TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವೇಶ್ಯೆ ಜತೆ ಗಾಯಕ ಬೀಬರ್ ಮಲಗಿದ್ನಾ?
ಕೆನಡಾದ ಪಾಪ್ ಗಾಯಕ ಮುದ್ದು ಮುಖದ ಜಸ್ಟೀನ್ ಬೀಬರ್ ಯಾರಿಗೆ ಗೊತ್ತಿಲ್ಲ ಹೇಳಿ. ಬೀಬರ್ ವಿಶ್ವದೆಲ್ಲೆಡೆ ಅಭಿಮಾನಿಗಳ ದೊಡ್ಡ ದಂಡೇ ಇದೆ. ಆದರೆ, ವಿವಾದಗಳು ಮಾತ್ರ ಬೀಬರ್ ನ ಸುತ್ತ ಸದಾ ಕಾಲ ಸುತ್ತುತ್ತಲೇ ಇರುತ್ತದೆ.
ಸದ್ಯ ಎಬಿಸಿ ರಾಷ್ಟ್ರಗಳ ಕಡೆ ಟೂರ್ ಹೊಡೆಯುತ್ತಿರುವ ಬೀಬರ್ ಬ್ರೆಜಿಲ್ ನಲ್ಲಿದ್ದಾಗ ವೇಶ್ಯೆಯೊಬ್ಬಳ ಜತೆ ಸಂಪರ್ಕ ಹೊಂದಿದ್ದ ರಾತ್ರಿ ಆಕೆಯೊಡನೆ ಹಾಡಿ ಕುಣಿದು ಮಜಾ ಉಡಾಯಿಸಿದ್ದ ಎನ್ನಲಾಗಿದೆ. ಅಕೆ 500 ಡಾಲರ್ ನೋಟು ಪಡೆದು ಸಂತೃಪ್ತಿ ಹೊಂದಿ ಹೊರ ನಡೆದಿದ್ದಳು ಎನ್ನಲಾಗಿದೆ.
ಪನಾಮಾದ ಲೆ ಪ್ಯಾಲೇಸ್ ನ ಸೆಕ್ಸ್ ವರ್ಕರ್ ಒಬ್ಬಳು 19 ವರ್ಷದ ಪಾಪ್ ಗಾಯಕ ಬೀಬರ್ ಜತೆ ಮಂಚ ಹಂಚಿಕೊಂಡಿದ್ದೆ ಎಂದಿದ್ದಾಳೆ. ನಾನು 500 ಡಾಲರ್ ಮಾತ್ರ ಪಡೆದುಕೊಂಡೆ ನನಗೆ ಮ್ಯೂಸಿಕ್ ಕಾರ್ಯಕ್ರಮದ ಟಿಕೆಟ್ ಗಳನ್ನು ನೀಡಿದ ಎಂದಿದ್ದಾಳೆ. ಅದರೆ ಬೀಬರ್ ತಂಡ ಇದನ್ನು ಅಲ್ಲಗೆಳೆದಿದೆ.
ಇನ್ನೊಂದು ಪ್ರಕರಣದಲ್ಲಿ ಬ್ರೆಜಿಲಿನ 26 ವರ್ಷದ ರೂಪದರ್ಶಿ ತಾಟಿ ನೆವೆಸ್ ಕೂಡಾ ಬೀಬರ್ ನ ಸಂಪರ್ಕ ಹೊಂದಿದೆ ಎಂದಿದ್ದಾಳೆ. ಇವಳ ಮಾತನ್ನು ನಂಬಲು ಬಲವಾಗಿ ಸಾಕ್ಷಿ ನೀಡಿದ್ದಾಳೆ. ತನ್ನ ನೆಚ್ಚಿನ ಬೇಸ್ ಬಾಲ್ ಕ್ಯಾಪ್ ಜತೆ ಸುಖನಿದ್ರೆಯಲ್ಲಿರುವ ಬೀಬರ್ ಚಿತ್ರವಿರುವ ಕ್ಲಿಪ್ಪಿಂಗ್ ಅನ್ನು ಯೂಟ್ಯೂಬ್ ನಲ್ಲಿ ಈಕೆ ಕಳೆದ ವಾರ ಹರಿಯುವಂತೆ ಮಾಡಿದ್ದಳು. ಈಗ ಈ ವಿಡಿಯೋ ತುಣುಕು ಸುಮಾರು 34,216,212 ಹಿಟ್ಸ್ ಪಡೆದಿದ್ದು ಇನ್ನೂ ಟ್ರೆಂಡಿಂಗ್ ನಲ್ಲಿದೆ.
ಗ್ಲೋಬೊ ಟಿವಿಗೆ ನೀಡಿದ ಸಂದರ್ಶನದಲ್ಲಿ ತಾಟಿ ಬೀಬರ್ ಜತೆ ರಾತ್ರಿ ಕಳೆದಿದ್ದಾಗಿ ಹೇಳಿದ್ದಾಳೆ. ತಾಟಿ ಮೂಲ ಹುಡುಕಿದರೆ ಬ್ರೆಜಿಲ್ ನ ಮ್ಯಾಗಜೀನ್, ವೆಬ್ ತಾಣಗಳಲ್ಲಿ ಒಂದಷ್ಟು ಆಕೆ ರೂಪದರ್ಶಿಯಾಗಿ ನಗ್ನವಾಗಿ ಪೋಸ್ ಕೊಟ್ಟಿರುವ ಚಿತ್ರಗಳು ಸಿಗುತ್ತವೆ. ರಿಯೋದಲ್ಲಿರುವ ಕುಖ್ಯಾತ ವೇಶ್ಯಾಗೃಹಗಳಲ್ಲಿ ಬೀಬರ್ ಆಕೆಯನ್ನು ಪರಿಚಯ ಮಾಡಿಕೊಂಡು ಕರೆ ತಂದ ಎನ್ನಲಾಗಿದೆ.
ಬ್ರೆಜಿಲ್ ಬಿಟ್ಟಿರುವ ಬೀಬರ್ ಅರ್ಜೆಂಟೀನಾದಲ್ಲಿ ಹಾಡುಗಾರಿಕೆ ಜತೆಗೆ ಹುಚ್ಚಾಟ ಕೂಡಾ ಆಡಿ ಅಲ್ಲಿನ ಪೊಲೀಸರು ಹುಡುಕುವಂತೆ ಮಾಡಿದ ಘಟನೆಯೂ ವರದಿಯಾಗಿದೆ. ಹೊಟೆಲ್ ನಿಂದ ಬಲವಂತವಾಗಿ ಬೀಬರ್ ತಂಡವನ್ನು ಹೊರ ಹಾಕಲಾಗಿದೆಯಂತೆ. ಏನೋ ಎಂಥೋ 19 ವರ್ಷಕ್ಕೆ ಬೀಬರ್ ಪಡೆದಿರುವ ಜನಪ್ರಿಯತೆ ಕಂಡು ಇತರೆ ಗಾಯಕರು ಹೊಟ್ಟೆಕಿಚ್ಚು ಪಟ್ಟುಕೊಳ್ಳುವುದು ತಪ್ಪುತ್ತಿಲ್ಲ.
<center><center><iframe width="100%" height="480" src="//www.youtube.com/embed/JCpaTwQ8gGM" frameborder="0" allowfullscreen></iframe></center></center>
ಈ ಹಿಂದೆ ಬೈಬರ್ ಗೆ ಅನೈತಿಕವಾಗಿ ಹುಟ್ಟಿರುವ ಗಂಡು ಮಗು ಹಾಗೂ ತಾಯಿಯ ಚಿತ್ರವಿರುವ ಕವರ್ ಪೇಜ್ ಅನ್ನು ಸ್ಟಾರ್ ಮ್ಯಾಗಜೀನ್ ಪ್ರಕಟಿಸಿತ್ತು. ಟ್ರಿಸ್ಟೀನ್ ಅಂಟೋನಿ ಮಾರ್ಕ್ ಹೌಸ್ ಯೀಟರ್ ಎಂಬ ದೀರ್ಘನಾಮವನ್ನು ಆ ಮಗುವಿಗೆ ಇಡಲಾಗಿದೆ ಎನ್ನಲಾಗಿತ್ತು. ಮಗು ಬೆಳೆದು ಅಪ್ಪನಂತೆ ಹಾಡಲು ಶುರು ಮಾಡಿದರೆ ಗೊತ್ತಾಗುತ್ತೆ ಬಂಡವಾಳ ಎಂದು ಹಾಲಿವುಡ್ ಮಂದಿ ಆಡಿಕೊಂಡು ನಗಾಡಿದ್ದರು.