»   » ನಾಪತ್ತೆಯಾಗಿದ್ದ ಬ್ರಿಟಿಷ್ ಭಾರತ ನಟ ಸಾವು

ನಾಪತ್ತೆಯಾಗಿದ್ದ ಬ್ರಿಟಿಷ್ ಭಾರತ ನಟ ಸಾವು

Posted By:
Subscribe to Filmibeat Kannada

ಲಂಡನ್, ಜು.18: ಜೇಮ್ಸ್ ಬಾಂಡ್ ಚಿತ್ರ 'ಕ್ಯಾಸಿನೊ ರಾಯಲ್ ' ನಲ್ಲಿ ಪಾತ್ರ ನಿರ್ವಹಿಸಿದ್ದ ಭಾರತೀಯ ಮೂಲದ ಬ್ರಿಟಿಷ್ ನಟ 53ರ ಹರೆಯದ ಪಾಲ್ ಭಟ್ಟಾಚಾರ್ಜೀ ಲಂಡನ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಅಥವಾ ಕೊಲೆ ಎಂಬುದರ ಬಗ್ಗೆ ಯಾವುದೇ ಸಂಶಯ ವ್ಯಕ್ತವಾಗಿಲ್ಲ, ಆದರೂ ತನಿಖೆ ಮುಂದುವರೆದಿದೆ ಎಂದು ಬ್ರಿಟಿಷ್ ಪೊಲೀಸರು ಹೇಳಿದ್ದಾರೆ.

ಲಂಡನ್ ನ ವೆಸ್ಟ್ ಎಂಡ್ ನಲ್ಲಿ ಚಿತ್ರನಿರ್ಮಾಣ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬೆನ್ನಲ್ಲೇ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ನೀಡುವಂತೆ ಸ್ಕಾಟ್ಕೆಂಡ್ ಯಾರ್ಡ್ ಪೊಲೀಸರು ನಾಗರಿಕರಲ್ಲಿ ಕೇಳಿಕೊಂಡಿದ್ದರು.

ಬ್ರಿಟನ್ ನಲ್ಲಿ ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಾಗಿದ್ದ 53 ವರ್ಷ ವಯಸ್ಸಿನ ಗೌತಮ್ ಪಾಲ್ ಭಟ್ಟಾಚಾರ್ಜೀ ಅವರ ಶವ ಗುರುವಾರ ಪತ್ತೆಯಾಗಿದೆ ಎಂದು ಸಸ್ಸೆಕ್ಸ್ ಪೊಲೀಸರು ದೃಢಪಡಿಸಿದ್ದಾರೆ.

Body of missing British born Indian actor Paul Bhattacharjee found

ಕೊನೆಯ ಬಾರಿಗೆ ಅವರು ಜುಲೈ 10ರಂದು ಲಂಡನ್ ನ ರಾಯಲ್ ಕೋರ್ಟ್ ಥಿಯೇಟರ್ ನಲ್ಲಿ ಕಾಣಿಸಿಕೊಂಡಿದ್ದರು ಹಾಗೂ ತನ್ನ ಗೆಳತಿಗೆ ಅದೇ ರಾತ್ರಿ 9 ಗಂಟೆಯ ಸುಮಾರಿಗೆ ಮೊಬೈಲ್ ಸಂದೇಶವನ್ನು ರವಾನಿಸಿದ್ದರು ಎನ್ನಲಾಗಿದ್ದು, ಆ ಬಳಿಕ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಜನಪ್ರಿಯರಾಗಿದ್ದ ಭಟ್ಟಾಚಾರ್ಜೀ ಹಲವು ಕಿರುತೆರೆ ಹಾಗೂ ರಂಗಭೂಮಿ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಅವರು 'ಡರ್ಟಿ ಪ್ರೆಟ್ಟಿ ಥಿಂಗ್ಸ್', ಕ್ಯಾಸಿನೊ ರಾಯಲ್' ಹಾಗೂ 'ದ ಬೆಸ್ಟ್ ಎಕ್ಸೋಟಿಕ್ ಮಾರಿಗೋಲ್ಡ್ ಹೋಟೆಲ್' ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.

English summary
British police said they had found the body of an actor who appeared in James Bond film Casino Royale, who went missing in London.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada