For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ಪ್ರಶಸ್ತಿ ಗೆದ್ದು ತಮ್ಮ ತಾಯಿಗೆ ಧನ್ಯವಾದ ಹೇಳಿದ ನಟ ಗ್ಯಾರಿ ಓಲ್ಡ್ ಮ್ಯಾನ್

  By Naveen
  |

  90ನೇ ಆಸ್ಕರ್ ಪ್ರಶಸ್ತಿ ಪ್ರಕಟವಾಗುತ್ತಿದೆ. ಅಮೆರಿಕ ಪೆಸಿಫಿಕ್ ಕಾಲಮಾನದ ಪ್ರಕಾರ ಮಾರ್ಚ್ 4 ರಂದು ಸಂಜೆ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ಅತ್ಯುತ್ತಮ ಪೋಷಕ ನಟ, ಪೋಷಕ ನಟಿ ಸಿನಿಮಾಟೊಗ್ರಾಫಿ, ಸ್ಕ್ರೀನ್ ಪ್ಲೇ, ಸೌಂಡ್ ಎಡಿಟಿಂಗ್ ಸೇರಿದಂತೆ ತಂತ್ರಜ್ಞರ ಪ್ರಶಸ್ತಿಗಳನ್ನು ಗಳನ್ನು ಘೋಷಣೆ ಮಾಡಲಾಗಿದೆ.

  ಇನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಅತ್ಯುತ್ತಮ ನಟ (ಲೀಡ್ ರೋಲ್) ಮತ್ತು ಅತ್ಯುತ್ತಮ ನಟಿ (ಲೀಡ್ ರೋಲ್) ಪ್ರಶಸ್ತಿಗಳನ್ನು ಇದೀಗ ನೀಡಲಾಗಿದೆ. ನಟ ಗ್ಯಾರಿ ಓಲ್ಡ್ ಮ್ಯಾನ್ (Gary Oldman) ಡಾರ್ಕೆಸ್ಟ್ ಹವರ್ (Darkest Hour) ಸಿನಿಮಾದ ತಮ್ಮ ಅಮೋಘ ನಟನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಪಡೆದ ಗ್ಯಾರಿ ಓಲ್ಡ್ ಮ್ಯಾನ್ ತಮ್ಮ 90 ವರ್ಷದ ತಾಯಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಗ್ಯಾರಿ ಓಲ್ಡ್ ಮ್ಯಾನ್ ಪತ್ನಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಈ ವರ್ಷದ ಆಸ್ಕರ್ ಪ್ರಶಸ್ತಿ ಪಡೆದ ಪ್ರಮುಖ ತಂತ್ರಜ್ಞರು

  ಇನ್ನು ನಟಿ ಫ್ರಾನ್ಸಿಸ್ ಎಂಸಿದೋರ್ಮ್ಯಾಂಡ್ (Frances McDormand ) 'ತ್ರಿ ಬಿಲ್ ಬೋರ್ಡ್' (Three Billboards Outside Ebbing, missouri ) ಸಿನಿಮಾದ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಶೇಷ ಅಂದರೆ ಇದೇ ಸಿನಿಮಾಗೆ ನಟ ಸ್ಯಾಮ್ ರಾಕ್ವೆಲ್ ಅವರಿಗೆ ಕೂಡ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

  English summary
  Oscar Awards 2018 : Gary Oldman wins best actor award for 'Darkest Hour' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X