For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಿಂದ ಇಂಗ್ಲೆಂಡ್‌ಗೆ ವಾಸ್ತವ್ಯ ಬದಲಾಯಿಸಿದ ಪ್ರಿಯಾಂಕಾ ಚೋಪ್ರಾ

  |

  ನಿಕ್ ಜೋನಸ್ ಜೊತೆ ವಿವಾಹವಾದ ಮೇಲೆ ತಮ್ಮ ವಿಳಾಸವನ್ನು ಅಮೆರಿಕದ ಲಾಸ್ ಏಂಜಲ್ಸ್ ಗೆ ಬದಲಾಯಿಸಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.

  ಆದರೆ ಈಗ ಹಠಾತ್ತಾಗಿ ಅಮೆರಿಕ ಬಿಟ್ಟು ಇಂಗ್ಲೆಂಡ್‌ಗೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಹೌದು, ತಮ್ಮ ಲಾಸ್‌ ಏಂಜಲ್ಸ್ ನಿವಾಸ ಬಿಟ್ಟು ಲಂಡನ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ಪತಿ ನಿಕ್ ಜೋನಸ್ ಲಾಸ್ ಏಂಜಲ್ಸ್‌ ನಲ್ಲೇ ಇದ್ದಾರೆ.

  ಲಂಡನ್‌ಗೆ ವಾಸ್ತವ್ಯ ಬದಲಿಸಿರುವ ಪ್ರಿಯಾಂಕಾ ಚೋಪ್ರಾ ಕೇವಲ ಒಂದು ವರ್ಷವಷ್ಟೆ ಅಲ್ಲಿರಲಿದ್ದಾರೆ. ಆ ನಂತರ ಲಾಸ್ ಏಂಜಲ್ಸ್ ನ ತಮ್ಮ ನಿವಾಸಕ್ಕೆ ಮರಳಲಿದ್ದಾರೆ.

  ಒಂದು ವರ್ಷ ಲಂಡನ್‌ನಲ್ಲಿಯೇ ಇರಲಿದ್ದಾರೆ

  ಒಂದು ವರ್ಷ ಲಂಡನ್‌ನಲ್ಲಿಯೇ ಇರಲಿದ್ದಾರೆ

  ಲಂಡನ್‌ ನಲ್ಲಿ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಈಗಷ್ಟೆ ಚಿತ್ರೀಕರಣ ಮುಗಿಸಿರುವ ಪ್ರಿಯಾಂಕಾ, ನಂತರ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗಲಿರುವ ವೆಬ್ ಸರಣಿ ಒಂದರಲ್ಲಿ ನಟಿಸಲಿದ್ದಾರೆ. ಹಾಗಾಗಿ ಅದರ ಚಿತ್ರೀಕರಣ ಪೂರ್ಣವಾಗುವವರೆಗೂ ಲಂಡನ್‌ನಲ್ಲಿಯೇ ಉಳಿಯಲಿದ್ದಾರೆ.

  ತಾಯಿ ಹಾಗೂ ಮುದ್ದಿನ ನಾಯಿಯೊಂದಿಗೆ ಪ್ರಿಯಾಂಕಾ

  ತಾಯಿ ಹಾಗೂ ಮುದ್ದಿನ ನಾಯಿಯೊಂದಿಗೆ ಪ್ರಿಯಾಂಕಾ

  ಲಂಡನ್‌ನಲ್ಲಿ ಹೋಟೆಲ್‌ ಒಂದರಲ್ಲಿ ಉಳಿದಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ತಾಯಿಯನ್ನು ಅಲ್ಲಿಗೆ ಕರೆಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಗೂ ಅವರ ತಾಯಿಯ ಜೊತೆಗೆ ಪ್ರಿಯಾಂಕಾ ರ ಮುದ್ದಿನ ನಾಯಿ ಸಹ ಲಂಡನ್‌ನಲ್ಲಿಯೇ ಇದೆ.

  'ಟೆಕ್ಸ್ಟ್ ಫಾರ್ ಯು' ಸಿನಿಮಾ ಮುಗಿಸಿದ ಪ್ರಿಯಾಂಕಾ

  'ಟೆಕ್ಸ್ಟ್ ಫಾರ್ ಯು' ಸಿನಿಮಾ ಮುಗಿಸಿದ ಪ್ರಿಯಾಂಕಾ

  'ಟೆಕ್ಸ್ಟ್ ಫಾರ್ ಯು' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಪ್ರಿಯಾಂಕಾ. ಲಂಡನ್‌ ಹಾಗೂ ಸುತ್ತ-ಮುತ್ತಲ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು. ಕೆಲವು ದಿನಗಳ ಹಿಂದಷ್ಟೆ ಚಿತ್ರೀಕರಣ ಅಂತ್ಯವಾಗಿದೆ. ಚಿತ್ರೀಕರಣ ಸೆಟ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಪ್ರಿಯಾಂಕಾ.

  ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada
  'ಸಿಟಾಡೆಲ್' ವೆಬ್ ಸರಣಿಯಲ್ಲಿ ನಟನೆ

  'ಸಿಟಾಡೆಲ್' ವೆಬ್ ಸರಣಿಯಲ್ಲಿ ನಟನೆ

  ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿರುವ 'ಸಿಟಾಡೆಲ್' ಹೆಸರಿನ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ನಟಿ ಪ್ರಿಯಾಕಾ ಚೋಪ್ರಾ. ಥ್ರಿಲ್ಲರ್, ಆಕ್ಷನ್ ವೆಬ್ ಸರಣಿ ಆಗಿರುವ ಸಿಟಾಡೆಲ್‌ನಲ್ಲಿ 'ಗೇಮ್ ಆಫ್ ಥ್ರೋನ್ಸ್' ಸರಣಿ ಖ್ಯಾತಿಯ ನಟ ರಿಚರ್ಡ್ ಮ್ಯಾಡನ್ ಸಹ ನಟಿಸುತ್ತಿದ್ದಾರೆ.

  English summary
  Actress Priyanka Chopra moved to London from Los Angeles leaving her husband behind. She will stay in London for one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X