twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್: ಭರವಸೆ ಮೂಡಿಸಿದ 'ಜೈ ಭೀಮ್', 'ಮರಕ್ಕರ್' ಮುಂದಿನ ಹಂತಕ್ಕೆ ಆಯ್ಕೆ

    |

    ಆಸ್ಕರ್ 2022 ಗೆ ಭಾರತದಿಂದ ಅಧಿಕೃತವಾಗಿ ಕಳುಹಿಸಲ್ಪಟ್ಟಿದ್ದ 'ಕೂಳಂಗಳ್' ಸಿನಿಮಾ ಮೊದಲ ಹಂತದಲ್ಲಿಯೇ ಸ್ಪರ್ಧೆಯಿಂದ ಹೊರಬಿದ್ದು ನಿರಾಸೆ ಮೂಡಿಸಿತ್ತು. ಆದರೆ ಇದೀಗ ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಎರಡು ಸಿನಿಮಾಗಳು ಆಸ್ಕರ್‌ನ ನಾಮಿನೇಷನ್ ಹಂತಕ್ಕೆ ಆಯ್ಕೆ ಆಗುವ ಹಂತ ತಲುಪಿ ಭರವಸೆ ಮೂಡಿಸಿವೆ.

    ತಮಿಳು ನಟ ಸೂರ್ಯ ನಟಿಸಿ ನಿರ್ಮಾಣ ಮಾಡಿರುವ 'ಜೈ ಭೀಮ್' ಹಾಗೂ ಮೋಹನ್‌ಲಾಲ್ ನಟಿಸಿ ಪ್ರಿಯದರ್ಶನ್ ನಿರ್ದೇಶನ ಮಾಡಿರುವ 'ಮರಕ್ಕರ್; ಅರಬ್ಬಿಕಡಲಿಂಟೇ ಸಿಂಹಂ' ಸಿನಿಮಾ ನಾಮಿನೇಶನ್ ಆಗುವ ಹಂತಕ್ಕೆ ಆಯ್ಕೆಯಾಗಿದೆ. ಹೀಗೆಂದು ಆಸ್ಕರ್ಸ್ ಅಧಿಕೃತವಾಗಿ ಪ್ರಕಟಿಸಿದೆ.

    ಜನವರಿ 20 ರಂದು ಆಸ್ಕರ್ ಆಯೋಜಕರು ಆಸ್ಕರ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿರುವ 274 ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ 'ಜೈ ಭೀಮ್' ಹಾಗೂ 'ಮರಕ್ಕರ್; ಅರಬ್ಬಿಕಡಲಿಂಟೆ ಸಿಹಂ' ಸಿನಿಮಾ ಸ್ಥಾನ ಪಡೆದಿದೆ. ಈ ಎರಡೂ ಸಿನಿಮಾಗಳು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಅಂತಿಮ ಹಂತಕ್ಕೆ ತಲುಪಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

    Oscars 2022: Jai Bhim And Marakkar Movie Earn Eligibility
    ಈಗ ಅರ್ಹತೆ ಗಳಿಸಿಕೊಂಡಿರುವ ಸಿನಿಮಾಗಳಿಗೆ ಜನವರಿ 27 ರಿಂದ ಮತದಾನ ಆರಂಭವಾಗಲಿದೆ. ವಿಶೇಷ ಜ್ಯೂರಿಗಳಷ್ಟೆ ಸಿನಿಮಾಗಳಿಗೆ ಮತದಾನ ಮಾಡಬಹುದಾಗಿದೆ. ಈ ಮತದಾನದಲ್ಲಿ ಹೆಚ್ಚು ಮತಗಳಿಸಿದರೆ 'ಜೈ ಭೀಮ್' ಹಾಗೂ 'ಮರಕ್ಕರ್' ಸಿನಿಮಾಗಳು ಆಸ್ಕರ್ ನಾಮಿನೇಷನ್‌ಗಳಲ್ಲಿವೆ. ಆ ನಂತರ ಆಸ್ಕರ್ ಪ್ರಶಸ್ತಿ ಪ್ರಧಾನ ಮಾಡುವ ಕೊನೆಯ ದಿನ ಇತರ ನಾಲ್ಕು ಸಿನಿಮಾಗಳೊಟ್ಟಿಗೆ ಸೆಣಸಿ ಆಸ್ಕರ್ ಗೆಲ್ಲುವ ಸಾಧ್ಯತೆ ಇರುತ್ತದೆ.

    ಅಂದರೆ 'ಜೈ ಭೀಮ್' ಹಾಗೂ 'ಮರಕ್ಕರ್' ಎರಡೂ ಸಿನಿಮಾಗಳು ನಾಮಿನೇಶನ್‌ನ ಹಿಂದಿನ ಹಂತದಲ್ಲಿವೆ. ಈವರೆಗೆ ಭಾರತದ 'ಮದರ್ ಇಂಡಿಯಾ' ಹಾಗೂ 'ಲಗಾನ್' ಸಿನಿಮಾಗಳು ಮಾತ್ರವೇ ಆಸ್ಕರ್‌ಗೆ ನಾಮಿನೇಶನ್ ಗಳಿಸಿವೆ. 'ಸ್ಲಮ್ ಡಾಗ್ ಮಿಲೇನಿಯರ್' ಆಸ್ಕರ್ ಜಯಿಸಿತಾದರೂ ಅದು ಭಾರತದ ಸಿನಿಮಾ ಅಲ್ಲ, ಭಾರತೀಯರ ಬಗ್ಗೆ ನಿರ್ಮಿಸಲಾಗಿದ್ದ ಸಿನಿಮಾ.

    ಮಲಯಾಳಂನ 'ಮರಕ್ಕರ್: ಅರಬ್ಬಿಕಡಲಿಂಟೆ ಸಿಂಹಂ' ಸಿನಿಮಾ ಈಗಾಗಲೇ ರಾಷ್ಟ್ರಪ್ರಶಸ್ತಿ ಗಳಿಸಿದೆ. ಈ ಸಿನಿಮಾ ನಾಮಿನೇಶನ್‌ಗಳಿಸುವ ಸಾಧ್ಯತೆ ಇದೆ. ಇನ್ನು ತಮಿಳಿನ 'ಜೈ ಭೀಮ್' ಸಿನಿಮಾ ನೈಜ ಘಟನೆಯ ಮೇಲೆ ಆಧರಿತವಾಗಿದ್ದು ಒಂದು ಸಮುದಾಯದ ಮೇಲಿನ ದೌರ್ಜನ್ಯಕ್ಕೆ ಕನ್ನಡಿ ಹಿಡಿಯುವ ಕತೆಯನ್ನು ಒಳಗೊಂಡಿದ್ದು ಮಾನವೀಯ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಈ ಸಿನಿಮಾಕ್ಕೂ ಸಾಕಷ್ಟು ಅವಕಾಶಗಳು ಇವೆ ಎನ್ನಲಾಗುತ್ತಿದೆ. ಈಗಾಗಲೇ ಆಸ್ಕರ್ಸ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ 'ಜೈ ಭೀಮ್' ಸಿನಿಮಾದ 12 ನಿಮಿಷದ ದೃಶ್ಯವನ್ನು ಪ್ರದರ್ಶಿಸಿದೆ. ಇದು ಇನ್ನಷ್ಟು ನಿರೀಕ್ಷೆಯನ್ನು ಮೂಡಿಸಿದೆ.

    ಜನವರಿ 27ಕ್ಕೆ ನಾಮಿನೇಷನ್ ವೋಟಿಂಗ್ ನಡೆಯಲಿದೆ. ಆಸ್ಕರ್‌ನ ವಿಶೇಷ ಜ್ಯೂರಿಗಳಾದ 7000 ಮಂದಿ ಸಿನಿಮಾಗಳಿಗೆ ಮತದಾನ ಮಾಡಲಿದ್ದಾರೆ. ಫೆಬ್ರವರಿ 1 ಕ್ಕೆ ನಾಮಿನೇಷನ್ ಮತದಾನ ಅಂತ್ಯವಾಗಲಿದೆ. ಫೆಬ್ರವರಿ 8 ಕ್ಕೆ ನಾಮಿನೇಷನ್ ಘೋಷಣೆ ಆಗಲಿದೆ. ಮಾರ್ಚ್ 07ಕ್ಕೆ ನಾಮಿನೇಷನ್ ಆದ ಸಿನಿಮಾಗಳ ನಟರು, ತಂತ್ರಜ್ಞರಿಗೆ ಭೋಜನ ಕೂಟ, ಮಾರ್ಚ್ 17ಕ್ಕೆ ನಾಮಿನೇಷನ್ ಆಗಿರುವ ಸಿನಿಮಾಗಳಿಗೆ ಮತದಾನ ಆರಂಭವಾಗಲಿದೆ. ಮಾರ್ಚ್ 22 ಕ್ಕೆ ಮತದಾನ ಅಂತ್ಯವಾಗಲಿದೆ. ಮಾರ್ಚ್ 27ಕ್ಕೆ ಆಸ್ಕರ್ ಪ್ರಶಸ್ತಿ ಘೋಷಣೆ ಆಗಲಿದೆ.

    English summary
    Tamil Movie Jai Bhim and Malayalam Marakkar movie earn eligibility in Oscar 2022. Both movies may get nominations if they get enough votes.
    Friday, January 21, 2022, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X