For Quick Alerts
  ALLOW NOTIFICATIONS  
  For Daily Alerts

  ಅಮೆರಿಕ ಚುನಾವಣೆ: ಪ್ರಿಯಾಂಕಾ ಚೋಪ್ರಾ ಕುತೂಹಲ, ರಾಮ್ ಗೋಪಾಲ್ ವರ್ಮಾ ವ್ಯಂಗ್ಯ

  |

  ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿಶ್ವದ ಗಮನ ಸೆಳೆದಿದೆ. ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

  ಸಿನಿಮಾ ನಟ-ನಟಿಯರೂ ಸಹ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಡೆ ಕಣ್ಣು ನೆಟ್ಟಿದ್ದಾರೆ. ಹಲವು ಹಾಲಿವುಡ್ ನಟ-ನಟಿಯರು ಬಹಿರಂಗವಾಗಿ ಟ್ರಂಪ್ ಹಾಗೂ ಬೈಡನ್ ಪರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದೂ ಸಹ ಇದೆ.

  ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇತ್ತ ನಿರ್ದೇಶದ ರಾಮ್ ಗೋಪಾಲ್ ವರ್ಮಾ ಸಹ ಅಮೆರಿಕ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚುನಾವಣೆ ಬಗ್ಗೆ ಪ್ರಿಯಾಂಕಾ ಕುತೂಹಲ ವ್ಯಕ್ತಪಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಹಾಸ್ಯ ಮಾಡಿದ್ದಾರೆ.

  ಹಲವು ಮತಗಳ ಲೆಕ್ಕ ಬಾಕಿ ಇದೆ: ಪ್ರಿಯಾಂಕಾ

  ಹಲವು ಮತಗಳ ಲೆಕ್ಕ ಬಾಕಿ ಇದೆ: ಪ್ರಿಯಾಂಕಾ

  'ಪ್ರತಿ ಮತ ಸಹ ಮೌಲ್ಯವಾದುದ್ದೇ, ಇನ್ನೂ ಹಲವು ಮತಗಳ ಲೆಕ್ಕಾಚಾರ ಬಾಕಿಯಿದೆ. ಇದು ಬಹಳ ಸುಧೀರ್ಘವಾದ ರಾತ್ರಿ ಎನಿಸುತ್ತದೆ' ಎಂದಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತಿರುವುದರಿಂದ ಅವರು ಹೀಗೆ ಹೇಳಿದ್ದಾರೆ.

  2020 ರ ಅನಿಶ್ಚಿತತೆ ಮುಂದುವರೆದಿದೆ: ಪ್ರಿಯಾಂಕಾ

  2020 ರ ಅನಿಶ್ಚಿತತೆ ಮುಂದುವರೆದಿದೆ: ಪ್ರಿಯಾಂಕಾ

  'ಕುಟುಂಬದೊಂದಿಗೆ ಲಾಸ್ ಏಂಜಲ್ಸ್ ನಲ್ಲಿ ಚುನಾವಣೆ ಫಲಿತಾಂಶ ನೋಡುತ್ತಿದ್ದೇನೆ, ಎಂದಿರುವ ಪ್ರಿಯಾಂಕಾ, 2020 ವರ್ಷದ ಅನಿಶ್ಚಿತತೆ ಇನ್ನೂ ಅಂತ್ಯವಾದಂತೆ ಕಾಣುತ್ತಿಲ್ಲ' ಎಂದಿದ್ದಾರೆ. ಬಿಡನ್ ಹಾಗೂ ಟ್ರಂಪ್ ನಡುವೆ ಹತ್ತಿರದ ಸ್ಪರ್ಧೆ ನಡೆದಿರುವುದಕ್ಕೆ ಪ್ರಿಯಾಂಕಾ ಹೀಗೆ ಹೇಳಿದ್ದಾರೆ.

  ನಗ್ನವಾಗಿ ಡಾನ್ಸ್ ಮಾಡಬೇಕೆನಿಸಿದೆ: ವರ್ಮಾ

  ನಗ್ನವಾಗಿ ಡಾನ್ಸ್ ಮಾಡಬೇಕೆನಿಸಿದೆ: ವರ್ಮಾ

  ಇತ್ತಕಡೆ ರಾಮ್ ಗೋಪಾಲ್ ವರ್ಮಾ ಸಹ ಅಮೆರಿಕ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ್ದು, 'ಬೆತ್ತಲೆಯಾಗಿ ರಸ್ತೆಯಲ್ಲಿ ಕುಣಿಯಬೇಕು ಎನಿಸುತ್ತಿದೆ, ಕೊನೆಗೂ ಈ ವಿಶ್ವವು ಜಿರಲೆ ಡೊನಾಲ್ಡ್ ಟ್ರಂಪ್‌ನಿಂದ ವಿಮುಕ್ತಿ ಪಡೆಯಿತು' ಎಂದಿದ್ದಾರೆ ವರ್ಮಾ. ಪ್ರಸ್ತುತ ಪ್ರಕಟಿತ ಫಲಿತಾಂಶದ ಪ್ರಕಾರ ಹಿನ್ನಡೆಯಲ್ಲಿರುವ ಟ್ರಂಪ್ ಅನ್ನು ಗೇಲಿ ಮಾಡಿ ಹಲವು ಟ್ವೀಟ್ ಮಾಡಿದ್ದಾರೆ ವರ್ಮಾ.

  Recommended Video

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada
  ಟ್ರಂಪ್‌ ಗೆ ಹಿನ್ನಡೆ, ಮುನ್ನಡೆಯಲ್ಲಿ ಬೈಡನ್

  ಟ್ರಂಪ್‌ ಗೆ ಹಿನ್ನಡೆ, ಮುನ್ನಡೆಯಲ್ಲಿ ಬೈಡನ್

  ಪ್ರಸ್ತುತ ಪ್ರಕಟವಾಗಿರುವ ಫಲಿತಾಂಶದಂತೆ ಜೋ ಬೈಡನ್ 238 ಎಲೆಕ್ಟೋರಲ್ ಮತ ಹಾಗೂ ಡೊನಾಲ್ಡ್ ಟ್ರಂಪ್ 213 ಮತ ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಲು 270 ಎಲೆಕ್ಟೋರಲ್ ಮತಗಳು ಅಗತ್ಯವಿದೆ. ಪೂರ್ಣ ಫಲಿತಾಂಶ ಪ್ರಕಟವಾಗಲು ಇನ್ನೂ ತಡವಾಗುತ್ತದೆ. ಶುಕ್ರವಾರ ಬಹುಷಃ ಪೂರ್ಣ ಫಲಿತಾಂಶ ಪ್ರಕಟವಾಗಬಹುದು.

  English summary
  Priyanka Chopra Insta post about US Election. She said 2020 's uncertainty continued.
  Wednesday, November 4, 2020, 23:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X