For Quick Alerts
  ALLOW NOTIFICATIONS  
  For Daily Alerts

  ಹೆಮ್ಮೆಯ ವಿಷಯ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

  |

  ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲಿ ಸೆಟಲ್ ಆಗಿ ಬಹುಕಾಲವಾಗಿದೆ. ಒಂದರ ಹಿಂದೊಂದು ಮಲ್ಟಿ ಸ್ಟಾರರ್ ಹಾಲಿವುಡ್ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ.

  ಪ್ರಿಯಾಂಕಾ ಹಾಲಿವುಡ್ ನಲ್ಲಿ ನಟಿಯಾಗಿ ಮಾತ್ರವೇ ಅಲ್ಲದೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮ ಸೇರಿದಂತೆ ಇನ್ನೂ ಕೆಲವು ಉದ್ದಿಮೆಗಳ ಒಡತಿ ಪ್ರಿಯಾಂಕಾ.

  ಪ್ರಿಯಾಂಕಾ ಕೆಲ ವರ್ಷಗಳ ಹಿಂದೆ ಅಮೆರಿಕದ ದುಬಾರಿ ನಗರ ನ್ಯೂ ಯಾರ್ಕ್ ನಲ್ಲಿ ಐಶಾರಾಮಿ ಹೋಟೆಲ್ ಒಂದನ್ನು ಸ್ಥಾಪಿಸಿ ಅದಕ್ಕೆ ಸೋನಾ ಎಂದು ಹೆಸರಿಟ್ಟಿದ್ದರು. ಸೋನಾ ನಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ತಾರೆಯರು ಹಲವು ಬಾರಿ ಆಹಾರ ಸೇವಿಸಿ ಹೋಟೆಲ್ ನ ಖಾದ್ಯಗಳನ್ನು ಸೇವೆಗಳನ್ನು ಮೆಚ್ಚಿಕೊಂಡಿದ್ದರು.

  ಇದೀಗ ಈ ಸೋನಾ ಹೋಟೆಲ್ ನ ಹಿರಿಮೆಗೆ ಮತ್ತೊಂದು ಗರಿ ಸೇರಿಸಿಕೊಂಡಿದೆ. ಅಮೆರಿಕದ ಗೌರವಾನ್ವಿತ ಮಿಶಿಲಿನ್ ಪಟ್ಟಿಗೆ ಪ್ರಿಯಾಂಕಾರ ಸೋನಾ ರೆಸ್ಟೊರೆಂಟ್ ಹೆಸರು ದಾಖಲಾಗಿದೆ.

  ಮಿಶಿಲಿನ್ ಗೈಡ್ ಎನ್ನುವುದು ವಿಶ್ವವಿಖ್ಯಾತಿ ಗಳಿಸಿರುವ ಬ್ರ್ಯಾಂಡ್ ಹಾಗೂ ರೇಟಿಂಗ್ ಸಂಸ್ಥೆ ಈ ಬಾರಿ ನ್ಯೂ ಯಾರ್ಕ್ ನ 30 ರೆಸ್ಟೋರೆಂಟ್ ಗಳು ಮಾತ್ರವೇ ಮಿಶಿಲಿನ್ ಗೈಡ್ ಪಟ್ಟಿಗೆ ಆಯ್ಕೆ ಆಗಿವೆ ಅದರಲ್ಲಿ ಪ್ರಿಯಾಂಕಾ ಚೋಪ್ರಾರ ರೆಸ್ಟೊರೆಂಟ್ ಸಹ ಒಂದು.

  ಮಿಶಿಲಿನ್ ಪ್ರಶಸ್ತಿ ಹಾಗೂ ಸ್ಟಾರ್ ರೇಟಿಂಗ್‌ ಗಾಗಿ ಸೋನಾ ರೆಸ್ಟೊರೆಂಟ್ ಉಳಿದ 29 ನ್ಯೂಯಾರ್ಕ್‌ ರೆಸ್ಟೊರೆಂಟ್ ಗಳ‌ ಜೊತೆ ಸೆಣೆಸಲಿದೆ.

  ಸೋನಾ ರೆಸ್ಟೊರೆಂಟ್ ಪ್ರಶಸ್ತಿ ಗೆಲ್ಲುತ್ತದೆಯೋ ಬಿಡುತ್ತದೆಯೋ ಆದರೆ ಮಿಶಿಲಿನ್ ನ ಟಾಪ್ 30 ಪಟ್ಟಿಯಲ್ಲಿ ಆಯ್ಕೆ ಆಗಿರುವುದೇ ಮಹತ್ತರ ಸಾಧನೆ. ತಮ್ಮ ರೆಸ್ಟೊರೆಂಟ್ ನ ಈ ಮಹತ್ತರ ಸಾಧನೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಹೋಟೆಲ್ ಉದ್ದಿಮೆ ಮಾತ್ರವೇ ಅಲ್ಲದೆ ಕೆಲವು ದಿನಗಳ ಹಿಂದೆ ಸೋನಾ ಹೆಸರಿನ ಗೃಹೋಪಯೋಗ ವಸ್ತುಗಳ ಆನ್ ಲೈನ್ ಮಾರಾಟ ಮಳಿಗೆಯನ್ನು ಸಹ ಪ್ರಾರಂಭಿಸಿದ್ದಾರೆ. ಈ ಮಳಿಗೆಯಲ್ಲಿ ಪ್ಲೇಟು, ಟೇಬಲ್ ಕ್ಲಾತ್ ಅಂಥಹಾ ಸಾಮಾನ್ಯ ವಸ್ತುಗಳಿಗೆ ಸಹ ಭಾರಿ ಬೆಲೆ ನಿಗದಿ ಪಡಿಸಲಾಗಿದೆ.

  ಪ್ರಿಯಾಂಕಾ ಚೋಪ್ರಾರ ಸೋನಾ ಹೋಮ್‌ನಲ್ಲಿ ಒಂದು ಟೇಬಲ್ ಕ್ಲಾತ್ (ಟೇಬಲ್‌ ಮೇಲೆ ಹೊದಿಸುವ ಬಟ್ಟೆ) ಬರೋಬ್ಬರಿ 398 ಡಾಲರ್. ಭಾರತೀಯ ರುಪಾಯಿಯಲ್ಲಿ 31 ಸಾವಿರಕ್ಕಿಂತೂ ಹೆಚ್ಚು. ಒಂದು ಸಣ್ಣ ಸೈಜಿನ ತಟ್ಟೆಯ ಬೆಲೆ 198 ಡಾಲರ್. ಭಾರತೀಯ ರುಪಾಯಿಯಲ್ಲಿ 15,700 ರುಪಾಯಿ! ಈ ವಸ್ತುಗಳು ಭಾರತೀಯ ರುಪಾಯಿಯಲ್ಲಿ ಮಾತ್ರವೇ ದುಬಾರಿಯಲ್ಲ ಡಾಲರ್ ತುಲನೆಯಲ್ಲಿಯೂ ದುಬಾರಿಯೇ. ಒಂದು ಟೇಬಲ್‌ ಕ್ಲಾತ್‌ಗೆ 388 ಡಾಲರ್ ಕೊಟ್ಟು ಸಾಮಾನ್ಯ ಅಮೆರಿಕನ್ನರು ಸಹ ಖರೀದಿಸಲಾರರು. ಅಂದಹಾಗೆ ಅಮೆರಿಕದಲ್ಲಿ ಒಂದು ಐಫೋನ್ 13 ಬೆಲೆ 799 ಡಾಲರ್. ಪ್ರಿಯಾಂಕಾರ ಎರಡು ಸೊನಾ ಹೋಮ್ ಟೇಬಲ್ ಕ್ಲಾತ್ ಬೆಲೆಗೆ ಒಂದು ಹೊಸ ಐಫೋನ್ 13 ಖರೀದಿಸಬಹುದು. ಸೋನಾ ಹೋಮ್‌ನ ಅತಿಯಾದ ಬೆಲೆಯ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಸಹ ಪ್ರಿಯಾಂಕಾ ಚೋಪ್ರಾ ಒಳಗಾಗಿದ್ದರು.

  ಸಿನಿಮಾ ವಿಷಯಕ್ಕೆ ಬರುವುದಾದರೆ ಪ್ರಿಯಾಂಕಾ ಚೋಪ್ರಾ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟೊಸುತ್ತಿದ್ದಾರೆ. ಇದನ್ನು ಖ್ಯಾತ ನಿರ್ದೇಶಕರಾದ ರೂಸ್ಸೋ ಬ್ರದರ್ಸ್ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿಯ 'ಜೀ ಲೇ ಝರಾ' ಹಾಗೂ ಕಲ್ಪನಾ ಚಾವ್ಲಾ ಜೀವನ ಆಧರಿತ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  English summary
  Actress Priyanka Chopra's New York restaurant Sona gets Michelin recognition. Actress shared on the social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X