Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೆಳೆಯನ ಜತೆ ಸರಸ ನಿಜ, ಆದರೆ ಗರ್ಭಿಣಿಯಾಗಿಲ್ಲ
ತನ್ನ ಬಾಯ್ ಫ್ರೆಂಡ್ ಜೊತೆ ಸರಸವಾಡಿದ್ದು ನಿಜ, ಆದರೆ ತಾನೀಗ ಗರ್ಭಿಣಿಯಲ್ಲ ಎಂದು ಪ್ರಕಟಿಸಿದ್ದಾರೆ ಹಾಟ್ ತಾರೆ. ಈ ಹಾಟ್ ತಾರೆ ಬೇರಾರು ಅಲ್ಲ ಅಮೆರಿಕಾದ ಪಾಪ್ ಸ್ಟಾರ್ ಮಿಲಿ ಸೈರಸ್. ಈಕೆ ಗರ್ಭಿಣಿ ಎಂಬ ಸುದ್ದಿ ಇತ್ತೀಚೆಗೆ ಹಾಲಿವುಡ್ ನಲ್ಲಿ ಹಾಲಾಹಲ ಎಬ್ಬಿಸಿತ್ತು.
ತನ್ನ ಬಾಯ್ ಫ್ರೆಂಡ್ ಪಾಟ್ರಿಕ್ ಷ್ವಾರ್ಜ್ ನೆಗ್ಗರ್ ಜೊತೆಗಿನ ರಾಸಲೀಲೆಗಳು ಪಾಪ್ ಅಭಿಮಾನಿಗಳಿಗೆ ಹೊಸದಲ್ಲ. ದಿನಕ್ಕೊಂದು ಸುದ್ದಿ ಮಿಲಿ ಮೇಲೆ ಇಲಿಯಂತೆ ಹರಿದಾಡುತ್ತಿದ್ದವು. ಆದರೆ ಇವರಿಬ್ಬರೂ ಕದ್ದುಮುಚ್ಚಿಯೇನೂ ಲವ್ ಮಾಡುತ್ತಿರಲಿಲ್ಲ. ಎಲ್ಲೆಂದರಲ್ಲಿ ಚುಂಬನ, ಆಲಿಂಗನ, ಬಾಹುಬಂಧನ ಇದ್ದೇ ಇತ್ತು.
ಇದೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪತ್ರಿಕೆಗಳು ಮಿಲಿ ಸೈರಸ್ ಗರ್ಭಿಣಿ ಎಂದು ಪ್ರಕಟಿಸಿದವು. ಶೀಘ್ರದಲ್ಲೇ ತನ್ನ ಬಾಯ್ ಫ್ರೆಂಡ್ ಮೂಲಕ ಚೊಚ್ಚಲ ಮಗುವಿನ ತಾಯಿಯಾಗುತ್ತಿದ್ದಾರೆ ಮಿಲಿ ಎಂದು ಬರೆದವು. ಈ ಸುದ್ದಿ ಮಿಲಿ ಅಭಿಮಾನಿಗಳಲ್ಲಿ ಗಲಿಬಿಲಿ ಮೂಡಿಸಿತ್ತು.
ಕೂಡಲೆ ಎಚ್ಚೆತ್ತುಕೊಂಡ ಮಿಲಿ ತನ್ನ ಪ್ರತಿನಿಧಿ ಮೂಲಕ ಮಾಧ್ಯಮಗಳಿಗೆ ಅಸಲಿ ವಿಷಯ ತಿಳಿಸಿದರು. ಇಬ್ಬರೂ ಸುತ್ತಾಡಿದ್ದು, ಸರಸವಾಡಿದ್ದು ನಿಜ. ಆದರೆ ತಾನು ಗರ್ಭಿಣಿಯಾಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಮಿಲಿ ಗರ್ಭಿಣಿ ಎಂಬ ಸುದ್ದಿ ತಣ್ಣಗೆ ಮಲಗಿತು.
ಇತ್ತೀಚೆಗೆ ಮಿಲಿ ತನ್ನ 22ನೇ ಹುಟ್ಟುಹಬ್ಬವನ್ನು ದಾಂ ಧೂಮ್ ಆಗಿ ಆಚರಿಸಿಕೊಂಡರು. ತನ್ನ ಬರ್ತ್ ಡೇ ಪಾರ್ಟಿಯಲ್ಲಿ ವೈಲ್ಡ್ ಆಗಿ ಕುಣಿದು ಕುಪ್ಪಳಿಸಿದ್ದರು. ತನ್ನ ಬಾಯ್ ಫ್ರೆಂಡ್ ಪಾಟ್ರಿಕ್ ಷ್ವಾರ್ಜ್ ನೆಗ್ಗರ್ ಜೊತೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ತೇಲಾಡಿದ್ದರು.
ಜನುಮ ದಿನ ಫುಲ್ ಟೈಟ್ ಆಗಿ ಟಾಪ್ ಲೆಸ್ ಡಾನ್ಸ್ ಮಾಡಿದರು. ಇದಿಷ್ಟೇ ಅಲ್ಲದೆ ಆ ವಿಡಿಯೋಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಹಾಲಿವುಡ್ ನ ಫ್ಯಾಕ್ಟರಿ ನೈಟ್ ಕ್ಲಬ್ ನಲ್ಲಿ ನಡೆದ ಮಿಲಿ ಸೈರಸ್ ಹುಟ್ಟುಹಬ್ಬ ಸಂಭ್ರಮಕ್ಕೆ ಹಲವು ಸೆಲೆಬ್ರಿಟಿಗಳು, ಗೆಳೆಯರು ಹಾಜರಾಗಿದ್ದರು.