India
  For Quick Alerts
  ALLOW NOTIFICATIONS  
  For Daily Alerts

  ಟಾಮ್ ಕ್ರೂಮ್ ಪಡೆವ ಸಂಭಾವನೆಯಲ್ಲಿ 8 'ಕೆಜಿಎಫ್ 2' ನಿರ್ಮಿಸಬಹುದು! ಇಲ್ಲಿದೆ ಭಾರಿ ಸಂಭಾವನೆ ಪಡೆವ ನಟರ ಪಟ್ಟಿ

  |

  ಅತಿ ಹೆಚ್ಚು ಸಂಭಾವನೆ ಪಡೆವ ವಿಷಯದಲ್ಲಿ ಪೈಪೋಟಿ ಏರ್ಪಟ್ಟಿದೆ ಭಾರತ ಸ್ಟಾರ್ ನಟರ ಮಧ್ಯೆ. ರಜನೀಕಾಂತ್, ಪ್ರಭಾಸ್, ವಿಜಯ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಮಹೇಶ್ ಬಾಬು, ಹೀಗೆ ಒಬ್ಬರಗಿಂತಲೂ ಒಬ್ಬರು ಹೆಚ್ಚು ಹೆಚ್ಚು ಸಂಭಾವನೆ ಪಡೆಯಲು ನಿಂತಿದ್ದಾರೆ.

  ಭಾರತದ ನಟರು ಮಾತ್ರವಲ್ಲ ವಿಶ್ವಮಟ್ಟದ ಸಿನಿಮಾ ನಟರು ಸಹ ತಮ್ಮ ತಮ್ಮ ಸಂಭಾವನೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಸಂಭಾವನೆ ಪಡೆವ ವಿಷಯದಲ್ಲಿ ಹಾಲಿವುಡ್‌ನಲ್ಲಿಯೂ ದೊಡ್ಡ ಪೈಪೋಟಿಯೇ ನಡೆಯುತ್ತಿದೆ.

  2022ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರ ಪಟ್ಟಿಯನ್ನು ಜನಪ್ರಿಯ ಮಾಧ್ಯಮ ಸಂಸ್ಥೆ 'ವೆರೈಟಿ' ಇದೀಗ ಬಿಡುಗಡೆ ಆಗಿದೆ. ಪಟ್ಟಿಯಲ್ಲಿ ನಟ ಟಾಮ್ ಕ್ರೂಸ್ ಮೊದಲಿನಲ್ಲಿದ್ದು, ಅವರು ತಮ್ಮ ಈ ಹಿಂದಿನ ಸಿನಿಮಾಕ್ಕೆ ಪಡೆದ ಸಂಭಾವನೆ ಮೊತ್ತದಲ್ಲಿರುವ ಸೊನ್ನೆಗಳನ್ನು ನೋಡಿದರೆ ತಲೆ ತಿರುಗುವುದು ಪಕ್ಕಾ.

  ಅತ್ಯಂತ ದುಬಾರಿ ಸಂಭಾವನೆ ಪಡೆವ ಟಾಮ್ ಕ್ರೂಸ್

  ಅತ್ಯಂತ ದುಬಾರಿ ಸಂಭಾವನೆ ಪಡೆವ ಟಾಮ್ ಕ್ರೂಸ್

  ಮಿಷನ್ ಇಂಪಾಸಿಬಲ್, ಟಾಪ್ ಗನ್. ಮಮ್ಮಿ 3 ಸೇರಿದಂತೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನುನ ನೀಡಿರುವ ಟಾಮ್ ಕ್ರೂಸ್, ಇದೇ ವರ್ಷ ಬಿಡುಗಡೆ ಆದ 'ಟಾಪ್ ಗನ್; ಮಾವೆರಿಕ್' ಸಿನಿಮಾಕ್ಕೆ ಬರೋಬ್ಬರಿ 100 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ. ಈ ಮೊತ್ತವನ್ನು ರೂಪಾಯಿಗೆ ಬದಲಾಯಿಸಿದರೆ ಸರಿ ಸುಮಾರಿ 800 ಕೋಟಿ ಆಗುತ್ತದೆ. ತಾವು ಪಡೆವ ಸಂಭಾವನೆಗೆ ಪಕ್ಕಾ ಪೈಸಾ ವಸೂಲ್ ಮಾಡಿಕೊಡುವ ಏಕೈಕ ಹಾಲಿವುಡ್ ನಟ ಎಂಬ ಖ್ಯಾತಿ ಸಹ ಟಾಮ್ ಕ್ರೂಸ್‌ಗೆ ಇದೆ. ಇವರ ನಟನೆಯ 'ಮಿಷನ್ ಇಂಪಾಸಿಬಲ್' ಸರಣಿಯ ಹೊಸ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

  ಎರಡನೇ ಸ್ಥಾನದಲ್ಲಿ ವಿಲ್ ಸ್ಮಿತ್

  ಎರಡನೇ ಸ್ಥಾನದಲ್ಲಿ ವಿಲ್ ಸ್ಮಿತ್

  ಶಾರುಖ್ ಖಾನ್ ನಟನೆಯ 'ರಾ ಒನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಹಾಲಿವುಡ್ ನಟ ವಿಲ್ ಸ್ಮಿತ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಹೊಸ ಸಿನಿಮಾ 'ಇಮ್ಯಾನ್ಸಿಕ್ಯಾಪ್ಷನ್' ಬರೋಬ್ಬರಿ 35 ಮಿಲಿಯನ್ ಡಾಲರ್ ಪಡೆಯುತ್ತಾರಂತೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ 280 ಕೋಟಿ. ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಸಹ ಪಡೆದಿರುವ ವಿಲ್ ಸ್ಮಿತ್ ಮುಂದಿನ ದಿನಗಳಲ್ಲಿ ಸಂಭಾವನೆ ಏರಿಸಿಕೊಂಡರೂ ಆಶ್ಚರ್ಯವಿಲ್ಲ.

  'ಟೈಟ್ಯಾನಿಕ್' ಹೀರೋನ ಈಗಿನ ಸಂಭಾವನೆ ಎಷ್ಟು?

  'ಟೈಟ್ಯಾನಿಕ್' ಹೀರೋನ ಈಗಿನ ಸಂಭಾವನೆ ಎಷ್ಟು?

  'ಟೈಟ್ಯಾನಿಕ್' ಸಿನಿಮಾ ಮೂಲಕ ವಿಶ್ವದಲ್ಲಿ ಮನೆ ಮಾತಾದ ನಟ ಲಿಯೊನಾರ್ಡ್ ಡಿಕ್ಯಾಪ್ರಿಯೊ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಲಿಯೊನಾರ್ಡೊ ತಮ್ಮ ಹೊಸ ಸಿನಿಮಾ 'ಕಿಲ್ಲರ್ಸ್‌ ಆಫ್ ದಿ ಫ್ಲವರ್ ಮೂನ್' ಸಿನಿಮಾಕ್ಕೆ 30 ಮಿಲಿಯನ್ ಡಾಲರ್ ಪಡೆದಿದ್ದಾರೆ. ಅಂದರೆ ಸುಮಾರು 240 ಕೋಟಿ. 'ಕಿಲ್ಲರ್ಸ್‌ ಆಫ್ ದಿ ಫ್ಲವರ್ ಮೂನ್' ಸಿನಿಮಾವನ್ನು ಖ್ಯಾತ ನಿರ್ದೇಶಕ ಮಾರ್ಟಿನ್ ಸ್ಕೊರ್ಸೆಸಿ ನಿರ್ದೇಶನ ಮಾಡುತ್ತಿದ್ದಾರೆ. ನಟ ಬ್ರಾಡ್ ಪಿಟ್ ಸಹ ಇಷ್ಟೇ ಮೊತ್ತ ಪಡೆದಿದ್ದಾರಂತೆ ತಮ್ಮ ಹೊಸ ಸಿನಿಮಾಕ್ಕೆ.

  ಡ್ವೇನ್ ಜೋನ್ಸ್‌ಗೆ ಎಷ್ಟು ಸಂಭಾವನೆ?

  ಡ್ವೇನ್ ಜೋನ್ಸ್‌ಗೆ ಎಷ್ಟು ಸಂಭಾವನೆ?

  ಕಳೆದ ವರ್ಷ ಅತಿ ಶ್ರೀಮಂತ ನಟರ ಫೋರ್ಬ್‌ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸಿದ್ದ ಡ್ವೇನ್ ಜೋನ್ಸ್‌ ಈ ವರ್ಷ ತಮ್ಮ ಹೊಸ ಸಿನಿಮಾ 'ಬ್ಲಾಕ್ ಆಡಮ್ಸ್'ಗೆ ಪಡೆದಿರುವ ಸಂಭಾವನೆ 180 ಕೋಟಿ ರೂಪಾಯಿ. ಈ ಪಟ್ಟಿಯಲ್ಲಿರುವ ಇತರೆ ನಟರಿಗೆ ಹೋಲಿಸಿದರೆ ಡ್ವೇನ್ ಜೋನ್ಸ್‌ ಬಳಿ ಹೆಚ್ಚು ಸಿನಿಮಾ ಹಾಗೂ ಜಾಹೀರಾತುಗಳಿವೆಯಾದ್ದರಿಂದ ಅವರು ಅತಿ ಶ್ರೀಮಂತ ನಟ ಸಹ ಹೌದು. ಡ್ವೇನ್ ಜೋನ್ಸ್‌ ಸಹ ಕೊಟ್ಟ ಸಂಭಾವನೆಗೆ ಮೋಸ ಮಾಡದ ನಟರೆಂದೇ ಹಾಲಿವುಡ್‌ನಲ್ಲಿ ಖ್ಯಾತರು. ಅವರ ಮೇಲೆ ಹೂಡಿದ ಬಂಡವಾಳ ಪಕ್ಕಾ ವಾಪಸ್ಸಾಗುವುದಂತೆ.

  150 ಕೋಟಿ ಪಡೆಯುವವರ ದೊಡ್ಡ ಪಟ್ಟಿ ಇದೆ

  150 ಕೋಟಿ ಪಡೆಯುವವರ ದೊಡ್ಡ ಪಟ್ಟಿ ಇದೆ

  ಹಾಲಿವುಡ್‌ನಲ್ಲಿ 150-200 ಕೋಟಿ ಸಂಭಾವನೆ ಪಡೆವ ನಟರ ದೊಡ್ಡ ಬಳಗವೇ ಇದೆ. ಥೋರ್ ಪಾತ್ರ ನಿರ್ವಹಿಸುವ ಕ್ರಿಸ್ ಹ್ಯಾಮ್ಸ್‌ವರ್ತ್, ಐರನ್ ಮ್ಯಾನ್ ಖ್ಯಾತಿಯ ಟೋನಿ ಸ್ಟಾರ್ಕ್, ಜನಪ್ರಿಯ ನಟ ವಿನ್ ಡೀಸೆಲ್, 'ಜೋಕರ್' ಪಾತ್ರಧಾರಿ ಜಾಕ್ವಿನ್ ಫಿಯೋನಿಕ್ಸ್, 'ವೆನಮ್' ಸಿನಿಮಾದ ಟಾಮ್ ಹಾರ್ಡಿ, ರ್ಯಾನ್ ರೊನಾಲ್ಡ್ಸ್‌ ಇನ್ನೂ ಕೆಲವು ನಟರು 150-180 ಕೋಟಿ ಒಳಗೆ ಸಂಭಾವನೆ ಪಡೆಯುತ್ತಾರೆ. ಇನ್ನು ನಟ ರ್ಯಾನ್ ಗೋಸ್ಲಿಂಗ್, ಮರ್ಗೊಟ್ ರೋಬಿ ಸಹ ಸಿನಿಮಾ ಒಂದಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಾರೆ.

  ಸುದೀಪ್ is fantastic ಎಂದ ಸಲ್ಲು | Vikrant Rona | Kiccha Sudeep | Salman Khan | *Press Meet |
  English summary
  Here is the list of most paid actors of Hollywood in 2022. Tom Cruise is the hieghst paid actors. Will Smith is in second place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X