For Quick Alerts
  ALLOW NOTIFICATIONS  
  For Daily Alerts

  'ಪೋರ್ನ್' ವಿಡಿಯೋ ಬ್ಯಾನ್ ಮಾಡ್ಬೇಕ್: ಪಮೇಲಾ

  By ಸೋನು ಗೌಡ
  |

  ಸಾಮಾನ್ಯವಾಗಿ ಹಾಲಿವುಡ್ ಮಾಡೆಲ್ ಕಮ್ ನಟಿಮಣಿಯರು ಅರೆ ಬೆತ್ತಲೆ ಫೋಟೋ ಶೂಟ್, ನಗ್ನ ಸೆಲ್ಫಿ ಇತ್ಯಾದಿ ಕಾರಣಗಳಿಗೆ ಸುದ್ದಿಯಾದ್ರೆ, ಇಲ್ಲೊಬ್ಬ ಅಪರೂಪದ ನಟಿ ಬೇರೆ ರೀತಿಯಲ್ಲಿ ಸುದ್ದಿಯಾಗಿದ್ದಾರೆ.

  ಅಶ್ಲೀಲ ವಿಡಿಯೋಗಳನ್ನು ಬ್ಯಾನ್ ಮಾಡ್ಬೇಕ್ ಅಂತ ಹೇಳಿ ವಿಭಿನ್ನ ಮಾದರಿಯಲ್ಲಿ ಸುದ್ದಿ ಮಾಡಿದವರು ಬೇರ್ಯಾರು ಅಲ್ಲ, ಖ್ಯಾತ ಮಾಡೆಲ್ ಕಮ್ ನಟಿ ಪಮೇಲಾ ಅಂಡೆರ್ಸನ್ ಅವರು.['ಬೇವಾಚ್' ನಲ್ಲಿ ಪಿಗ್ಗಿ ಜೊತೆ ಪಮೇಲಾ ಕಮಾಲ್]

  ಹಾಲಿವುಡ್ ನಲ್ಲಿ 'ಸೆಕ್ಸ್ ಸಿಂಬಲ್' ಅಂತಾನೇ ಕರೆಯಿಸಿಕೊಳ್ಳುವ ಪಮೇಲಾ ಅವರು, ಪೋರ್ನ್ ವಿಡಿಯೋಗಳನ್ನು ಬ್ಯಾನ್ ಮಾಡಬೇಕು ಅಂತ ಅಶ್ಲೀಲತೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

  ಇತ್ತೀಚೆಗೆ "THE WALL STREET JOURNAL" ನಲ್ಲಿ ಪಮೇಲಾ ಅವರ ಲೇಖನವೊಂದು ಪ್ರಕಟಗೊಂಡಿದ್ದು, ಈ ಲೇಖನದಲ್ಲಿ ಪಮೇಲಾ ಅವರು ಪೋರ್ನ್ ವಿಡಿಯೋಗಳ ವಿರುದ್ಧ ಗುಡುಗಿದ್ದಾರೆ.

  "ಪೋರ್ನ್ ವಿಡಿಯೋ ನೋಡೋದು ಒಳ್ಳೆಯದಲ್ಲ, ಅದನ್ನು ವೀಕ್ಷಣೆ ಮಾಡುವುದರಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತವೆ. ಈ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸುಲಭವಾಗಿ ದೊರೆಯುವುದರಿಂದ ನಮ್ಮ ಮಕ್ಕಳಿಗೆ ಪೋರ್ನ್, ಒಂದು ನಿರುಪಯೋಗ ವಸ್ತು ಅಂತ ಮನವರಿಕೆ ಮಾಡಿಕೊಡಬೇಕು" ಎಂದಿದ್ದಾರೆ.

  'Porn is public Hazard' says Hollywood Actress Pamela Anderson

  ಮಾತ್ರವಲ್ಲದೇ, ಪೋರ್ನ್ ವಿಡಿಯೋಗಳನ್ನು ಒಂದು ಜೀವವಿಲ್ಲದ ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಜೊತೆಗೆ ಪ್ರತಿ ದಿನ ಪೋರ್ನ್ ವಿಡಿಯೋ ವೀಕ್ಷಿಸುವ ವ್ಯಕ್ತಿ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲಾರ, ಎಂದು ಮಾಡೆಲ್ ಕಮ್ ನಟಿ ಪಮೇಲಾ ತಿಳಿಸಿದ್ದಾರೆ.

  ನಟಿ ಪಮೇಲಾ ಅವರು ಪ್ರಿಯಾಂಕ ಚೋಪ್ರಾ ಮತ್ತು ಡ್ವೆನ್ ಜಾನ್ಸನ್ ಅವರ 'ಬೇವಾಚ್' ಚಿತ್ರದಲ್ಲಿ ಮಿಂಚಿದ್ದು, ಸದ್ಯಕ್ಕೆ ಚಿತ್ರದ ಬಿಡುಗಡೆಗೆ ಕಾದಿದ್ದಾರೆ.

  English summary
  'Porn is public Hazard' says Hollywood Actress-Model Pamela Anderson.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X