Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದ ಎರಡು ಸಿನಿಮಾ, ಎರಡು ಡಾಕ್ಯುಮೆಂಟರಿ ಆಸ್ಕರ್‌ಗೆ ಶಾರ್ಟ್ ಲಿಸ್ಟ್! ಶೀಘ್ರವೇ ಸಿಹಿ ಸುದ್ದಿ
ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗಕ್ಕೆ 2022 ಸುವರ್ಣವರ್ಷ. ಹಲವು ಎತ್ತರಗಳನ್ನು ಈ ವರ್ಷದಲ್ಲಿ ದಕ್ಷಿಣ ಭಾರತ ಚಿತ್ರರಂಗ ಏರಿದೆ.
ಸಿನಿಮಾ ಗುಣಮಟ್ಟ, ಕತೆ ಹೇಳುವ ರೀತಿ, ಸಿನಿಮಾವನ್ನು ಜನರಿಗೆ ತಲುಪಿಸುವ ರೀತಿ, ಪ್ರಚಾರ, ರೀಚ್, ಬಾಕ್ಸ್ ಆಫೀಸ್ ಕಲೆಕ್ಷನ್, ಅಸಂಖ್ಯ ಹೊಸ ಪ್ರೇಕ್ಷಕರ ಗಳಿಕೆ, ವಿದೇಶಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವಿಕೆ ಇನ್ನೂ ಹಲವು ಸಾಧನೆಗಳನ್ನು ದಕ್ಷಿಣ ಭಾರತದ ಚಿತ್ರರಂಗ ಈ ವರ್ಷ ಮಾಡಿದ್ದು, ಇದೀಗ ಮತ್ತೊಂದು ಮಹತ್ ಸಾಧನೆಯ ಹೊಸ್ತಿಲಲ್ಲಿದೆ. ಅದುವೇ ಆಸ್ಕರ್.
2023 ರ ಆಸ್ಕರ್ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದ್ದು ಭಾರತದ ಎರಡು ಸಿನಿಮಾಗಳು ಹಾಗೂ ಎರಡು ಡಾಕ್ಯುಮೆಂಟರಿಗಳು ಆಸ್ಕರ್‌ಗೆ ಈಗಾಗಲೇ ಶಾರ್ಟ್ ಲಿಸ್ಟ್ ಆಗಿವೆ ಅಥವಾ ಆಸ್ಕರ್ ರೇಸ್‌ನಲ್ಲಿ ಒಂದು ಹಂತ ಮೇಲೇರಿವೆ ಎನ್ನಬಹುದು.
ಭಾರತದಿಂದ ಈ ಬಾರಿ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆ ಆಗಿರುವ 'ಚೆಲ್ಲೊ ಶೋ' ಹಾಗೂ ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ RRR ಆಸ್ಕರ್‌ಗೆ ಶಾರ್ಟ್ ಲಿಸ್ಟ್ ಆಗಿದೆ. RRR ನ 'ನಾಟು ನಾಟು' ಹಾಡು ಮಾತ್ರವೇ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿದ್ದು, RRR ಸಿನಿಮಾವು ಇನ್ನೂ ಕೆಲವು ವಿಭಾಗಗಳಲ್ಲಿ ಆಸ್ಕರ್ ನಲ್ಲಿ ಸ್ಪರ್ಧೆ ಬಯಸಿದೆ. 'ಚೆಲ್ಲೊ ಶೋ' ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಆಗಿದೆ.
ಸಿನಿಮಾ ಹೊರತುಪಡಿಸಿ ಭಾರತದ ಎರಡು ಡಾಕ್ಯುಮೆಂಟರಿಗಳು ಸಹ ಶಾರ್ಟ್ ಲಿಸ್ಟ್ ಆಗಿವೆ. ಹದ್ದುಗಳು, ಗೂಬೆಗಳನ್ನು ಸಂರಕ್ಷಿಸುತ್ತಿರುವ ದೆಹಲಿಯ ಸಹೋದರರ ಕುರಿತಾದ 'ಆಲ್ ದಟ್ ಬ್ರೀತ್ಸ್' ಹಾಗೂ ಆನೆ ಕುರಿತಾದ ಭಾವುಕ ನಿಜ ಕಥನ 'ದಿ ಎಲಿಫೆಂಟ್ ವಿಸ್ಪರ್ಸ್' ಸಹ ಡಾಕ್ಯುಮೆಂಟರಿ ಹಾಗೂ ಡಾಕ್ಯುಮೆಂಟರಿ ಶಾರ್ಟ್ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿವೆ.
ಈಗ ಶಾರ್ಟ್ ಲಿಸ್ಟ್ ಆಗಿರುವ ಸಿನಿಮಾ ಹಾಗೂ ಡಾಕ್ಯುಮೆಂಟರಿಗಳು 14 ಬೇರೆ ಬೇರೆ ಸಿನಿಮಾ ಹಾಗೂ ಡಾಕ್ಯುಮೆಂಟರಿಗಳ ಜೊತೆ ಸ್ಪರ್ಧೆ ಮಾಡಲಿದ್ದು ಬಳಿಕ ನಾಮಿನೇಶನ್ ಹಂತಕ್ಕೆ ಬರಲಿವೆ. ನಾಮಿನೇಶನ್ ಓಟಿಂಗ್ ಜನವರಿ 12 ರಿಂದ 17 ರ ವರೆಗೆ ನಡೆಯಲಿದೆ. ನಾಮಿನೇಶನ್ ಪಟ್ಟಿಯನ್ನು ಜನವರಿ 24 ರಂದು ಘೋಷಿಸಲಾಗುತ್ತದೆ.