For Quick Alerts
  ALLOW NOTIFICATIONS  
  For Daily Alerts

  ಸ್ಪೇನ್‌ನ ಸುಂದರ ಕ್ಷಣಗಳನ್ನು ಹಂಚಿಕೊಂಡ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಛೋಪ್ರಾ

  |

  ಗ್ಲೋಬಲ್​ ಸ್ಟಾರ್​ ಪ್ರಿಯಾಂಕಾ ಛೋಪ್ರಾ ಸದ್ಯ ಸ್ಪೇನ್‌ಗೆ ಶೂಟಿಂಗ್ ನಿಮಿತ್ತ ತೆರಳಿದ್ದಾರೆ. ಶೂಟಿಂಗ್ ಬ್ರೇಕ್‌ನಲ್ಲಿ ಕಡಲ ಕಿನಾರೆಯಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಸ್ಪೇನ್‌ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಪಿಗ್ಗಿಯ ಈ ಹಾಟ್ ಫೋಟೊಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

  ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಛೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಅಲ್ಲಿ ಯಶಸ್ವಿಯಾಗಿ ಜರ್ನಿ ಆರಂಭಿಸಿದ್ದಾರೆ. ಹೀಗಾಗಿ ಗ್ಲೋಬಲ್ ಐಕಾನ್ ಎಂದೇ ಖ್ಯಾತರಾಗಿರುವ ಪಿಗ್ಗಿಗೆ ಕಡಲ ಕಿನಾರೆಯಲ್ಲಿ ಸಮಯ ಕಳೆಯೋದು ಅಂದ್ರೆ ಮೊದಲಿನಿಂದಲೂ ಅಚ್ಚುಮೆಚ್ಚು. ಸದ್ಯ ಪಿಗ್ಗಿ ನಟನೆಯ ಅಮೆರಿಕನ್ ಸೀರಿಸ್ ಸಿಟಾಡೆಲ್ ಚಿತ್ರೀಕರಣ ಕೂಡ ಸ್ಪೇನ್‌ನಲ್ಲಿ ನಡೆಯುತ್ತಿದ್ದು, ತಾಯಿ ಮಧು ಛೋಪ್ರಾ ಕೂಡ ಪಿಗ್ಗಿ ಜೊತೆ ತೆರಳಿದ್ದಾರೆ. ಜೊತೆಗೆ ಪಿಗ್ಗಿಯ ಪ್ರೀತಿಯ ಶ್ವಾನ ಡೈನಾ ಕೂಡ ಅಲ್ಲಿ ಸಮಯ ಕಳೆಯುತ್ತಿದೆ.

  ಇನ್ನು ಬಿಕಿನಿ ಬಟ್ಟೆ ತೊಟ್ಟು ಫೋಟೋಗೆ ಪೋಸ್ ನೀಡಿರೋ ಪಿಗ್ಗಿ ಸಖತ್ ಹಾಟ್ ಆಗಿ ತಮ್ಮ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ "ನೀವು ಮುಂದಕ್ಕೆ ಹೋಗಲಿಲ್ಲ ಎಂದರೆ, ಹಿಂದೆಯೇ ಉಳಿದು ಬಿಡುತ್ತೀರಾ" ಎಂದು ಬರೆದುಕೊಂಡಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಹೀಗೆ ಸ್ಪೇನ್‌ನ ಕಡಲಲ್ಲಿ ಎಂಜಾಯ್ ಮಾಡುತ್ತಿರೋ ಪಿಗ್ಗಿ , ಸ್ಪೇನ್‌ನ ಸಿಟಿಗೂ ತೆರಳಿ ಅಲ್ಲಿನ ಪುರಾತನ ಕಾಲದ ಐತಿಹಾಸಿಕ ಕಟ್ಟಡದ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ಶೇರ್ ಮಾಡಿರೋ ಪಿಗ್ಗಿ ಸುಂದರ ತಾಣ ಎಂದು ಬರೆದುಕೊಂಡಿದ್ದಾರೆ.

  ಇನ್ನು ಪಿಗ್ಗಿಯ ಈ ಹಾಟ್ ಹಾಟ್ ಫೋಟೊಗಳಿಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ರೀ ಪೋಸ್ಟ್ ಕೂಡ ಮಾಡಿ ಸಂತಸಪಡುತ್ತಿದ್ದಾರೆ. ಕೆಲವರು ನಿಮ್ಮಂತೆ ನಾವು ಆಗಬೇಕು ಅದಕ್ಕೆ ಟಿಪ್ಸ್ ಕೊಡಿ ಅಂತ ಕೇಳಿದ್ರೆ , ಇನ್ನು ಕೆಲವರು ನಿಮ್ಮ ಬ್ಯೂಟಿ ಸೀಕ್ರೆಟ್ ಬಗ್ಗೆ ನಮಗು ತಿಳಿಸಿಕೊಡಿ ಎಂದು ಕೇಳಿದ್ದಾರೆ. ವಿಶೇಷ ಅಂದ್ರೆ ಪಿಗ್ಗಿ ಪೋಸ್ಟ್‌ಗೆ ಮತ್ತೊಬ್ಬ ವಿಶೇಷ ವ್ಯಕ್ತಿಯೂ ಕಮೆಂಟ್ ಮಾಡಿದ್ದಾರೆ.

  ಪಿಗ್ಗಿಯ ಪತಿ ಪಾಪ್ ಗಾಯಕ ನಿಕ್ ಜೋನಸ್ ಪಿಗ್ಗಿ ಪೋಸ್ಟ್ ನೋಡಿ ಬ್ಯೂಟಿಫುಲ್ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪಿಗ್ಗಿ ನಗುಬೀರಿ ಸುಮ್ಮನಾಗಿದ್ದಾರೆ. ಇನ್ನು ಪಿಗ್ಗಿಯ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹೇಳೊದಾದ್ರೆ ಟೆಕ್ಟ್ಸ್ ಫಾರ್ ಯೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಜರ್ಮನ್ ಸಿನಿಮಾ ಎಸ್‌ಎಂಎಸ್ ರಿಮೇಕ್ ಆಗಿದ್ದು, ಜೇಮ್ಸ್ ಸಿ ಸ್ಟ್ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಮ್ಯಾಟ್ರಿಕ್ಸ್ 4ನಲ್ಲೂ ಪಿಗ್ಗಿ ಅಭಿನಯಿಸುತ್ತಿದ್ದು, ಅದರ ಚಿತ್ರೀಕರಣ ಕೂಡ ನಡೆಯುತ್ತಿದೆ.

  English summary
  Actress Priyanka Chopra in currently in shooting in Spain. She shared beautiful moments on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X