For Quick Alerts
  ALLOW NOTIFICATIONS  
  For Daily Alerts

  'ನೀರಿನಂತಿರು ಗೆಳೆಯ' ಎನ್ನುತ್ತಿದ್ದ ಬ್ರೂಸ್‌ ಲೀ ನೀರಿನಿಂದಲೇ ಸತ್ತರೇ? ಕೊನೆಗೂ ಸಾವಿನ ರಹಸ್ಯ ಬಯಲು!

  |

  ಸಮರ ಕಲೆ ಲೋಕದ ದಿಗ್ಗಜ ಬ್ರೂಸ್ ಲೀ ಬಗ್ಗೆ ಹೊಸದಾಗಿ ಪರಿಚಯ ಮಾಡಿಸುವ ಅವಶ್ಯಕತೆ ಇಲ್ಲ. ದಶಕಗಳ ಹಿಂದೆ ಹಾಂಗ್ ಕಾಂಗ್‌ ಮೂಲದ ಈ ನಟನ ಸಿನಿಮಾಗಳು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಬಹಳ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿ ಬ್ರೂಸ್‌ ಲೀ 1973 ಜುಲೈ 20ರಂದು ಕೊನೆಯುಸಿರೆಳೆದಿದ್ದರು. ಇವತ್ತಿಗೂ ಅವರ ಸಾವಿನ ನಿಖರವಾದ ಕಾರಣ ತಿಳಿದು ಬಂದಿಲ್ಲ.

  ಬ್ರೂಸ್ ಲೀ ಪಂಚ್ ಕೊಟ್ಟರೆ ಅದು ಕ್ಯಾಮರಾ ಸ್ಲೋ ಮೋಷನ್‌ಗೂ ಸಿಗುತ್ತಿರಲಿಲ್ಲ. ತನ್ನ ಅದ್ಭುತ ಮಾರ್ಷಲ್ ಆರ್ಟ್ಸ್ ಕಲೆಯಿಂದ ಬ್ರೂಸ್‌ ಲೀ 50, 60ರ ದಶಕದಲ್ಲಿ ಯುವ ಜನತೆಗೆ ಮೋಡಿ ಮಾಡಿದ್ದರು. ಹುಡುಗರು ನಾನು ಕೂಡ ಬ್ರೂಸ್ ಲೀ ರೀತಿ ಮಾರ್ಷಲ್ ಆರ್ಟ್ಸ್ ಕಲಿಬೇಕು, ದೇಹ ಹುರಿಗೊಳಿಸಬೇಕು ಎನ್ನುತ್ತಿದ್ದರು. ಚಿಕ್ಕಂದಿನಿಂದಲೇ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದ ಬ್ರೂಸ್‌ ಲೀ ನಟರಾಗಿ, ನಿರ್ದೇಶಕರಾಗಿ ಹಾಂಗ್ ಕಾಂಗ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಗುರ್ತಿಸಿಕೊಂಡಿದ್ದರು. ಬ್ರೂಸ್‌ ಲೀ ಸಾವಿಗೆ ಕಾರಣ ಹುಡುಕುವ ಪ್ರಯತ್ನ ದಶಕಗಳಿಂದ ನಡೆಯುತ್ತಲೇ ಇದೆ. 49 ವರ್ಷಗಳ ನಂತರ ಸಂಶೋಧಕರು ಈ ಸಾವಿನ ರಹಸ್ಯ ಭೇದಿಸಿರುವುದಾಗಿ ವರದಿ ಆಗಿದೆ.

  'ಅವತಾರ್' ಸರಣಿ ವಿಚಾರದಲ್ಲಿ ಜೇಮ್ಸ್ ಕ್ಯಾಮರೂನ್ ಶಾಕಿಂಗ್ ನಿರ್ಧಾರ!'ಅವತಾರ್' ಸರಣಿ ವಿಚಾರದಲ್ಲಿ ಜೇಮ್ಸ್ ಕ್ಯಾಮರೂನ್ ಶಾಕಿಂಗ್ ನಿರ್ಧಾರ!

  ಕುಂಗ್‌ಫು ಪ್ರವೀಣ ಬ್ರೂಸ್‌ ಲೀ ಅನಿರೀಕ್ಷಿತ ಸಾವು ಪ್ರಪಂಚಕ್ಕೆ ಆಘಾತ ತಂದಿತ್ತು. ಅಂದಿನಿಂದಲೂ ಅವರ ಸಾವಿನ ಕಾರಣದ ಬಗ್ಗೆ ಚರ್ಚೆ ನಡೀತಾನೇ ಇದೆ. ಇದೀಗ ಸಂಶೋಧಕರು ಬ್ರೂಸ್ ಲೀ ಸಾವಿಗೆ ಎರಡು ಕಾರಣಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಬಗ್ಗೆ ಕ್ಲಿನಿಕಲ್ ಕಿಡ್ನಿ ಜರ್ನಲ್‌ನಲ್ಲಿ ಪ್ರಕಟವಾದ ಪತ್ರಿಕೆಯಲ್ಲಿ ವರದಿ ಆಗಿದೆ.

  2 ಕಾರಣ ಮುಂದಿಟ್ಟ ಸಂಶೋಧಕರು

  2 ಕಾರಣ ಮುಂದಿಟ್ಟ ಸಂಶೋಧಕರು

  ಬ್ರೂಸ್‌ ಲೀ ಸಾವಿಗೆ 'ಸೆರೆಬ್ರಲ್ ಎಡಿಮಾ' ಅಂದರೆ ಮೆದುಳು ಊತವೇ ಕಾರಣ ಎನ್ನುವ ಬಗ್ಗೆ ಈ ಹಿಂದೆ ಕೆಲವರು ಹೇಳಿದ್ದರು. ಹೊಸ ಸಂಶೋಧನಯಲ್ಲಿ ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆದಿದೆ. ಜೊತೆಗೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಕೂಡ ಅವರ ಸಾವಿಗೆ ಕಾರಣ ಇರಬಹುದು ಎನ್ನಲಾಗಿದೆ. ಶವಪರೀಕ್ಷೆ ವೇಳೆ ಬ್ರೂಸ್ ಲೀ ಅವರ ಮೆದುಳು 1,575 ಗ್ರಾಂಗಳಷ್ಟು ಊದಿಕೊಂಡಿತ್ತು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಮನುಷ್ಯನ ಮೆದುಳು ಸರಾಸರಿ 1,400 ಗ್ರಾಂ ಗಾತ್ರ ಇರುತ್ತದೆ. ಈ ಊತದಿಂದಲೇ ಬ್ರೂಸ್ ಲೀ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

  ಹೆಚ್ಚು ನೀರು ಸೇವನೆ ಪ್ರಾಣಕ್ಕೆ ಕುತ್ತು!

  ಹೆಚ್ಚು ನೀರು ಸೇವನೆ ಪ್ರಾಣಕ್ಕೆ ಕುತ್ತು!

  ಸದಾ ಸಮರ ಕಲೆ ಅಭ್ಯಾಸ, ಸಿನಿಮಾಗಳಲ್ಲಿ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಿದ್ದ ಬ್ರೂಸ್ ಲೀ ಹೆಚ್ಚು ನೀರು ಕುಡಿಯುತ್ತಿದ್ದರು. ಹೆಚ್ಚು ನೀರು ತೆಗೆದುಕೊಂಡು ಅದೇ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡದಿರುವುದು ಹೈಪೋನಾಟ್ರೀಮಿಯಾಕ್ಕೆ ಕಾರಣವಾಗಿದೆ. ಬ್ರೂಸ್ ಲೀ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಿದ್ದಕ್ಕೆ ಈ ಸಮಸ್ಯೆ ಎದುರಾಗಿದೆ. ಇದೂ ಅವರ ಸಾವಿಗೆ ಕಾರಣವಾಯಿತು' ಎನ್ನುತ್ತಾರೆ ಸಂಶೋಧಕರು. 'ಬಿ ವಾಟರ್ ಮೈ ಫ್ರೆಂಡ್' ಎನ್ನುತ್ತಿದ್ದ ಬ್ರೂಸ್‌ ಲೀ ಪ್ರಾಣವನ್ನು ಅದೇ ನೀರು ತೆಗೆದು ಬಿಡ್ತಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

  ಅತಿಯಾದ ದೇಹ ದಂಡನೆ

  ಅತಿಯಾದ ದೇಹ ದಂಡನೆ

  ಇನ್ನು ಸಮರ ಕಲೆ ಅಭ್ಯಾಸದ ವೇಳೆ ಬ್ರೂಸ್ ಲೀ ಬಾಯಾರಿಕೆ ನೀಗಿಸಲು ಕ್ಯಾರೆಟ್ ಜ್ಯೂಸ್, ಆಪಲ್ ಜ್ಯೂಸ್ ಮತ್ತು ಪ್ರೋಟೀನ್ ಪಾನೀಯಗಳನ್ನು ಹೆಚ್ಚು ಸೇವಿಸುತ್ತಿದ್ದರು. ದೇಹದಿಂದ ಸೋಡಿಯಂ ತೆಗೆದು ಹೆಚ್ಚಿನ ಸ್ನಾಯುಗಳನ್ನು ಬೆಳೆಸುವ ಪ್ರಯೋಗ ಮಾಡಿರುವುದಾಗಿ ಹೇಳಲಾಗಿದೆ. ಸಾವಿಗೂ ಹಿಂದಿನ ತಿಂಗಳಲ್ಲಿ 10ರಿಂದ 20 ಸೆರಾಮಿಕ್ ಬಾಟಲ್ ಶೇಕ್ ಕುಡಿಯುತ್ತಿದ್ದರು ಎನ್ನುತ್ತಾರೆ ಆಪ್ತರು.

  ಈಕ್ವಿಜಿಕ್ ಮಾತ್ರೆ ಸೇವನೆ

  ಈಕ್ವಿಜಿಕ್ ಮಾತ್ರೆ ಸೇವನೆ

  ವರದಿಗಳ ಪ್ರಕಾರ, ಬ್ರೂಸ್ ಲೀ ಸಾಯುವ ರಾತ್ರಿ ಗಾಂಜಾವನ್ನು ಸೇದಿದ್ದರು, ನಂತರ ನೀರನ್ನು ಸೇವಿಸಿದರು. ಇದಾದ ಸ್ವಲ್ಪ ಸಮಯದ ನಂತರ, ರಾತ್ರಿ 7.30 ರ ಸುಮಾರಿಗೆ ಅವರಿಗೆ ತಲೆನೋವು ಮತ್ತು ತಲೆತಿರುಗುವಿಕೆ ಕಾಣಿಸಿಕೊಂಡಿತು. ಹಾಗಾಗಿ ಈಕ್ವಿಜಿಕ್ ಎಂಬ ನೋವು ನಿವಾರಕ(ಪೇನ್ ಕಿಲ್ಲರ್) ಮಾತ್ರೆ ತೆಗೆದುಕೊಂಡು ಮಲಗಿದರು. 2 ಗಂಟೆಗಳ ನಂತರ ಬ್ರೂಸ್‌ ಲೀ ಮೇಲೇಳಲೇ ಇಲ್ಲ.

  English summary
  Mystery of Bruce Lee's death may finally have been solved after nearly 5 decades. know more.
  Sunday, November 20, 2022, 15:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X