For Quick Alerts
  ALLOW NOTIFICATIONS  
  For Daily Alerts

  2019ರಲ್ಲಿ 'ತನ್ನನ್ನು ಹೊಸದಾಗಿ ಅರಿತುಕೊಳ್ಳಲು ಭಾರತಕ್ಕೆ ಬಂದಿದ್ದೇನೆ' ಎಂದಿದ್ದ ಹಾಲಿವುಡ್ ನಟ ವಿಲ್ ಸ್ಮಿತ್

  |

  ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಹಾಲಿವುಡ್ ನಟ ವಿಲ್ ಸ್ಮಿತ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಾಮಿಡಿಯನ್ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್ ವಿವಾದಕ್ಕೆ ಒಳಗಾಗಿದ್ದರು. ಅಲ್ಲಿಂದ ವಿಲ್ ಸ್ಮಿತ್ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ವಿವಾದಕ್ಕೆ ಸಿಕ್ಕಿದ್ದ ಬಳಿಕ ಇದೇ ಮೊದಲ ಬಾರಿಗೆ ಹಾಲಿವುಡ್ ನಟ ವಿಲ್ ಸ್ಮಿತ್ ಕಾಣಿಸಿಕೊಂಡಿದ್ದಾರೆ.

  ವಿಲ್ ಸ್ಮಿತ್ ದಿಢೀರನೇ ಭಾರತಕ್ಕೆ ಭೇಟಿ ನೀಡಿದ್ದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಭಾರತದೊಂದಿಗೆ ವಿಲ್ ಸ್ಮಿತ್‌ಗೆ ವಿಶೇಷವಾದ ನಂಟಿದ್ದರೂ, ಆಸ್ಕರ್ ಪಡೆದ ಕೆಲವೇ ದಿನಗಳಲ್ಲಿ ಭಾರತಕ್ಕೆ ವಿಸಿಟ್ ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದು ( ಏಪ್ರಿಲ್ 23) ಬೆಳಗ್ಗೆ ವಿಲ್ ಸ್ಮಿತ್ ಮುಂಬೈನ ಖಾಸಗಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತನ್ನ ಅಭಿಮಾನಿಗಳಿಗೆ ಕೈ ಬೀಸಿ ಮಂದಹಾಸ ಬೀರಿದ್ದರು.

  ವಿಲ್ ಸ್ಮಿತಾ ಭಾರತ ಭೇಟಿ ಗುಟ್ಟೇನು?

  ವಿಲ್ ಸ್ಮಿತಾ ಭಾರತ ಭೇಟಿ ಗುಟ್ಟೇನು?

  ಹಾಲಿವುಡ್ ನಟರು ಹಲವು ಕಾರಣಕ್ಕೆ ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತದಲ್ಲಿ ಹಾಲವುಡ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣಕ್ಕೆ ತನ್ನ ಫ್ಯಾನ್ ಬೇಸ್‌ ಅನ್ನು ಹೆಚ್ಚಿಸಿಕೊಳ್ಳಲು ಭಾರತಕ್ಕೆ ಭೇಟಿ ನೀಡುತ್ತಾರೆ. ಇನ್ನೊಂದು ಕಡೆ ಭಾರತದ ಆಧ್ಯಾತ್ಮದೊಂದಿಗೆ ನಂಟು ಹೊಂದಿದ್ದಾರೆ. ಅದರಂತೆ ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಕೂಡ ಭಾರತದೊಂದು ಉತ್ತಮ ನಂಟು ಹೊಂದಿದ್ದು, ಭಾರತದ ಆಧ್ಯಾತ್ಮಿಕ ಚಿಂತನೆಗಾಗಿ ಬಂದು ಹೋಗಿದ್ದರು.

  3 ವರ್ಷ ಹಿಂದೆ ಬಂದಿದ್ದ ವಿಲ್ ಸ್ಮಿತ್ ಹೇಳಿದ್ದೇನು?

  3 ವರ್ಷ ಹಿಂದೆ ಬಂದಿದ್ದ ವಿಲ್ ಸ್ಮಿತ್ ಹೇಳಿದ್ದೇನು?

  2019ರಲ್ಲಿ ವಿಲ್ ಸ್ಮಿತಾ ಭಾರತಕ್ಕೆ ಭೇಟಿ ನೀಡಿದ್ದರು. ಆ ವೇಳೆ ವಿಲ್ ಸ್ಮಿತ್ ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಕೆಲವು ಆಧ್ಯಾತ್ಮಿಕ ಆಚರಣೆಗಳಲ್ಲಿ ಹಾಲಿವುಡ್ ನಟ ಭಾಗಿಯಾಗಿದ್ದರು. ಆಧ್ಯಾತ್ಮ ಗುರುಗಳೊಂದಿಗೆ ವಿಲ್ ಸ್ಮಿತ್ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಗಂಗಾ ನದಿಯ ತೀರದಲ್ಲಿ ನಡೆಯುವ ಆಚರಣೆಗಳಲ್ಲಿ ಭಾಗಿಯಾಗಿದ್ದರು. " ಅನುಭವದ ಮೂಲಕ ದೇವರು ಪಾಠ ಕಲಿಸುತ್ತಾನೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಭಾರತಕ್ಕೆ ಬಂದು ಇಲ್ಲಿನ ಬಣ್ಣಗಳು, ಜನರು, ಪ್ರಕೃತಿ ಸೌಂದರ್ಯದ ಅನುಭವ ಪಡೆಯುವ ಮೂಲಕ ನನ್ನ ಬಗ್ಗೆ ಹೊಸ ಅರಿವು ಪಡೆಯುವುದು ಹಾಗೂ ವಿಶ್ವದ ಸತ್ಯವನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ." ಎಂದು ಹೇಳಿದ್ದರು.

  ವಿಲ್ ಸ್ಮಿತಾ ಭಾರತ ಭೇಟಿಯ ಗುಟ್ಟೇನು?

  ವಿಲ್ ಸ್ಮಿತಾ ಭಾರತ ಭೇಟಿಯ ಗುಟ್ಟೇನು?

  ವಿಲ್ ಸ್ಮಿತ್ ಈ ಬಾರಿ ಭಾರತಕ್ಕೆ ಭೇಟಿ ನೀಡಿದ ವೇಳೆ ಆಧ್ಯಾತ್ಮಕ ಚಿಂತನೆಯ ಹಿನ್ನೆಲೆಯಲ್ಲಿಯೇ ಬಂದಿದ್ದಾರೆಂದು ಊಹಿಸಲಾಗಿದೆ. ಆದರೆ, ಮತ್ತೊಂದು ಮೂಲದ ಪ್ರಕಾರ, ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಲು ವಿಲ್ ಸ್ಮಿತ್ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವಿಲ್ ಸ್ಮಿತ್ ಯಾಕೆ ಭಾರತಕ್ಕೆ ಬಂದಿದ್ದಾರೆ ಎಂಬುವ ಬಗ್ಗೆ ನಿಖರವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಆದರೆ, ವಿಲ್ ಸ್ಮಿತ್ ಭಾರತದ ಆಧ್ಯಾತ್ಮ ಗುರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಸದ್ಗುರು ಅವರನ್ನು ಭೇಟಿ ಮಾಡಲು ಬಂದಿದ್ದಾರೆ ಎನ್ನಲಾಗುತ್ತಿದೆ.

  ವಿವಾದದ ಬಳಿಕ ಸ್ಮಿತ್‌ಗೆ ಹಿನ್ನೆಡೆ

  ವಿವಾದದ ಬಳಿಕ ಸ್ಮಿತ್‌ಗೆ ಹಿನ್ನೆಡೆ

  ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ವಿಲ್ ಸ್ಮಿತ್ ಕಾಮಿಡಿಯನ್ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ್ದರು. ಪತ್ನಿ ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ಕ್ರಿಸ್ ರಾಕ್ ಕಾಮಿಡಿ ಮಾಡಿದ್ದರು. ಈ ಕಾರಣಕ್ಕೆ ಸಿಟ್ಟಿ ಗೆದ್ದ ವಿಲ್ ಸ್ಮಿತ್ ವೇದಿಕೆ ಮೇಲೆ ಕೆನ್ನೆಗೆ ಬಾರಿಸಿದ್ದರು. ಹೀಗಾಗಿ ವಿಲ್ ಸ್ಮಿತ್ ವೃತ್ತಿ ಬದುಕಿಗೆ ಹಿನ್ನೆಡೆಯಾಗಿದೆ. ಮೂಲಗಳ ಪ್ರಕಾರ, ನೆಟ್‌ಫ್ಲಿಕ್ಸ್ 2017ರಲ್ಲಿ ತೆರೆಕಂಡಿದ್ದ ಬ್ರೈಟ್ ಸಿನಿಮಾದ ಸೀಕ್ವೆಲ್ ನಿರ್ಮಾಣ ಮಾಡಲು ನಿರ್ಧರಿಸಿತ್ತು. ಆದರೆ ಈಗ ಆ ಪ್ರಾಜೆಕ್ಟ್ ಅನ್ನು ಕೈ ಬಿಟ್ಟಿದೆ ಎನ್ನಲಾಗಿದೆ.

  English summary
  Oscar Winner Will Smith had visited India to discovered a 'new understanding of himself'. Know More,
  Saturday, April 23, 2022, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X