾಡಿದ್ದಾಳೆ. ಈ ಹಿಂದೆ ತನ್ನ ಹುಚ್ಚಾಟದಿಂದ ಮಿಲೆ ಸೈರಸ್ ಸಾಕಷ್ಟು ಬಾರಿ ಚರ್ಚೆ ಹುಟ್ಟು ಹಾಕಿದ್ದಳು. ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ 'ದಿ ಬಿಗ್ ಫಿಶ್', 'ಬೋಲ್ಟ್', 'ದಿ ನೈಟ್ ಬಿಫೋರ್', 'ಸ್ಟ್ಯಾಂಡ್ ಬೈ ಯು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಸದ್ಯ ಕ್ಯಾಲಿಫೋರ್ನಿಯಾದಲ್ಲಿ ಮೈಲಿ ಸೈರಸ್ ವಾಸವಿದ್ದಾಳೆ. ಬಾತ್‌ ರೂಂ ವಿಡಿಯೋದಿಂದ ಗಮನ ಸೆಳೆದಿರೋ ಚೆಲುವೆಯ ಆಲ್ಬಮ್ ಹೇಗೆ ಸದ್ದು ಮಾಡುತ್ತದೋ ಕಾದು ನೋಡಬೇಕು.

  English summary
  Miley Cyrus shared a spicy naked shower video to promote her album. Miley Cyrus's Flowers album song is scheduled to be released everywhere on Jan 13. Know more.
  Wednesday, January 11, 2023, 5:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X