»   » ದಿರಿಸಿನಲ್ಲಿ ಸಂಚಲನವೆಬ್ಬಿಸಿದ ಆಸ್ಕರ್ ಮಿಂಚುಮಣಿಗಳು

ದಿರಿಸಿನಲ್ಲಿ ಸಂಚಲನವೆಬ್ಬಿಸಿದ ಆಸ್ಕರ್ ಮಿಂಚುಮಣಿಗಳು

By Prasad
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಆಸ್ಕರ್ ನಲ್ಲಿ ಮಿಂಚಿದ ತಾರೆಯರು | FIlmibeat Kannada

  ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಧಾನ ಆಕರ್ಷಣೆಯೆಂದರೆ, ಯಾರಿಗೆ ಯಾವ ಪ್ರಶಸ್ತಿ ಬರುತ್ತದೆಂದು ಮಾತ್ರವಲ್ಲ, ಆ ಝಗಮಗಿಸುವ ರಾತ್ರಿ ಯಾರು ಕಣ್ಣು ಕೋರೈಸುವ, ಕ್ಯಾಮೆರಾ ಫ್ಲಾಷ್ ಗಳನ್ನು ಚುಂಬಕದಂತೆ ಸೆಳೆಯುವ ದಿರಿಸಿನಲ್ಲಿ ಬಂದಿರುತ್ತಾರೆ ಎಂಬುದು.

  90ನೇ ಆಸ್ಕರ್ ಪ್ರಸಸ್ತಿ ಸಮಾರಂಭದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವಂತೆ ಉಡುಪುಗಳಲ್ಲಿ ಬಂದು ಮಿಂಚಲು ಒಬ್ಬರಿಗಿಂತ ಮತ್ತೊಬ್ಬರು ಪೈಪೋಟಿ ನಡೆಸಿರುತ್ತಾರೆ. ಇದು ನಟನಾಮಣಿಗಳಿಗೆ ಮಾತ್ರ ಸೀಮಿತ. ಪುರುಷರು ಎಂದಿನಂತೆ ಠಾಕೂಠೀಕಾಗಿ ಸೂಟ್ ಬೂಟಿನಲ್ಲಿ ಬಂದು ತಾರೆಯರೊಡನೆ ನಿಂತು ಪೋಸು ಕೊಡುವುದಷ್ಟೇ ಅವರ ಕೆಲಸ.

  ಗ್ಲಾಮರ್ ಜಗತ್ತಿನ ವರ್ಷದ ಈ ಅತ್ಯಮೋಘ ಸಮಾರಂಭದಲ್ಲಿ, ಡಿಸೈನರ್ ದಿರಿಸುಗಳನ್ನು ಧರಿಸಿ ಮಿಂಚಿದವರಲ್ಲಿ ಈ ಬಾರಿ ಹಲವಾರು ಮಿಂಚುಮಣಿಗಳ ಹೆಸರುಗಳಿವೆ. ಸೂಪರ್ ಡೂಪರ್ ಹಾಟ್ ಡ್ರೆಸ್ಸಿನಲ್ಲಿ ಮಿಂಚಿದವರಲ್ಲಿ ಕೆಲವರು ಜೆನ್ನಿಫರ್ ಲಾರೆನ್ಸ್, ಎಮ್ಮಾ ಸ್ಟೋನ್, ಗಾಲ್ ಗಡೋಟ್ ಎಟ್ಸಿಟ್ರಾ ಎಟ್ಸಿಟ್ರಾ...

  ಜೆನ್ನಿಫರ್ ಲಾರೆನ್ಸ್

  ಪಾಪಾರಾಜ್ಜಿಗಳಾ ಬನ್ನಿ, ಯಾರು ಬೇಕೋ ಅವರು ನನ್ನ ಫೋಟೋ ತಕ್ಕಳ್ಳಿ ಎಂದು ಭರ್ಜರಿ ಪೋಸ್ ನೀಡಿದವರು ಜೆನ್ನಿಫರ್ ಲಾರೆನ್ಸ್. ವೈದ್ಯರು ಹೇಳಿದ್ದು ಹಾಲು ಅನ್ನ, ರೋಗಿಯವ ಬಯಸಿದ್ದು ಹಾಲು ಅನ್ನ ಎಂಬಂತೆ ಕ್ಯಾಮೆರಾಗಳು ಬಳುಕುವ ಬಳ್ಳಿ ಜೆನ್ನಿಫರ್ ಅವರ ಚಿತ್ರಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.

  ಎಮ್ಮಾ ಸ್ಟೋನ್

  ಕೆಲವರು ತಮ್ಮ ಮೈಮಾಟವನ್ನು ತೋರಲೆಂದೇ ದಿರಿಸು ಧರಿಸಿ ಬಂದಿರುತ್ತಾರೆ. ಅಲ್ಲಲ್ಲಿ ಅವರ ಸೌಂದರ್ಯ ತುಳುಕಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಲಾ ಲಾ ಲ್ಯಾಂಡ್ ಚಿತ್ರದ ನಟಿ ಎಮ್ಮಾ ಸ್ಟೋನ್ ಮಾತ್ರ ಬಂದಿದ್ದು ಕ್ಲಾಸಿಕ್ ಡ್ರೆಸ್ ನಲ್ಲಿ. ಲೂಯಿಸ್ ವುಟ್ಟನ್ ಸೂಟ್ ಧರಿಸಿ ನೋಡುಗರ ಕಣ್ಣು ತಮ್ಮ ಮೇಲಿಂದ ಕೀಳದಂತೆ ಮಿಂಚಿದರು.

  ಗಾಲ್ ಗಡೋಟ್

  ಇನ್ನು ಕೆಲವರು ತಮ್ಮ ಮೈಮಾಟದಲ್ಲಿ ಮಿಂಚುತ್ತಿದ್ದರೆ, ಕೆಲವರು ತಮ್ಮ ಕೆಣಕುವ ನೋಟದಿಂದಲೇ ಮನಸೂರೆಗೊಳ್ಳುತ್ತಾರೆ. ಅಂಥವರಲ್ಲಿ ಅಗ್ರಗಣ್ಯರು ದಿ ವಂಡರ್ ವುಮನ್ ಗಾಲ್ ಗಡೋಟ್. ಸ್ಟನ್ನಿಂಗ್ ದಿರಿಸಿನಲ್ಲಿ ಬಂದಿದ್ದ ಅವರು ರೆಡ್ ಕಾರ್ಪೆಟ್ ಮೇಲೆ ತಮ್ಮ ಗಾಂಭೀರ್ಯದಿಂದಲೇ ಮೆಚ್ಚುಗೆಗೆ ಪಾತ್ರವಾದರು.

  ಮೆರಿಲ್ ಸ್ಟ್ರೀಪ್

  ಮೆರಿಲ್ ಸ್ಟ್ರೀಪ್ ಎಂದೇ ಖ್ಯಾತರಾಗಿರುವ ಅಮೆರಿಕದ ನಟಿ ಮೆರಿಲ್ ಲೂಯಿ ಸ್ಟ್ರೀಪ್ ಅವರು ಫ್ಯಾಷನ್ ಲೋಕವನ್ನೇ ಮೈವೆತ್ತಂತೆ ಆಕರ್ಷಕ ದಿರಿಸಿನಲ್ಲಿ ಬಂದಿದ್ದರು. ತಮ್ಮ 68ನೇ ವಯಸ್ಸಿನಲ್ಲಿ ಕೂಡ 28ರ ತರುಣಿಯರು ನಾಚುವಂತೆ ರೆಡ್ ಗೌನ್ ಧರಿಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

  ಜೆನ್ನಿ ತೂರಿದ ಮುತ್ತು

  ಜೆನ್ನಿಫರ್ ಲಾರೆನ್ಸ್ ಅವರ ಈ ಚಿತ್ರಕ್ಕೆ ಪಡ್ಡೆಗಳು ಖಂಡಿತ ಬೇಸ್ತು ಬೀಳುತ್ತಾರೆ. ಎದೆಯ ಉಬ್ಬುತಗ್ಗುಗಳ ನಿಚ್ಚಳವಾಗಿ ಕಾಣುವಂತೆ ಕಪ್ಪನೆಯ ಮಿಂಚುವ ಉಡುಪಿನಲ್ಲಿ ಬಂದಿದ್ದ ಜೆನ್ನಿಫರ್ ಲಾರೆನ್ಸ್ ಥೇಟ್ ಪ್ರಿಯಾ ಪ್ರಕಾಶ್ ರಂತೆ ಒಂದು ಮುತ್ತನ್ನು ತೂರಿದ್ದರು. ಎಷ್ಟು ಜನ ಮರುಳಾದರೋ?

  ಅಲಿಸನ್ ಜೆನ್ನಿಗೆ ಎಮ್ಮಾ ಅಭಿನಂದನೆ

  ಈ ಬಾರಿ 'ಐ, ತೋನ್ಯಾ' ಚಿತ್ರದಲ್ಲಿ ಮಹತ್ವಾಕಾಂಕ್ಷಿ ತಾಯಿಯ ಪಾತ್ರದಲ್ಲಿ ಅಭಿನಯ ನೀಡಿದ್ದಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾದ ಅಲಿಸನ್ ಜೆನ್ನಿ ಅವರನ್ನು ಎಮ್ಮಾ ಸ್ಟೋನ್ ಅವರು ಆತ್ಮೀಯವಾಗಿ ಅಭಿನಂದಿಸಿದರು. ಅವರು ಮೊದಲ ಬಾರಿಗೆ ನಾಮಿನೇಟ್ ಆಗಿರುವುದು.

  English summary
  It's that time of the year, where all the movie-goers keep a tab on all the live updates of Academy Awards and we're here with the super-glamorous pictures of the celebrities in their designer duds on this year's Oscars red carpet.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more